ಬೆಂಗಳೂರು: ಸಾಯ್ ಕೇಂದ್ರದಲ್ಲಿ ಸೋಮವಾರ ಆರಂಭವಾಗಲಿರುವ ಎರಡು ತಿಂಗಳ ತರಬೇತಿ ಶಿಬಿರಕ್ಕಾಗಿ ಹಾಕಿ ಇಂಡಿಯಾ 33 ಆಟಗಾರ್ತಿಯರ ಸಂಭವನೀಯ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ.

ಲಂಡನ್ ಮತ್ತು ಆ್ಯಂಟ್ವರ್ಪ್ನಲ್ಲಿ ನಡೆದ ಎಫ್ಐಎಚ್ ಹಾಕಿ ಪ್ರೊ ಲೀಗ್ ಋತುವಿನಲ್ಲಿ ತನ್ನ ಎಲ್ಲಾ ಪಂದ್ಯಗಳಲ್ಲಿ ಭಾರತ ಸೋಲು ಅನುಭವಿಸಿತ್ತು. ಆಗಸ್ಟ್ 31ರಂದು ಶಿಬಿರ ಅಂತ್ಯವಾಗಲಿದೆ.

‘ನಾವು ಇತ್ತೀಚೆಗೆ ಕೈಗೊಂಡಿದ್ದ ಲಂಡನ್ ಮತ್ತು ಆ್ಯಂಟ್ವರ್ಪ್ ಪ್ರವಾಸದಲ್ಲಿ ಫಲಿತಾಂಶಗಳು ನಮ್ಮ ಪರವಾಗಿರಲಿಲ್ಲ. ಆದರೂ ನಾವು ತಂಡವಾಗಿ ಸಾಕಷ್ಟು ಕಲಿತಿದ್ದೇವೆ’ ಎಂದು ಮುಖ್ಯ ಕೋಚ್ ಹರೇಂದ್ರ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಂಡ ಹೀಗಿದೆ: ಗೋಲ್ ಕೀಪರ್ಸ್: ಸವಿತಾ ಪೂನಿಯಾ, ಬಿಚುದೇವಿ ಕರಿಬಮ್, ಬನ್ಸಾರಿ ಸೋಲಂಕಿ, ಮಾಧುರಿ ಡಿಕೊ. ಡಿಫೆಂಡರ್ಸ್: ನಿಕ್ಕಿ ಪ್ರಧಾನ್, ಉದಿತಾ, ಇಶಿಕಾ ಚೌಧರಿ, ಮೋನಿಕಾ, ರೋಪ್ನಿ ಕುಮಾರಿ, ಮಹಿಮಾ ಚೌಧರಿ, ಜ್ಯೋತಿ ಚೆಟ್ರಿ , ಪ್ರೀತಿ. ಮಿಡ್ಫೀಲ್ಡರ್ಸ್: ಸಲೀಮಾ ಟೇಟೆ, ಮರೀನಾ ಲಾಲ್ರಂಗಿ, ವೈಷ್ಣವಿ ವಿಠ್ಠಲ್ ಫಾಲ್ಕೆ, ನೇಹಾ, ಜ್ಯೋತಿ, ಎಡುಲಾ ಜ್ಯೋತಿ, ಬಲಜೀತ್ ಕೌರ್, ಮನಿಷಾ ಚೌಹಾನ್, ಅಕ್ಷತಾ ಅಬ್ಸೋ ಧೇಕಳೆ, ಅಜ್ಮಿನಾ ಕುಜುರ್. ಫಾರ್ವರ್ಡ್ಸ್: ಸುನೆಲಿಟಾ ಟೊಪ್ಪೊ, ಮುಮ್ತಾಜ್ ಖಾನ್, ಲಾಲ್ರೆಮ್ರಿಸಿಯಾನಿ, ಸಂಗೀತಾ ಕುಮಾರಿ, ದೀಪಿಕಾ, ಶರ್ಮಿಳಾ ದೇವಿ, ನವನೀತ್ ಕೌರ್, ದೀಪಿಕಾ ಸೊರೆಂಗ್, ಪ್ರೀತಿ ದುಬೆ, ವಂದನಾ ಕಟಾರಿಯಾ, ರುತುಜಾ ದಾದಾಸೊ ಪಿಸಾಳ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.