ಬೆಂಗಳೂರು: ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ದಂಪತಿಗೆ ಗಂಡು ಮಗು ಜನಿಸಿದೆ. ಈ ಮಗುವಿಗೆ 'ಅಕಾಯ್' ಎಂದು ನಾಮಕರಣ ಮಾಡಲಾಗಿದೆ.

ಈ ವಿವರವನ್ನು ಸ್ವತಃ ವಿರಾಟ್ ಕೊಹ್ಲಿ ಅವರೇ ಸಾಮಾಜಿಕ ಮಾಧ್ಯಮಗಳ ಮೂಲಕ ಬಹಿರಂಗಪಡಿಸಿದ್ದಾರೆ. 'ನಮ್ಮ ಹೃದಯ ಅತೀವ ಸಂತೋಷ ಹಾಗೂ ಪ್ರೀತಿಯಿಂದ ತುಂಬಿದೆ. ವಮಿಕಾಳ (ಮೊದಲ ಮಗು) ತಮ್ಮ 'ಅಕಾಯ್'ಗೆ (Akaay) ಫೆಬ್ರುವರಿ 15ರಂದು ಈ ಜಗತ್ತಿಗೆ ಸ್ವಾಗತ ಕೋರಿದ್ದೇವೆ ಎಂದು ತಿಳಿಸಲು ಹರ್ಷಿಸುತ್ತೇವೆ. ನಮ್ಮ ಜೀವನದ ಈ ಸುಂದರ ಸಮಯದಲ್ಲಿ ನಿಮ್ಮೆಲ್ಲರ ಆಶೀರ್ವಾದ ಹಾಗೂ ಶುಭ ಹಾರೈಕೆಗಳನ್ನು ಬಯಸುತ್ತೇವೆ. ಅದೇ ವೇಳೆ ನಮ್ಮ ಗೋಪ್ಯತೆಯನ್ನು ಗೌರವಿಸಲು ವಿನಂತಿಸುತ್ತೇವೆ' ಎಂದು ವಿರಾಟ್ ಕೊಹ್ಲಿ ಬರೆದುಕೊಂಡಿದ್ದಾರೆ.

ಈ ವಿಷಯ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗಿದೆ. ಕೊಹ್ಲಿ ಪೋಸ್ಟ್ ಹಾಕಿದ ಒಂದೇ ಗಂಟೆಯಲ್ಲಿ 50 ಲಕ್ಷಕ್ಕೂ ಹೆಚ್ಚು ಲೈಕ್ಗಳು ಬಂದಿವೆ. ಹಾಗೇ ಇಂಟರ್ನೆಟ್ನಲ್ಲಿ ‘ಅಕಾಯ್‘ ಪದದ ಅರ್ಥವನ್ನು ಲಕ್ಷಾಂತರ ಜನರು ಹುಡುಕುತ್ತಿದ್ದಾರೆ ಇದು ಕೂಡ ಗೂಗಲ್ನಲ್ಲಿ ಟ್ರೆಂಡ್ ಆಗಿದೆ.

ಅಕಾಯ್ ಪದದ ಅರ್ಥ...

ಅಕಾಯ್ ಎಂಬ ಪದ ಟರ್ಕಿ ಮೂಲದಿಂದ ಬಂದಿರುವ ಹಿಂದಿ ಪದವಾಗಿದೆ. ಅಕೇ (ಟರ್ಕಿ) ಮತ್ತು ಕಾಯ (ಹಿಂದಿ) ಪದಗಳು ಸೇರಿ ಅಕಾಯ್ ಆಗಿದೆ ಎಂದು ಹಿಂದಿ ಭಾಷೆಯ ಕೆಲ ತಜ್ಞರು ಹೇಳುತ್ತಿದ್ದಾರೆ. ಟರ್ಕಿಯಲ್ಲಿ 'ಅಕೇ' ಎಂದರೆ ಹೊಳೆಯುವ ಚಂದಿರ ಹಾಗೂ ಭೌತಿಕ ಆಕಾರವನ್ನು ಮೀರಿದ್ದು ಎಂಬ ಅರ್ಥ ಬರುತ್ತದೆ.

ಸಂಸ್ಕೃತದಲ್ಲಿ 'ಅಕಾಯ್' ಎಂದರೆ ದೇಹವಿಲ್ಲದ್ದು, ನಿರಾಕಾಯ ಎಂಬ ಅರ್ಥ ಬರುತ್ತದೆ. ಸಂಸ್ಕೃತ ಪದಕೋಶದ 'ಆಪ್ಟೆ' ಪ್ರಕಾರ, ಇದು ಬ್ರಹ್ಮನ ಹೆಸರಾಗಿದೆ. ಏಕೆಂದರೆ ಬ್ರಹ್ಮದೇವನಿಗೆ ದೇಹವಿಲ್ಲ. ಶಿವಪುರಾಣದಲ್ಲಿ ಹೇಳಿರುವಂತೆ 'ಅಕಾಯ್' ಎಂಬುದು ಶಿವನ ಹೆಸರಾಗಿದೆ.

ಆದಾಗ್ಯೂ, ಕೊಹ್ಲಿ ಮತ್ತು ಅನುಷ್ಕಾ ತಮ್ಮ ಮಗುವಿಗೆ ಇಟ್ಟಿರುವ ಹೆಸರಿನ ಪದದ ಅರ್ಥವನ್ನು ಖಚಿತಪಡಿಸಿಲ್ಲ. ನೆಟ್ಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ 'ಅಕಾಯ್' ಪದದ ಅರ್ಥದ ಬಗ್ಗೆ ತಮ್ಮದೇ ವಿವರಣೆ ನೀಡುತ್ತಿದ್ದಾರೆ.
.ಕೊಹ್ಲಿ-ಅನುಷ್ಕಾ ದಂಪತಿಗೆ ಗಂಡು ಮಗು ಜನನ; ಊಹಾಪೋಹಗಳಿಗೆ ತೆರೆ.ಹೆಣ್ಣು ಮಗುವಿಗೆ ಜನ್ಮ ನೀಡಿದ ಅನುಷ್ಕಾ ಶರ್ಮಾ; ವಿರಾಟ್ ಕೊಹ್ಲಿ ಸಂಭ್ರಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.