ಲಂಡನ್: ಗ್ಲಾಸ್ಗೊನಲ್ಲಿ 2026ರಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡೆಯನ್ನು ಬಜೆಟ್ ಸ್ನೇಹಿಯಾಗಿಸುವ ಉದ್ದೇಶದಿಂದ ಹಾಕಿ, ಬ್ಯಾಡ್ಮಿಂಟನ್, ಕುಸ್ತಿ, ಶೂಟಿಂಗ್ ಹಾಗೂ ಕ್ರಿಕೆಟ್ ಸೇರಿದಂತೆ 10 ಕ್ರೀಡೆಗಳನ್ನು ಕೈಬಿಡಲಾಗಿದೆ ಎಂದು ವರದಿಯಾಗಿದೆ.

ಟೇಬಲ್ ಟೆನ್ನಿಸ್, ಸ್ಕ್ವಾಷ್ ಹಾಗೂ ಟ್ರಥ್ಲಾನ್ ಕೂಡಾ ಕೈಬಿಡಲಾದ ಪಟ್ಟಿಯಲ್ಲಿದೆ. ಇಡೀ ಕ್ರೀಡಾಕೂಟಕ್ಕೆ ಕೇವಲ ನಾಲ್ಕು ಕೇಂದ್ರಗಳನ್ನಷ್ಟೇ ಬಳಸಲಾಗುತ್ತಿದೆ. 2022ರ ಬರ್ಮಿಂಗ್ಹ್ಯಾಮ್ ಆವೃತ್ತಿಗೆ ಹೋಲಿಸಿದಲ್ಲಿ 2026ರಲ್ಲಿ ಕ್ರೀಡೆಗಳ ಸಂಖ್ಯೆಗಳು ಗಣನೀಯವಾಗಿ ಕುಸಿಯಲಿವೆ.

‘ಗೇಮ್ಸ್ನಲ್ಲಿ 10 ಕ್ರೀಡೆಗಳಷ್ಟೇ ಇರಲಿದೆ. ಕಾಮನ್ವೆಲ್ತ್ ಕ್ರೀಡೆಯಲ್ಲಿ ಹಲವು ಆಟಗಳು ಇರಬೇಕು ಜತೆಗೆ ನಿರ್ವಹಣೆ ಮತ್ತು ಹಣಕಾಸು ವೆಚ್ಚವನ್ನೂ ತಗ್ಗಿಸಬೇಕಾಗಿದೆ. ಹೀಗಾಗಿ ಅಥ್ಲೆಟಿಕ್ಸ್ ಹಾಗೂ ಪ್ಯಾರಾ ಅಥ್ಲೆಟಿಕ್ಸ್ (ಟ್ರ್ಯಾಕ್ ಮತ್ತು ಫೀಲ್ಡ್), ಈಜು, ಪ್ಯಾರಾ ಈಜು, ಆರ್ಟಿಸ್ಟಿಕ್ ಜಿನ್ಮಾಸ್ಟಿಕ್, ಟ್ರ್ಯಾಕ್ ಸೈಕ್ಲಿಂಗ್ ಹಾಗೂ ಪ್ಯಾರಾ ಟ್ರ್ಯಾಕ್ ಸೈಕ್ಲಿಂಗ್, ನೆಟ್ಬಾಲ್, ವ್ಹೈಟ್ ಲಿಫ್ಟಿಂಗ್ ಮತ್ತು ಪ್ಯಾರಾ ಪವರ್ಲಿಫ್ಟಿಂಗ್, ಬಾಕ್ಸಿಂಗ್, ಜುಡೊ, ಬೌಲ್ಸ್ ಹಾಗೂ ಪ್ಯಾರಾ ಬೌಲ್ಸ್, 3X3 ಬಾಸ್ಕೆಟ್ಬಾಲ್, 3X3 ಗಾಲಿಕುರ್ಚಿ ಬಾಸ್ಕೆಟ್ಬಾಲ್’ ಇರಲಿದೆ ಎಂದು ಕಾಮನ್ವೆಲ್ತ್ ಗೇಮ್ಸ್ ಫೆಡರೇಷನ್ ಹೇಳಿದೆ.

ಕಾಮನ್ವೆಲ್ತ್ ಗೇಮ್ಸ್ನ ಈ ಆವೃತ್ತಿಯು ಜುಲೈ 23ರಿಂದ ಆಗಸ್ಟ್ 2ರವರೆಗೆ ನಡೆಯಲಿದೆ. ಗ್ಲಾಸ್ಗೋಗೆ 12ನೇ ವರ್ಷದ ನಂತರ ಆತಿಥ್ಯ ವಹಿಸುವ ಅವಕಾಶ ಲಭಿಸಿದೆ. ಪ್ಯಾರಾ ಅಥ್ಲೀಟ್ 2002ರ ಮ್ಯಾಂಚೆಸ್ಟರ್ ಆವೃತ್ತಿಯಿಂದ ಆರಂಭಗೊಂಡಿದ್ದು, ಇದು 2026ರ ಆವೃತ್ತಿಯಲ್ಲೂ ಮುಂದುವರಿಯಲಿದೆ.

ಭಾರತದ ಪದಕ ಗಳಿಕೆಯ ಕನಸಿಗೆ ಪೆಟ್ಟೇ...?

ಬರ್ಮಿಂಗ್ಹ್ಯಾಮ್ ಕ್ರೀಡಾಕೂಟದಲ್ಲಿ ಶೂಟಿಂಗ್ ಕೈಬಿಡಲಾಗಿತ್ತು. ಅದು ಈ ಬಾರಿಯೂ ಮುಂದುವರಿದಿದೆ. ಇದರೊಂದಿಗೆ ಇತರ ಪ್ರಮುಖ ಕ್ರೀಡೆಗಳನ್ನು ಕೈಬಿಟ್ಟಿರುವುದು ಭಾರತದ ಪದಕ ಬೇಟೆಗೆ ತೊಡಕಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

2014 ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಶೂಟಿಂಗ್ ಅನ್ನು ಗ್ಲಾಸ್ಗೊದಿಂದ 100 ಕಿ.ಮೀ. ದೂರದಲ್ಲಿ ಆಯೋಜಿಸಲಾಗಿತ್ತು. ಆರ್ಚರಿಯನ್ನೂ ಕಡೆಗಣಿಸಲಾಗಿದೆ. ಇದು 2010ರಲ್ಲಿ ದೆಹಲಿಯಲ್ಲಿ ನಡೆದ ಕ್ರೀಡಾಕೂಟದ ನಂತರ ನಡೆದೇ ಇಲ್ಲ. 2014ರಲ್ಲಿ ಹಾಕಿಯನ್ನು ಕೈಬಿಡಲಾಗಿತ್ತು. ಆದರೆ ಈವರೆಗಿನ ಕ್ರೀಡಾಕೂಟದಲ್ಲಿ ಭಾರತದ ಹಾಕಿ ತಂಡವು ಮೂರು ಬೆಳ್ಳಿ ಹಾಗೂ 2 ಕಂಚಿನ ಪದ ಗೆದ್ದಿತ್ತು. ಬ್ಯಾಡ್ಮಿಂಟನ್ ಈವರೆಗೂ 10 ಜಿನ್ನ ಸೇರಿದಂತೆ 31 ಪದಕಗಳನ್ನು ಪಡೆದಿದೆ.

ಶೂಟಿಂಗ್ನಲ್ಲಿ ಈವರೆಗೂ 135 ಪದಕಗಳನ್ನು ಪಡೆದಿದೆ. ಇದರಲ್ಲಿ 63 ಚಿನ್ನದ ಪದಕ ಒಳಗೊಂಡಿದೆ. ಭಾರತಕ್ಕೆ ಪದಕದ ಖಾತ್ರಿ ನೀಡಬಲ್ಲ ಕುಸ್ತಿಯಲ್ಲಿ 114 ಪದಕ ಭಾರತಕ್ಕೆ ಲಭಿಸಿದೆ. ಕ್ರಿಕೆಟ್ನಲ್ಲಿ ಮಹಿಳೆಯರ ತಂಡವು ಬೆಳ್ಳಿ ಪದಕ ಜಯಿಸಿದೆ.

2026ರ ಕಾಮನ್ವೆಲ್ತ್ ಗೇಮ್ಸ್ನ ಕ್ರೀಡಾ ನಗರಿಯ ಅಭಿವೃದ್ಧಿಗಾಗಿ 100 ದಶಲಕ್ಷ ಪೌಂಡ್ಗಳನ್ನು ಖರ್ಚು ಮಾಡುವುದಾಗಿ ಸ್ಕಾಟ್ಲೆಂಡ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.