ನಾಮ್ ದಿನ್ಹ್ (ವಿಯೆಟ್ನಾಂ): ಭಾರತ ತಂಡವು ಅಂತರರಾಷ್ಟ್ರೀಯ ಫುಟ್ಬಾಲ್ ಸೌಹಾರ್ದ ಪಂದ್ಯದಲ್ಲಿ ಶನಿವಾರ ವಿಯೆಟ್ನಾಂ ತಂಡದ ಎದುರು 1–1 ಗೋಲುಗಳ ಡ್ರಾ ಸಾಧಿಸಿತು.

ಮನೊಲೊ ಮಾರ್ಕ್ವೆಝ್ ಅವರು ಭಾರತ ತಂಡದ ಮುಖ್ಯ ಕೋಚ್ ಹೊಣೆ ವಹಿಸಿಕೊಂಡ ನಂತರ ಮೊದಲ ಗೆಲುವಿಗೆ ಕಾಯುವಂತಾಗಿದೆ. ಅವರು ತರಬೇತುದಾರರಾದ ಮೇಲೆ ಭಾರತ, ಮಾರಿಷಸ್ ಜೊತೆ ಡ್ರಾ ಮಾಡಿಕೊಂಡಿತ್ತು. ಕಳೆದ ತಿಂಗಳು ಹೈದರಾಬಾದಿನಲ್ಲಿ ನಡೆದ ಇಂಟರ್ ಕಾಂಟಿನೆಂಟಲ್ ಕಪ್ ಪಂದ್ಯದಲ್ಲಿ 0–3 ಗೋಲುಗಳಿಂದ ಸಿರಿಯಾ ಎದುರು ಸೋಲನುಭವಿಸಿತ್ತು. ವಿಯೆಟ್ನಾಂ ಫೀಫಾ ರ್ಯಾಂಕಿಂಗ್ನಲ್ಲಿ 116ನೇ ಸ್ಥಾನದಲ್ಲಿದ್ದರೆ, ಭಾರತ 126ನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.