ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಗಮನಾರ್ಹ ಸಾಧನೆ ಮಾಡಿರುವ ಭಾರತದ ಪುರುಷ ಹಾಗೂ ಮಹಿಳಾ ಹಾಕಿ ತಂಡಗಳು, ವಿಶ್ವ ರ‍್ಯಾಂಕಿಂಗ್‌ನಲ್ಲೂ ಕ್ರಮವಾಗಿ ಮೂರನೇ ಹಾಗೂ ಎಂಟನೇ ಸ್ಥಾನಗಳಿಗೆಜಿಗಿದಿದೆ.

ಇದು ಹಾಕಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಭಾರತದ ಪುರುಷ ಹಾಗೂ ಮಹಿಳಾ ತಂಡಗಳ ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ.

ಇದನ್ನೂ ಓದಿ:ಮಹಿಳಾ ಹಾಕಿ ಟೀಂಗೆ ಪ್ರಧಾನಿ ವಿಡಿಯೊ ಕರೆ; ಕಣ್ಣೀರಾದ ಆಟಗಾರ್ತಿಯರು

ಜರ್ಮನಿ ವಿರುದ್ಧ 5-4 ಗೋಲುಗಳಿಂದ ಗೆಲುವು ದಾಖಲಿಸಿದ ಭಾರತದ ಪುರುಷ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ 41 ವರ್ಷಗಳ ಬಳಿಕ ಪದಕ ಜಯಿಸಿತ್ತು.

'ತಂಡದ ಪ್ರತಿಯೊಬ್ಬ ಆಟಗಾರನ ಕಠಿಣ ಪರಿಶ್ರಮಕ್ಕೆ ದೊರಕಿದ ಪ್ರತಿಫಲ ಇದಾಗಿದ್ದು, ಇಲ್ಲಿಂದ ಭಾರತೀಯ ಹಾಕಿಯು ಮತ್ತಷ್ಟು ಉತ್ತುಂಗಕ್ಕೇರಲಿದೆ' ಎಂದು ಹಾಕಿ ತಂಡದ ನಾಯಕ ಮನಪ್ರೀತ್ ಸಿಂಗ್ ತಿಳಿಸಿದ್ದಾರೆ.

ಅತ್ತ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಬ್ರಿಟನ್ ವಿರುದ್ಧ ಸೋಲು ಅನುಭವಿಸಿದ ಮಹಿಳಾ ತಂಡವು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಇದನ್ನೂ ಓದಿ:Tokyo Olympics: ನಾಲ್ಕು ದಶಕಗಳ ಬಳಿಕ ಸಿಹಿ ತಂದ ಪದಕ

'ಪದಕ ಗೆಲ್ಲಲು ಸಾಧ್ಯವಾಗದಿರುವುದು ನೋವನ್ನುಂಟು ಮಾಡಿದೆ. ಆದರೆ ಧನಾತ್ಮಕ ಅಂಶಗಳತ್ತ ಮೆಲುಕು ಹಾಕಿದಾಗ, ಕಳೆದ ಕೆಲವು ವರ್ಷಗಳಲ್ಲಿ ಹಾಕಿ ತಂಡವು ಸಾಧಿಸಿರುವ ಪ್ರಗತಿಯು ನಿಜಕ್ಕೂ ಹೆಮ್ಮೆಪಡುವಂತದ್ದು' ಎಂದು ನಾಯಕಿ ರಾಣಿ ರಾಂಪಾಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.