ನವದೆಹಲಿ: ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕವು ಐದು ತಿಂಗಳುಗಳಲ್ಲಿ 55 ಕ್ರಿಕೆಟಿಗರನ್ನು ಪರೀಕ್ಷೆಗೊಳಪಡಿಸಿದೆ. ಆಲ್‌ರೌಂಡರ್ ರವೀಂದ್ರ ಜಡೇಜ ಅವರಿಂದ ಅತಿ ಹೆಚ್ಚು ಮಾದರಿಗಳನ್ನು ಸಂಗ್ರಹಿಸಲಾಗಿದೆ.

ಈ ವರ್ಷದ ಜನರಿಯಿಂದ ಮೇ ಅಂತ್ಯದವರೆಗೆ ಪುರುಷ ಮತ್ತು ಮಹಿಳಾ ಕ್ರಿಕೆಟಿಗರ ಒಟ್ಟು 58 ಮಾದರಿಗಳನ್ನು ಅದರಲ್ಲಿ ಅರ್ಧದಷ್ಟು ಸಂಖ್ಯೆಯ ಮಾದರಿಗಳನ್ನು ಸ್ಪರ್ಧೆಗಳಿಲ್ಲದ ಸಂದರ್ಭದಲ್ಲಿ ಪಡೆಯಲಾಗಿದೆ. ಆದರೆ ಪ್ರಮುಖ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಂದ ಸ್ಯಾಂಪಲ್ ಪಡೆದಿಲ್ಲ. 2021 ಮತ್ತು 2022ರಲ್ಲಿಯೂ ಅವರ ಮಾದರಿಗಳನ್ನು ಪಡೆದಿರಲಿಲ್ಲ.

ಆದರೆ ಜಡೇಜ ಅವರನ್ನು ಫೆಬ್ರುವರಿ 19, ಮಾರ್ಚದ 26 ಮತ್ತು ಏಪ್ರಿಲ್ 26ರಂದು ಪರೀಕ್ಷೆಗೊಳಪಡಿಸಲಾಗಿದೆ. ವೇಗದ ಬೌಲರ್ ತಂಗರಸು ನಟರಾಜನ್ ಅವರಿಂದ ಏಪ್ರಿಲ್ 27ರಂದು ಮೂತ್ರ ಹಾಗೂ ರಕ್ತದ ಮಾದರಿಗಳನ್ನು ಪಡೆಯಲಾಗಿದೆ. ಟಿ20 ತಂಡದ ನಾಯಕತ್ವ ವಹಿಸಿರುವ ಹಾರ್ದಿಕ್ ಪಾಂಡ್ಯ ಅವರ ಮೂತ್ರದ ಮಾದರಿಯನ್ನು ಕಳೆದ ಏಪ್ರಿಲ್‌ನಲ್ಲಿ ಪರೀಕ್ಷೆಗಾಗಿ ಸಂಗ್ರಹಿಸಲಾಗಿತ್ತು.

ಸೂರ್ಯಕುಮಾರ್ ಯಾದವ್, ಕೆ.ಎಲ್. ರಾಹುಲ್, ಇಶಾನ್ ಕಿಶನ್, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್, ಮಯಂಕ್ ಅಗರವಾಲ್, ರಾಹುಲ್ ತ್ರಿಪಾಠಿ, ಭುವನೇಶ್ವರ್ ಕುಮಾರ್, ವೃದ್ಧಿಮಾನ್ ಸಹಾ, ದಿನೇಶ್ ಕಾರ್ತಿಕ್, ಯಶಸ್ವಿ ಜೈಸ್ವಾಲ್, ಅಂಬಟಿ ರಾಯುಡು, ಪಿಯೂಷ್ ಚಾವ್ಲಾ ಮತ್ತು ಮನೀಷ್ ಪಾಂಡೆ ಅವರಿಂದಲೂ ನಾಡಾ ಸ್ಯಾಂಪಲ್ ಸಂಗ್ರಹಿಸಿದೆ.

ಐಪಿಎಲ್‌ನಲ್ಲಿ ಆಡಿದ ವಿದೇಶಿ ಆಟಗಾರರಾದ ಡೇವಿಡ್ ವೀಸ್, ಡೇವಿಡ್ ಮಿಲ್ಲರ್, ಕ್ಯಾಮರಾನ್ ಗ್ರೀನ್, ಸುನಿಲ್ ನಾರಾಯಣ, ಆ್ಯಂಡ್ರೆ ರಸೆಲ್, ಡೇವಿಡ್ ವಾರ್ನರ್, ರಶೀದ್ ಖಾನ್, ಡೇವಿಡ್ ವಿಲಿ, ಟ್ರೆಂಟ್ ಬೌಲ್ಟ್, ಮಾರ್ಕಸ್ ಸ್ಟೊಯಿನಿಸ್, ಮಾರ್ಕ್ ವುಡ್, ಆ್ಯಡಂ ಜಂಪಾ, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜೋಫ್ರಾ ಆರ್ಚರ್ ಅವರನ್ನೂ ಪರೀಕ್ಷಿಸಲಾಗಿದೆ.

ಈ ವರ್ಷದಲ್ಲಿ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಉಪನಾಯಕಿ ಸ್ಮೃತಿ ಮಂದಾನ ಅವರನ್ನೂ ತಲಾ ಒಂದು ಬಾರಿ ಪರೀಕ್ಷೆಗೊಳಪಡಿಸಲಾಗಿದೆ. 2022ರಲ್ಲಿ ಮಹಿಳಾ ಕ್ರಿಕೆಟಿಗರಿಂದ 20 ಸ್ಯಾಂಪಲ್ ಪಡೆಯಲಾಗಿತ್ತು.

ಇದೇ ಅವಧಿಯಲ್ಲಿ ಬೇರೆ ಕ್ರೀಡೆಗಳ ಖ್ಯಾತನಾಮ ಕ್ರೀಡಾಪಟುಗಳಿಂದಲೂ ಸ್ಯಾಂಪಲ್ ಸಂಗ್ರಹ ಮಾಡಲಾಗಿದೆ. ಅವರಲ್ಲಿ ಒಲಿಂಪಿಯನ್ ಮಿರಾಬಾಯಿ ಚಾನು, ಲವ್ಲಿನಾ ಬೊರ್ಗೊಹೈನ್, ಸೈನಾ ನೆಹ್ವಾಲ್, ಕಿದಂಬಿ ಶ್ರೀಕಾಂತ್, ಬಜರಂಗ್ ಪೂನಿಯಾ, ವಿನೇಶಾ ಫೋಗಟ್, ಹರ್ಮನ್‌ಪ್ರೀತ್ ಸಿಂಗ್, ಪಿ.ಆರ್. ಶ್ರೀಜೇಶ್ ಮತ್ತು ಸವಿತಾ ಪೂನಿಯಾ ಪ್ರಮುಖರಾಗಿದ್ದಾರೆ.

ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌ಗಳಿಂದ 500, ವೇಟ್‌ಲಿಫ್ಟಿಂಗ್ 200, ಬಾಕ್ಸಿಂಗ್ 100, ಶೂಟಿಂಗ್ 70, ಕುಸ್ತಿ 70, ಫುಟ್‌ಬಾಲ್ 50 ಮತ್ತು ಹಾಕಿ ಕ್ರೀಡಾಪಟುಗಳಿಂದ 50 ಮಾದರಿಗಳನ್ನು ಸಂಗ್ರಹಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.