ಸೇಂಟ್ ಜಾನ್ಸ್: ಭಾರತದ ವಿರುದ್ಧ ಫೆಬ್ರುವರಿಯಲ್ಲಿ ಕೋಲ್ಕತ್ತದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟ್ವೆಂಟಿ-20 ಕ್ರಿಕೆಟ್ ಸರಣಿಗೆ ವೆಸ್ಟ್ ಇಂಡೀಸ್ ತಂಡ ಪ್ರಕಟಗೊಂಡಿದೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಡಿದ ಹೆಚ್ಚಿನ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.

ಕೀರನ್ ಪೊಲಾರ್ಡ್ ಅವರಿಗೆ ನಾಯಕತ್ವ ವಹಿಸಲಾಗಿದೆ. ನಿಕೋಲಸ್ ಪೂರನ್ ಉಪನಾಯಕರಾಗಿ ಇರಲಿದ್ದಾರೆ. ಅಹಮದಾಬಾದ್ನಲ್ಲಿ ಏಕದಿನ ಸರಣಿ ಮುಕ್ತಾಯಗೊಂಡ ಬಳಿಕ ಫೆಬ್ರುವರಿ 16ರಿಂದ ಟ್ವೆಂಟಿ-20 ಸರಣಿ ಆರಂಭಗೊಳ್ಳಲಿದೆ.

ವಿಂಡೀಸ್ ಎದುರಿನ ಸರಣಿಗೆ ತಂಡ: ರವಿ ಬಿಷ್ಣೋಯಿಗೆ ಸ್ಥಾನ; ಮರಳಿದ ಕುಲದೀಪ್

ಏಕದಿನ ತಂಡದಲ್ಲಿ ಸ್ಥಾನ ಪಡೆದಿರುವ ಶಮರ್ ಬ್ರೂಕ್ಸ್, ಎನ್ಕ್ರುಮಾ ಬೊನ್ನರ್, ಕೆಮರ್ ರೋಚ್ಗೆ ಟ್ವೆಂಟಿ-20 ಸರಣಿಯಲ್ಲೂ ತಂಡಲ್ಲಿ ಆಡುವ ಅವಕಾಶ ದೊರೆತಿದೆ.

ಪೊಲಾರ್ಡ್, ಜೇಸನ್ ಹೋಲ್ಡರ್, ರೊವ್ಮನ್ ಪೊವೆಲ್ ಸೇರಿದಂತೆ ಅನೇಕ ಆಲ್ ರೌಂಡರ್ಗಳನ್ನು ತಂಡ ಒಳಗೊಂಡಿದೆ.

ಭಾರತ ವಿರುದ್ಧ ಏಕದಿನ ಸರಣಿಗೆ ವಿಂಡೀಸ್ ತಂಡ ಪ್ರಕಟ; ಮರಳಿದ ಕೆಮರ್ ರೋಚ್

ಏಕದಿನ ಕ್ರಿಕೆಟ್ ಸರಣಿಗೆ ವೆಸ್ಟ್ ಇಂಡೀಸ್ ಈಗಾಗಲೇ ತಂಡವನ್ನು ಪ್ರಕಟಿಸಿದೆ. ಸರಣಿಯು ಫೆಬ್ರುವರಿ 6ರಿಂದ 11ರ ವರೆಗೆ ನಡೆಯಲಿದೆ.

ವೆಸ್ಟ್ ಇಂಡೀಸ್ ತಂಡ

ಕೀರನ್ ಪೊಲಾರ್ಡ್ (ನಾಯಕ), ನಿಕೋಲಸ್ ಪೂರನ್ (ಉಪ ನಾಯಕ), ಫ್ಯಾಬಿಯನ್ ಅಲೆನ್, ಡ್ಯಾರೆನ್ ಬ್ರಾವೊ, ರಾಸ್ಟನ್ ಚೇಸ್, ಶೆಲ್ಡನ್ ಕಾಟ್ರೆಲ್, ಡೊಮಿನಿಕ್ ಡ್ರೇಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೇಲ್ ಹೋಸೇನ್, ಬ್ರಾಂಡನ್ ಕಿಂಗ್, ರೊವ್ಮನ್ ಪೊವೆಲ್, ಒಡೀನ್ ಸ್ಮಿತ್, ರೊಮಾರಿಯೋ ಶೆಫರ್ಡ್, ಕೈಲ್ ಮೇಯರ್ಸ್, ಹೇಡನ್ ವಾಲ್ಷ್.

ಏಕದಿನ ಪಂದ್ಯಗಳ ವೇಳಾಪಟ್ಟಿ

ಫೆ. 06, ಭಾನುವಾರ: ಮೊದಲ ಏಕದಿನ, ಅಹಮದಾಬಾದ್
ಫೆ. 09, ಬುಧವಾರ: ದ್ವಿತೀಯ ಏಕದಿನ, ಅಹಮದಾಬಾದ್
ಫೆ. 11, ಶುಕ್ರವಾರ: ಅಂತಿಮ ಏಕದಿನ, ಅಹಮದಾಬಾದ್

ಟ್ವೆಂಟಿ-20 ಪಂದ್ಯಗಳ ವೇಳಾಪಟ್ಟಿ

ಫೆ. 16, ಬುಧವಾರ: ಮೊದಲ ಟ್ವೆಂಟಿ-20, ಕೋಲ್ಕತ್ತ
ಫೆ. 18, ಶುಕ್ರವಾರ: ದ್ವಿತೀಯ ಟ್ವೆಂಟಿ-20, ಕೋಲ್ಕತ್ತ
ಫೆ. 20, ಭಾನುವಾರ: ಅಂತಿಮ ಟ್ವೆಂಟಿ-20, ಕೋಲ್ಕತ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.