ಮುಂಬೈ:ಭಾರತದ ಅತ್ಯುತ್ತಮ ಅಂತರರಾಷ್ಟ್ರೀಯ ಕ್ರಿಕೆಟಿಗ (2018-19) ಎಂಬ ಹೆಗ್ಗಳಿಕೆಗೆವೇಗದ ಬೌಲರ್ ಜಸ್ಪ್ರೀತ್ ಬೂಮ್ರಾಪಾತ್ರರಾಗಿದ್ದಾರೆ. ಮುಂಬೈನಲ್ಲಿ ಭಾನುವಾರ ನಡೆಯಲಿರುವ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಪ್ರತಿಷ್ಠಿತ ಪಾಲಿಉಮ್ರಿಗರ್ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ವಿಶ್ವದ ನಂಬರ್ 1 ಏಕದಿನ ಬೌಲರ್ ಎನಿಸಿರುವ ಬೂಮ್ರಾ 2018ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.ಅಂದಿನಿಂದ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. 2018ರ ಆರಂಭದಿಂದಲೂ ಬೂಮ್ರಾ ಅದ್ಭುತ ಫಾರ್ಮ್ನಲ್ಲಿದ್ದಾರೆ.

ಇಲ್ಲಿಯವರೆಗೆ ಆಡಿರುವ 12 ಪಂದ್ಯಗಳ 17 ಇನಿಂಗ್ಸ್ಗಳಿಂದ19.24ರ ಸರಾಸರಿಯಲ್ಲಿ 62 ವಿಕೆಟ್ ಪಡೆದಿರುವ ಬೂಮ್ರಾ, ಅತಿ ವೇಗವಾಗಿ ರ್ಯಾಂಕಿಂಗ್ನಲ್ಲಿಯೂ ಮೇಲೇರಿದ್ದಾರೆ. ಟೆಸ್ಟ್ ಬೌಲರ್ಗಳ ರ್ಯಾಂಕಿಂಗ್ನಲ್ಲಿ ಆರನೇ ಸ್ಥಾನದಲ್ಲಿದ್ದಾರೆ.

2018ರಿಂದ ಈಚೆಗೆದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ನಲ್ಲಿ ತಲಾ ಐದು ವಿಕೆಟ್ ಕಬಳಿಸಿದಏಷ್ಯಾದ ಮೊದಲ ಬೌಲರ್ ಎಂಬ ಹೆಗ್ಗಳಿಕೆ ಬೂಮ್ರಾ ಅವರದು. ರವಿಚಂದ್ರನ್ ಅಶ್ವಿನ್ ಮತ್ತು ಯುಜುವೇಂದ್ರ ಚಾಹಲ್ ಅವರನ್ನು ಹಿಂದಿಕ್ಕಿ ಟಿ20 ಕ್ರಿಕೆಟ್ನಲ್ಲೂ ಹೆಚ್ಚು ವಿಕೆಟ್ ಪಡೆದಭಾರತದ ಬೌಲರ್ ಆಗಿದ್ದಾರೆ.

ಬೂಮ್ರಾ ಪುರುಷರ ವಿಭಾಗದಲ್ಲಿ ಪ್ರತಿಷ್ಟಿತ ಪಾಲಿ ಉಮ್ರಿಗರ್ ಪ್ರಶಸ್ತಿಗೆ ಭಾಜನವಾಗಿದ್ದರೆ, ಮಹಿಳೆಯರ ವಿಭಾಗದಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿಯಾಗಿ ಲೆಗ್ ಸ್ಪಿನ್ನರ್ ಪೂನಮ್ ಯಾದವ್ಆಯ್ಕೆಯಾಗಿದ್ದಾರೆ. 2019ರಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಂದು ಪೂನಂಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅರ್ಜುನ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು. ಅಂತರಾಷ್ಟ್ರೀಯ ಟಿ20ಗಳಲ್ಲಿ ಎರಡನೇ ರ್ಯಾಂಕ್ನಲ್ಲಿರುವಪೂನಮ್, ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿದ್ದಾರೆ.

ಮಾಜಿ ನಾಯಕ ಕೃಷ್ಣಮಚಾರಿ ಶ್ರೀಕಾಂತ್ ಅವರಿಗೆ ಸಿ.ಕೆ.ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ ಮತ್ತು ಅಂಜುಮ್ ಚೋಪ್ರಾ ಕಲೋನೆಲ್ ಅವರಿಗೆಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿ, ಬಿಸಿಸಿಐ ಪ್ರಶಸ್ತಿಗಳು ಕಿರಿಯ ವಯೋಮಾನದವರಿಂದ ಹಿಡಿದು ಹಿರಿಯ ಹಂತದವರೆಗಿನ ಅತ್ಯುತ್ತಮ ಪ್ರದರ್ಶನ ನೀಡಿದವರನ್ನುಗುರುತಿಸುವ ಮತ್ತು ದಂತಕಥೆಗಳನ್ನು ಗೌರವಿಸುವ ಬಗೆಯಾಗಿದೆ.ಮುಂಬೈನಲ್ಲಿ ನಡೆಯುವ ಸಮಾರಂಭ ಆಕರ್ಷಕವಾಗಿರುತ್ತದೆ.ಎಂ.ಎ.ಕೆ. ಪಟೌಡಿ ಉಪನ್ಯಾಸವನ್ನುವೀರೇಂದ್ರ ಸೆಹ್ವಾಗ್ ನೀಡಲಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.