ನವದೆಹಲಿ: ಮುಂದಿನ ಕಾಮನ್ವೆಲ್ತ್ ಗೇಮ್ಸ್ನಿಂದ ಶೂಟಿಂಗ್ ಕೈಬಿಟ್ಟಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತ ಒಲಿಂಪಿಕ್ಸ್ ಸಂಸ್ಥೆ (ಐಒಎ) ಕೂಟದಲ್ಲಿ ಪಾಲ್ಗೊಳ್ಳದೇ ಇರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ.

ಬರ್ಮಿಂಗಂನಲ್ಲಿ 2022ರಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ನಿಂದ ಶೂಟಿಂಗ್ ಕೈಬಿಡಲು ಕಾಮನ್ವೆಲ್ತ್ ಗೇಮ್ಸ್ ಫೆಡರೇಷನ್ ಗುರುವಾರ ರಾತ್ರಿ ನಿರ್ಧರಿಸಿತ್ತು. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಂಡು ಮೂರು ಹೊಸ ಕ್ರೀಡೆಗಳನ್ನು ಸೇರಿಸಲು ತೀರ್ಮಾನಿಸಲಾಗಿತ್ತು.

ಕಳೆದ ವರ್ಷವೇ ಈ ಬಗ್ಗೆ ಸಂದೇಹ ಎದ್ದಿತ್ತು. ಆದ್ದರಿಂದ ಅಂದಿನ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಬ್ರಿಟನ್ ಕ್ರೀಡಾ ಸಚಿವರು ಮತ್ತು ಕಾಮನ್ವೆಲ್ತ್ ಗೇಮ್ಸ್ ಫೆಡರೇಷನ್ ಪದಾಧಿಕಾರಿಗಳಿಗೆ ಪತ್ರ ಬರೆದು ಕೂಟದಿಂದ ಶೂಟಿಂಗ್ ಕೈಬಿಡಬಾರದು ಎಂದು ಕೋರಿದ್ದರು. ಆದರೆ ಫೆಡರೇಷನ್ ಈ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಕೂಟದ ಆತಿಥ್ಯ ವಹಿಸುವ ದೇಶಕ್ಕೆ ನೀಡಿತ್ತು.

ಶೂಟಿಂಗ್ ಕೈಬಿಟ್ಟರೆ ಭಾರತಕ್ಕೆ ದೊಡ್ಡ ಹೊಡೆತ ಬೀಳಲಿದೆ. ಕಳೆದ ಬಾರಿಯ ಕಾಮನ್ವೆಲ್ತ್ ಗೇಮ್ಸ್ನ ಶೂಟಿಂಗ್ನಲ್ಲಿ ಭಾರತ 16 ಪದಕ ಗೆದ್ದಿತ್ತು.

‘ಶೂಟಿಂಗ್ ಭಾರತ ಭರವಸೆಯ ಕ್ರೀಡೆ. ಇಲ್ಲಿನ ಅನೇಕ ಶೂಟರ್ಗಳಿಗೆ ಕಾಮನ್ವೆಲ್ತ್ ಕೂಟವು ಒಲಿಂಪಿಕ್ಸ್ಗೆ ಪ್ರವೇಶಿಸುವ ಹೆಬ್ಬಾಗಿಲು.

ಆದ್ದರಿಂದ ಈ ಕ್ರೀಡೆಯನ್ನು ಕೈಬಿಡುವುದು ಸರಿಯಲ್ಲ’ ಎಂದು ಭಾರತ ಒಲಿಂಪಿಕ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.