ಆ್ಯಂಟಿಗಾ: ಇದೇ ತಿಂಗಳು ತನ್ನ ತವರಿನಲ್ಲಿ ಭಾರತ ತಂಡದ ಎದುರು ಸರಣಿ ಆಡಲಿರುವ ವೆಸ್ಟ್ ಇಂಡೀಸ್ ತಂಡವನ್ನು ಆಯ್ಕೆ ಮಾಡಲಾಗಿದೆ.

ಕ್ರೇಗ್ ಬ್ರಾಥ್ವೇಟ್ ನಾಯಕತ್ವದ ತಂಡದಲ್ಲಿ 18 ಆಟಗಾರರು ಇದ್ದಾರೆ. ಶುಕ್ರವಾರ ಆರಂಭವಾದ ಪೂರ್ವಸಿದ್ಧತಾ ಶಿಬಿರದಲ್ಲಿ ಅವರು ಪಾಲ್ಗೊಳ್ಳುವರು.ಜುಲೈ 9ರಂದು ಡಾಮ್ನಿಕಾಗೆ ತಂಡವು ತೆರಳುವುದು. ಮೊದಲ ಟೆಸ್ಟ್ ಪಂದ್ಯವು 12ರಂದು ಇಲ್ಲಿಯೇ ಮೊದಲ ಟೆಸ್ಟ್ ನಡೆಯಲಿದೆ. ಟ್ರಿನಿಡಾಡ್ನ ಕ್ವೀನ್ಸ್ಪಾರ್ಕ್ ಓವಲ್ನಲ್ಲಿ ಜುಲೈ 20ರಂದು ಎರಡನೇ ಟೆಸ್ಟ್ ನಡೆಯಲಿದೆ.

27ರಿಂದ ಮೂರು ಏಕದಿನ ಪಂದ್ಯಗಳ ಸರಣಿಯೂ ಆರಂಭವಾಗಲಿದೆ. ಆ.3ರಿಂದ ಐದು ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಹೊಸಪ್ರತಿಭೆಗಳಾದ ಕೇವಮ್ ಹಾಜ್, ಅಲಿಕ್ ಅಥಾಂಜೆ ಮತ್ತು ಜೇರ್ ಮೆಕ್ಅಲಿಸ್ಟರ್ ಸ್ಥಾನ ಪಡೆದಿದ್ದಾರೆ.

ಆದರೆ ಅನುಭವಿ ಆಟಗಾರರಾದ ಜೇಸನ್ ಹೋಲ್ಡರ್, ಅಲ್ಜರಿ ಜೋಸೆಫ್ ಮತ್ತು ಕೈಲ್ ಮೇಯರ್ ಅವರ ಹೆಸರು ಈ ಪಟ್ಟಿಯಲ್ಲಿ ಇಲ್ಲ.

ತಂಡ: ಕ್ರೇಗ್ ಬ್ರಾಥ್ವೇಟ್ (ನಾಯಕ), ಅಲಿಕ್ ಅಥಾಂಜೆ, ಜರ್ಮೈನ್ ಬ್ಲ್ಯಾಕ್ವುಡ್, ಎನ್ಕ್ರುಮಾ ಬಾನರ್, ತೇಜನಾರಾಯಣ ಚಂದ್ರಪಾಲ್, ರಖೀಮ್ ಕಾರ್ನವೆಲ್, ಜೊಶುವಾ ಡಿಸಿಲ್ವಾ, ಶಾನನ್ ಗ್ಯಾಬ್ರಿಯಲ್, ಕೇವಮ್ ಹಾಜ್, ಅಕೀಮ್ ಜೋರ್ಡನ್, ಜೈರ್ ಮ್ಯಾಕ್ ಅಲಿಸ್ಟರ್, ಕಿರ್ಕ್ ಮೆಕೆಂಜಿ, ಮಾರ್ಕಿನೊ ಮಿಂಡ್ಲೆ, ಆ್ಯಂಡರ್ಸನ್ ಫಿಲಿಪ್, ರೇಮನ್ ರೀಫರ್, ಕೆಮರ್ ರೋಚ್, ಜೇಡನ್ ಸೀಲ್ಸ್, ಜೊಮೆಲ್ ವಾರಿಕನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.