ಪ್ಯಾರಿಸ್: ಅನುಭವಿ ಬಿಲ್ಗಾರ್ತಿ ದೀಪಿಕಾ ಕುಮಾರಿ ಅವರು ಪದಕ ಗೆಲ್ಲುವ ತೀವ್ರ ಒತ್ತಡಕ್ಕೆ ಸಿಲುಕಿದ ಪರಿಣಾಮ ಕ್ವಾರ್ಟರ್ ಫೈನಲ್‌ಲ್ಲಿ ಕೊರಿಯಾದ ಸಯಾನ್ ನಾಮ್ ವಿರುದ್ಧ 4–6ರಲ್ಲಿ ಪರಾಭವಗೊಂಡರು. ಆ ಮೂಲಕ ಆರ್ಚರಿ ವಿಭಾಗದಲ್ಲಿ ಭಾರತದ ಪದಕ ಗೆಲ್ಲುವ ಕನಸು ಭಗ್ನಗೊಂಡಿತು.

ಜರ್ಮನಿಯ ಮಿಷೆಲ್ ಕ್ರೊಪ್ಪೆನ್ ವಿರುದ್ಧ 6–4ರ ಅಂತರದಲ್ಲಿ ಜಯಗಳಿಸುವ ಮೂಲಕ ಕ್ವಾರ್ಟರ್ ಫೈನಲ್ ಹಂತಕ್ಕೆ ದೀಪಿಕಾ ಅರ್ಹತೆ ಗಿಟ್ಟಿಸಿಕೊಂಡು ಪದಕ ಗೆಲ್ಲುವ ಭರವಸೆ ಮೂಡಿಸಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಇವರು 19 ವರ್ಷದ ನಾಮ್ ವಿರುದ್ಧ ಆಡಿದರು.
.Paris Olympics: ಆರ್ಚರಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ದೀಪಿಕಾ.Paris Olympics | ಆರ್ಚರಿ: ನಿರಾಶೆ ಮೂಡಿಸಿದ ದೀಪಿಕಾ.
ಈ ಹಿಂದೆ ಶಾಂಘೈನಲ್ಲಿ ನಡೆದ ವಿಶ್ವಕಪ್‌ನಲ್ಲಿ ನಾಮ್ ಅವರನ್ನು ಸೆಮಿಫೈನಲ್‌ಲ್ಲಿ ದೀಪಿಕಾ ಪರಾಭವಗೊಳಿಸಿ, ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು. ಆದರೆ ಪ್ಯಾರಿಸ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತದ ಹಿರಿಯ ಆಟಗಾರ್ತಿ ಅದನ್ನು ಪುನರಾವರ್ತಿಸುವಲ್ಲಿ ವಿಫಲರಾದರು.

ಈ ಇಬ್ಬರು ಬಿಲ್ಗಾರ್ತಿಯರು ನಾಲ್ಕು ಸೆಟ್‌ಗಳ ನಂತರ 4–4 ಅಂಕಗಳ ಸಮಭಲ ಸಾಧಿಸಿದ್ದರು. ಆದರೆ ಐದನೇ ಸೆಟ್‌ನಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ನಾಮ್ ಸೆಮಿಫೈನಲ್ ಪ್ರವೇಶಿಸಿದರು.

ತಂಡ ಪಂದ್ಯದಲ್ಲಿ ಕಳಪೆ ಪ್ರದರ್ಶನಕ್ಕಾಗಿ ದೀಪಿಕಾ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು. ವೈಯಕ್ತಿಕ ಪಂದ್ಯದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರೂ, 6 ಹಾಗೂ 7 ಅಂಕಗಳನ್ನಷ್ಟೇ ಪಡೆಯಲು ಶಕ್ತರಾದರು. ಈ ಸೋಲಿನ ಮೂಲಕ ಭಾರತದ ಬಿಲ್ಲುಗಾರರು ಈ ಒಲಿಂಪಿಕ್ಸ್‌ನಿಂದ ಹೊರಬಿದ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.