ಪಟಿಯಾಲ: ಕರ್ನಾಟಕದ ಎಂ.ಆರ್.ಪೂವಮ್ಮ ಅವರು ಇಂಡಿಯನ್ ಗ್ರ್ಯಾನ್ ಪ್ರಿ ಅಥ್ಲೆಟಿಕ್ಸ್ ಕೂಟದ ಮಹಿಳೆಯರ 400 ಮೀ. ಓಟದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಇಲ್ಲಿಯ ನೇತಾಜಿ ಸುಭಾಷ್ ಚಂದ್ರ ಬೋಸ್ ನ್ಯಾಷನಲ್ ಇನ್ಸ್ಟಿಟ್ಯೂಷನ್ ಆಫ್ ಸ್ಪೋರ್ಟ್ಸ್ನಲ್ಲಿ ನಡೆಯುತ್ತಿರುವ ಕೂಟದ ಮೊದಲ ದಿನವಾದ ಗುರುವಾರ ಅವರು ಈ ಸಾಧನೆ ಮಾಡಿದರು.

ಪೂವಮ್ಮ ಅವರು ಹರಿಯಾಣದ ಕಿರಣ್ ಪಹಾಲ್ ಅವರನ್ನು ಒಂದು ಸೆಕೆಂಡ್ನಿಂದ ಹಿಂದಿಕ್ಕಿ ಅಗ್ರಸ್ಥಾನ ಗಳಿಸಿದರು.

100 ಮೀ. ವಿಭಾಗದ ಚಿನ್ನದ ಪದಕವು ದ್ಯುತಿ ಚಾಂದ್ ಅವರ ಪಾಲಾಯಿತು.

ಒಡಿಶಾ ರಾಜ್ಯವನ್ನು ಪ್ರತಿನಿಧಿಸಿದ್ದ ದ್ಯುತಿ 11.51 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಕರ್ನಾಟಕದ ಟಿ.ದಾನೇಶ್ವರಿ (11.86 ಸೆ.) ಹಾಗೂ ಮಹಾರಾಷ್ಟ್ರದ ದಿಯಾಂಡ್ರಾ ಡ್ಯೂಡ್ಲಿ ವೆಲ್ಲಾಡೆರ್ಸ್ (11.97 ಸೆ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಕರ್ನಾಟಕದ ಕಾವೇರಿ ಲಕ್ಷ್ಮಣಗೌಡ ಪಾಟೀಲ (24.25 ಸೆ.) ಅವರು ಮಹಿಳೆಯರ 200 ಮೀ. ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಗಿಟ್ಟಿಸಿದರು. ಈ ವಿಭಾಗದಲ್ಲಿ ಹರಿಯಾಣದ ಅಂಜಲಿ ದೇವಿ (23.57 ಸೆ.) ಚಿನ್ನ ಗೆದ್ದರು.

ಪುರುಷರ 5,000 ಮೀ. ಓಟದಲ್ಲಿ ಕರ್ನಾಟಕದ ಇ.ನಾಗರಾಜ ಅವರು ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.