ಬೆಂಗಳೂರು: ನಗರದಲ್ಲಿ ಭಾನುವಾರ ರಾತ್ರಿಯಿಡೀ ಭಾರಿ ಮಳೆ ಸುರಿದಿದೆ. ಇದರಿಂದಾಗಿ ಏಷ್ಯನ್ ನೆಟ್ಬಾಲ್ ಮಹಿಳಾ ಚಾಂಪಿಯನ್ಶಿಪ್ ನಡೆಯುತ್ತಿರುವ ಕೋರಮಂಗಲ ಒಳಾಂಗಣ ಕ್ರೀಡಾಂಗಣದ ಆವರಣಕ್ಕೆ ನೀರು ನುಗ್ಗಿದೆ.

ಇದರಿಂದಾಗಿ ಚೀನಾ ತೈಪೆ ಮತ್ತು ಇರಾಕ್, ಫಿಲಿಫೀನ್ಸ್ ಮತ್ತು ಜಪಾನ್ ನಡುವೆ ನಡೆಯಬೇಕಿದ್ದ ಎರಡು ಪಂದ್ಯಗಳನ್ನು ಗುರುವಾರಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ರೀಡಾಂಗಣದ ಆವರಣದಲ್ಲಿ ಅಪಾರ ಪ್ರಮಾಣದ ನೀರು ನಿಂತಿರುವುದರಿಂದ ಕ್ರೀಡಾಂಗಣಕ್ಕೆ ಬರಬೇಕಿದ್ದ ಕ್ರೀಡಾಪಟುಗಳು, ಕೋಚ್ಗಳಿಗೆ ಸರಿಯಾದ ಸಮಯಕ್ಕೆ ಬರಲು ಸಾಧ್ಯವಾಗದೆ ಸಮಸ್ಯೆ ಅನುಭವಿಸುವಂತಾಗಿದೆ ಎಂದು ತಿಳಿದುಬಂದಿದೆ.

ಅಕ್ಟೋಬರ್ 17ರಿಂದ ಆರಂಭಗೊಂಡಿರುವ 13ನೇ ಏಷ್ಯನ್ ನೆಟ್ಬಾಲ್ ಮಹಿಳಾ ಚಾಂಪಿಯನ್ಷಿಪ್ನಲ್ಲಿ ವಿವಿಧ ದೇಶಗಳ ಆಟಗಾರ್ತಿಯರು ಪಾಲ್ಗೊಂಡಿದ್ದಾರೆ.

ಮಳೆ ಬಂದಾಗಲೆಲ್ಲಾ ಈ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ ಎಂದು ಕ್ರೀಡಾಪಟುಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.