ಅಥ್ಲೀಟ್‌ಗಳು ತಮ್ಮ ಕ್ರೀಡಾ ಪ್ರದರ್ಶನಕ್ಕಿಂತ ತಮ್ಮ ತೂಕ ಕಡಿಮೆ ಮಾಡುವ ಕಠಿಣ ಪ್ರಕ್ರಿಯೆಗಾಗಿಯೇ ಪದಕಕ್ಕೆ ಅರ್ಹರು ಎಂದು ಕುಸ್ತಿಪಟು ಸಾಕ್ಷಿ ಮಲ್ಲಿಕ್ ಹಿಂದೊಮ್ಮೆ ಹೇಳಿದ್ದರು. ಕ್ರೀಡಾಪಟುಗಳಿಗೆ ತೂಕವೆಂಬ ಮಾನದಂಡವನ್ನು ಎದುರಿಸುವುದೇ ದೊಡ್ಡ ಸವಾಲು. ಅದರಲ್ಲೂ ಕ್ರೀಡೆಯ ಎಲ್ಲಾ ಪಟ್ಟುಗಳನ್ನೂ ಅಭ್ಯಾಸ ಮಾಡಿ, ಹಣಾಹಣಿಗೆ ಸಿದ್ಧಗೊಂಡರೂ, ತೂಕ ಅನುಮತಿಸದ ಹೊರತೂ ಆಡುವ ಅರ್ಹತೆ ಗಿಟ್ಟಿಸಿಕೊಳ್ಳುವುದು ಕಷ್ಟ.