ಬೆಂಗಳೂರು: ಮುಂಬರುವ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಹರಾಜು ಪ್ರಕ್ರಿಯೆ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಮೂವರು ಆಟಗಾರರನ್ನು ತನ್ನ ಬಳಿಯೇ ಉಳಿಸಿಕೊಂಡಿದೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತ ಘೋಷಣೆ ಮಾಡಿದೆ.

ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಜೊತೆಗೆ ರಜತ್ ಪಾಟೀದಾರ್ ಮತ್ತು ಯಶ್ ದಯಾಳ್ ಅವರನ್ನು ಆರ್ಸಿಬಿ ತನ್ನ ಬಳಿಯೇ ಉಳಿಸಿಕೊಂಡಿದೆ.

ಕೊಹ್ಲಿ ಅವರಿಗೆ ಗರಿಷ್ಠ ₹21 ಕೋಟಿ, ಪಾಟೀದಾರ್ಗೆ ₹11 ಕೋಟಿ ಮತ್ತು ದಯಾಳ್ಗೆ ₹5 ಕೋಟಿ ನಿಗದಿಪಡಿಸಿದೆ.

ಪರ್ಸ್ನಲ್ಲಿ ಉಳಿದಿರುವ ₹83 ಕೋಟಿಯೊಂದಿಗೆ ಆರ್ಸಿಬಿ ಹರಾಜಿನಲ್ಲಿ ತನ್ನ ರಣತಂತ್ರವನ್ನು ರೂಪಿಸಬೇಕಿದೆ.

ಕಳೆದ ಬಾರಿ ತಂಡವನ್ನು ಮುನ್ನಡೆಸಿರುವ ಫಫ್ ಡುಪ್ಲೆಸಿ ಮತ್ತು ಬಲಗೈ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಹರಾಜಿಗೆ ಬಿಟ್ಟುಕೊಡಲು ಆರ್ಸಿಬಿ ನಿರ್ಧರಿಸಿದೆ.

ಕೊಹ್ಲಿಗೆ ನಾಯಕತ್ವ?

ಐಪಿಎಲ್ 2025ರಲ್ಲಿ ವಿರಾಟ್ ಕೊಹ್ಲಿ ನಾಯಕರಾಗಿ ಮರುನೇಮಕಗೊಳ್ಳುವ ಸಾಧ್ಯತೆಗಳು ದಟ್ಟವಾಗಿ ಕಾಣಿಸುತ್ತಿವೆ.

ಈ ಕುರಿತು ಬಲ್ಲ ಮೂಲಗಳಿಂದ ಈಗಾಗಲೇ ವರದಿಗಳು ಬಂದಿವೆ. ಆದರೆ ಆರ್ಸಿಬಿ ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ.

ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಡಿಸೆಂಬರ್ನಲ್ಲಿ ನಡೆಯಲಿದ್ದು, ಎಲ್ಲ 10 ತಂಡಗಳಿಗೆ ಆಟಗಾರರನ್ನು ಉಳಿಸಿಕೊಳ್ಳಲು ಇಂದು ಕೊನೆಯ ದಿನವಾಗಿದೆ.
.ಐಪಿಎಲ್: ಇಂಪ್ಯಾಕ್ಟ್ ಪ್ಲೇಯರ್ ಮುಂದುವರಿಕೆ.IPL 2025 | ಮೆಗಾ ಹರಾಜು: ಐಪಿಎಲ್ ಫ್ರಾಂಚೈಸಿಗಳ ಭಿನ್ನ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.