ದುಬೈ(ಪಿಟಿಐ): ಗಾಯದ ನೋವು ಸಹಿಸಿಕೊಂಡು ಆಡಿದ ಮೊಹಮ್ಮದ್ ರಿಜ್ವಾನ್ ಪಾಕಿಸ್ತಾನ ತಂಡವು ಏಷ್ಯಾ ಕಪ್ ಟಿ20 ಟೂರ್ನಿಯ ಸೂಪರ್ ಫೋರ್ ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಜಯಕ್ಕೆ ಕಾರಣರಾದರು.

ದುಬೈ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ಪಾಕ್ ತಂಡವು 5 ವಿಕೆಟ್‌ಗಳಿಂದ ಗೆದ್ದಿತು. ವಿರಾಟ್ ಕೊಹ್ಲಿ ಅರ್ಧಶತಕದ (60; 44ಎ) ಬಲದಿಂದ ಭಾರತ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 181 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಪಾಕ್ ತಂಡವು 19.5 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 182 ರನ್ ಗಳಿಸಿ ಗೆದ್ದಿತು.

ಪಾಕ್ ತಂಡದ ರಿಜ್ಷಾನ್ ವಿಕೆಟ್ ಕೀಪಿಂಗ್ ಮಾಡುವಾಗಲೇ ಬಲಗಾಲಿಗೆ ಪೆಟ್ಟುಮಾಡಿಕೊಂಡು ಚಿಕಿತ್ಸೆ ಪಡೆದಿದ್ದರು. ಬ್ಯಾಟಿಂಗ್ ಮಾಡುವಾಗಲೂ ಈ ನೋವು ಅವರನ್ನು ಕಾಡಿತು. ಆದರೆ, ಭಾರತದ ಬೌಲರ್‌ಗಳ ಎಸೆತಗಳನ್ನು ಅವರು ಲೀಲಾಜಾಲವಾಗಿ ಎದುರಿಸಿದರು. ಯುವ ಸ್ಪಿನ್ನರ್ ರವಿ ಬಿಷ್ಣೋಯಿ ಬೌಲಿಂಗ್‌ನಲ್ಲಿ ಬಾಬರ್ ಆಜಂ ಹಾಗೂ ಅನುಭವಿ ಸ್ಪಿನ್ನರ್ ಯಜುವೇಂದ್ರ ಚಾಹಲ್ ಎಸೆತದಲ್ಲಿ ಫಕರ್ ಜಮಾನ್ ಔಟಾದರು. ಈ ಹಂತದಲ್ಲಿ ರಿಜ್ವಾನ್ (71; 51ಎ) ಹಾಗೂ ಮೊಹಮ್ಮದ್ ನವಾಜ್ (42; 20ಎ) ಜೊತೆಗೂಡಿ 72 ರನ್ ಸೇರಿಸಿದರು. 16ನೇ ಓವರ್‌ನವರೆಗೂ ಇವರ ಆಟ ನಡೆಯಿತು. ಭುವನೇಶ್ವರ್ ಬೌಲಿಂಗ್‌ನಲ್ಲಿ ನವಾಜ್ ಔಟಾದಾಗ ಭಾರತವು ಮತ್ತೆ ಗೆಲುವಿನ ಆಸೆ ಜೀವಂತವಾಯಿತು. ನಂತರದ ಓವರ್‌ನಲ್ಲಿಯೇ ರಿಜ್ವಾನ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದ ಹಾರ್ದಿಕ್ ಭಾರತದ ವಿಶ್ವಾಸ ಹೆಚ್ಚಿಸಿದರು.

ಆದರೆ, ರವಿ ಹಾಕಿದ 18ನೇ ಓವರ್‌ನಲ್ಲಿ ಆರ್ಷದೀಪ್ ಸುಲಭ ಕ್ಯಾಚ್ ಕೈಚೆಲ್ಲಿ ಆಸಿಫ್‌ಗೆ ಜೀವದಾನ ಕೊಟ್ಟರು. ಆಸಿಫ್ ಉಪಯುಕ್ತ ಕಾಣಿಕೆ ನೀಡಿದರು. ತಂಡ ಗೆಲುವಿನ ಸನಿಹ ಸಾಗಿತು.

ಆರ್ಷದೀಪ್ ಅವರೇ ಹಾಕಿದ ಕೊನೆಯ ಓವರ್‌ನಲ್ಲಿ ಪಾಕ್ ತಂಡಕ್ಕೆ ಗೆಲುವಿಗಾಗಿ ಏಳು ರನ್‌ಗಳ ಅಗತ್ಯವಿತ್ತು. ಮೊದಲ ಎಸೆತದಲ್ಲಿ ಖುಷದಿಲ್ ಒಂದು ರನ್ ಗಳಿಸಿದರು. ಎರಡನೇ ಎಸೆತವನ್ನು ಆಸಿಫ್ ಬೌಂಡರಿಗೆರೆ ದಾಟಿಸಿದರು. ಮೂರನೇ ಎಸೆತವನ್ನು ಡಾಟ್ ಮಾಡಿದ ಆರ್ಷದೀಪ್, ನಂತರ ಯಾರ್ಕರ್ ಎಸೆತದಲ್ಲಿ ಆಸಿಫ್ ಅವರನ್ನು ಎಲ್‌ಬಿ ಬಲೆಗೆ ಕೆಡವಿದರು. ಕೊನೆಯ ಎರಡು ಎಸೆತಗಳಲ್ಲಿ ಎರಡು ರನ್‌ಗಳಷ್ಟೇ ಬೇಕಾಗಿತ್ತು. ಆರ್ಷದೀಪ್ ಹಾಕಿದ ಫುಲ್‌ಟಾಸ್ ಎಸೆತವನ್ನು ಹೊಡೆದು ಎರಡು ರನ್ ಗಳಿಸಿದ ಇಫ್ತಿಕಾರ್ ಅಹಮದ್ ಸಂಭ್ರಮಿಸಿದರು.

ರೋಹಿತ್–ರಾಹುಲ್ ಅಬ್ಬರ:ಆರಂಭಿಕ ಜೋಡಿ ರೋಹಿತ್ ಶರ್ಮಾ (28; 20ಎ) ಹಾಗೂ ಕೆ.ಎಲ್. ರಾಹುಲ್ (28; 16ಎ) ಅಮೋಘ ಆರಂಭ ನೀಡಿದರು.ಇಬ್ಬರೂ ಸೇರಿ ಐದು ಓವರ್‌ಗಳಲ್ಲಿ 54 ರನ್ ಗಳಿಸಿದರು.

ಇವರಿಬ್ಬರೂ ಔಟಾದ ನಂತರ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ನಿರೀಕ್ಷಿತ ರೀತಿಯಲ್ಲಿ ಆಡಲಿಲ್ಲ. ವಿರಾಟ್ ಕೊಹ್ಲಿ ತಮ್ಮ ಅಮೋಘ ಆಟದಿಂದ ಇನಿಂಗ್ಸ್‌ಗೆ ಬಲ ತುಂಬಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.