ಸಕೀರ್, ಬಹ್ರೇನ್: ಏಳು ಬಾರಿಯ ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಅವರಲ್ಲಿ ಕೋವಿಡ್–19 ಇರುವುದು ದೃಢಪಟ್ಟಿದೆ. ಇದರಿಂದಾಗಿ ಅವರು ಈ ವಾರಾಂತ್ಯದಲ್ಲಿ ನಡೆಯಲಿರುವ ಸಕೀರ್ ಗ್ರ್ಯಾನ್‌ಪ್ರಿ ರೇಸ್‌ನಿಂದ ಹೊರಗುಳಿಯಲಿದ್ದಾರೆ ಎಂದು ಅವರು ಪ್ರತಿನಿಧಿಸುವ ತಂಡ ಮರ್ಸಿಡಿಸ್ ಎಎಂಜಿ ಪೆಟ್ರಾನ್ಸ್ ಹೇಳಿದೆ.

‘ಕಳೆದ ವಾರ ಮೂರು ಬಾರಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದ ಹ್ಯಾಮಿಲ್ಟನ್ ಅವರಲ್ಲಿ ಸೋಂಕು ಕಂಡುಬಂದಿರಲಿಲ್ಲ. ಹೋದ ಭಾನುವಾರ ಕೊನೆಯ ಬಾರಿ ಅವರು ಪರೀಕ್ಷೆಗೆ ಒಳಗಾಗಿದ್ದರು. ಪ್ರತಿ ಬಾರಿ ‘ನೆಗೆಟಿವ್‘ ವರದಿ ಬಂದಿತ್ತು. ಆದರೆ ಸೋಮವಾರ ಬೆಳಿಗ್ಗೆ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಿದ್ದವು. ಬಳಿಕ ಪರೀಕ್ಷಿಸಿದಾಗ ಕೋವಿಡ್ ಇರುವುದು ಕಂಡುಬಂದಿದೆ‘ ಎಂದು ತಂಡ ಮಾಹಿತಿ ನೀಡಿದೆ.

ಹ್ಯಾಮಿಲ್ಟನ್ ಅವರು ಸದ್ಯ ಬಹ್ರೇನ್‌ನಲ್ಲಿ ಪ್ರತ್ಯೇಕವಾಸದಲ್ಲಿದ್ದಾರೆ.

‘ಸೋಂಕಿನ ಲಕ್ಷಣಗಳಿದ್ದರೂ ಹ್ಯಾಮಿಲ್ಟನ್ ಆರೋಗ್ಯವಾಗಿದ್ದಾರೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಎಲ್ಲ ಸಿಬ್ಬಂದಿ ಶುಭಹಾರೈಸಿದ್ದಾರೆ‘ ಎಂದು ತಂಡ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.