ನವದೆಹಲಿ: ಏಷ್ಯನ್ ಗೇಮ್ಸ್ನ ಚಿನ್ನದ ಪದಕ ವಿಜೇತೆ ಪೂಜಾ ರಾಣಿ ಮತ್ತು ವಿಶ್ವ ಚಾಂಪಿಯನ್ಷಿಪ್ನ ಕಂಚಿನ ಪದಕ ವಿಜೇತೆ ಲವ್ಲಿನಾ ಬೋರ್ಗೇನ್ ಒಳಗೊಂಡಂತೆ ಭಾರತದ ನಾಲ್ವರು ರಷ್ಯಾದ ಕಾಸ್ಪಿಸ್ಕಿಯಲ್ಲಿ ನಡೆಯುತ್ತಿರುವ ಮಗೋಮ್ ಸಲಾಂ ಉಮಖನೊವ್ ಸ್ಮಾರಕ ಬಾಕ್ಸಿಂಗ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದರು.

75 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಪೂಜಾ ಸ್ಥಳೀಯ ಬಾಕ್ಸರ್ ಲಾರಾ ಮಮೆಡ್ಕುಲೊವ ಅವರನ್ನು 4–1ರಿಂದ ಮಣಿಸಿದರು. 69 ಕೆಜಿ ವಿಭಾಗದಲ್ಲಿ ಲವ್ಲಿನಾ ಕೂಡ ರಷ್ಯಾದ ಬಾಕ್ಸರ್ ವಿರುದ್ಧ ಗೆದ್ದರು. ಅನಸ್ತೇಸಿಯಾ ಸಿಗೇವಾ ಎದುರು ಅವರು 5–0 ಅಂತರದ ಜಯ ಗಳಿಸಿದರು.

ಪುರುಷರ ವಿಭಾಗದಲ್ಲಿ ರಷ್ಯಾದ ಸಯಾನ ಸಗತೇವ ಅವರನ್ನು 4–1ರಿಂದ ಮಣಿಸಿದ ನೀರಜ್ (60 ಕೆಜಿ) ನಾಲ್ಕರ ಘಟ್ಟ ಪ್ರವೇಶಿಸಿದರು. ಜಾನಿ (57 ಕೆಜಿ) ಬೆಲಾರಸ್ನ ಅನಸ್ತೇಸಿಯಾ ಒಬುಶೆಂಕೋವ ಎದುರು 5–0ಯಿಂದ ಗೆದ್ದರು. ಆಶಿಶ್ ಇನ್ಶಾ (52 ಕೆಜಿ) ಅಜರ್ಬೈಜಾನ್ನ ಸಲ್ಮಾನ್ ಅಲಿಜೇ ಅವರನ್ನು 4–1ರಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.