ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

U-19 ಮಹಿಳಾ ಟಿ20 ವಿಶ್ವಕಪ್‌: ಲಂಕಾ ಮಣಿಸಿದ ಭಾರತ

19 ವರ್ಷದೊಳಗಿನ ಮಹಿಳೆಯರ ಟಿ20 ವಿಶ್ವಕಪ್ ಕ್ರಿಕೆಟ್‌
Last Updated 22 ಜನವರಿ 2023, 19:12 IST
ಅಕ್ಷರ ಗಾತ್ರ

‍ಪೊಚೆಫ್‌ಸ್ಟ್ರೂಮ್‌, ದಕ್ಷಿಣ ಆಫ್ರಿಕಾ: ಪಾರ್ಶವಿ ಚೋಪ್ರಾ (5ಕ್ಕೆ 4) ಮತ್ತು ಮನ್ನತ್ ಕಶ್ಯಪ್ (16ಕ್ಕೆ 2) ಅವರ ಅಮೋಘ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡದವರು 19 ವರ್ಷದೊಳಗಿನ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜಯ ಗಳಿಸಿದರು.

ಭಾನುವಾರ ಇಲ್ಲಿ ನಡೆದ ಟೂರ್ನಿಯ ಸೂಪರ್ ಸಿಕ್ಸ್ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿತು.

ಪಂದ್ಯದಲ್ಲಿ ಭಾರತ ಟಾಸ್‌ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಶ್ರೀಲಂಕಾ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 59 ರನ್ ಗಳಿಸಿತು. ಈ ಗುರಿಯನ್ನು ಶಫಾಲಿ ವರ್ಮಾ ನಾಯಕತ್ವದ ಭಾರತ 7.2 ಓವರ್‌ಗಳಲ್ಲಿ ಮುಟ್ಟಿತು.

ಸೌಮ್ಯಾ ತಿವಾರಿ ಅವರು (ಔಟಾಗದೆ 28) ಭಾರತದ ಬ್ಯಾಟಿಂಗ್‌ನಲ್ಲಿ ಮಿಂಚಿದರು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 20 ಓವರ್‌ಗಳಲ್ಲಿ 9ಕ್ಕೆ 59 (ವಿಶ್ಮಿ ಗುಣರತ್ನೆ 25, ಉಮಾಯಾ ರತ್ನಾಯಕೆ 13; ಮನ್ನತ್ ಕಶ್ಯಪ್‌ 16ಕ್ಕೆ 2, ಪಾರ್ಶವಿ ಚೋಪ್ರಾ 5ಕ್ಕೆ 4).

ಭಾರತ: 7.2 ಓವರ್‌ಗಳಲ್ಲಿ 3ಕ್ಕೆ 60 (ಶಫಾಲಿ ವರ್ಮಾ 15, ಶ್ವೇತಾ ಶೆರಾವತ್‌ 13, ಸೌಮ್ಯಾ ತಿವಾರಿ ಔಟಾಗದೆ 28 ; ದೇವಾಮಿ ವಿಹಾಂಗ 34ಕ್ಕೆ 3). ಫಲಿತಾಂಶ: ಭಾರತಕ್ಕೆ 7 ವಿಕೆಟ್‌ಗಳ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT