ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ ಅಧ್ಯಕ್ಷ ರೇಸ್‌: ಸೆಬಾಸ್ಟಿಯನ್ ಕೊ ಸೇರಿ 7 ಮಂದಿ

Published : 16 ಸೆಪ್ಟೆಂಬರ್ 2024, 13:58 IST
Last Updated : 16 ಸೆಪ್ಟೆಂಬರ್ 2024, 13:58 IST
ಫಾಲೋ ಮಾಡಿ
Comments

ಲುಸಾನ್‌: ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ (ಐಒಸಿ) ಮುಖ್ಯಸ್ಥ ಸೆಬಾಸ್ಟಿಯನ್ ಕೊ ಸೇರಿದಂತೆ ಏಳು ಮಂದಿ ಅಭ್ಯರ್ಥಿಗಳು, ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಸ್ಥಾನದ ಸ್ಪರ್ಧೆಗೆ ಬಿಡ್‌ ಸಲ್ಲಿಸಿದ್ದಾರೆ.

ಐಒಸಿ ಹಾಲಿ ಅಧ್ಯಕ್ಷರಾಗಿರುವ ಜರ್ಮನಿಯ ಥಾಮಸ್‌ ಬಾಕ್ ಅವರ ಅವಧಿ ಮುಗಿದಿದ್ದು, ಮತ್ತೆ ಕಣಕ್ಕಿಳಿಯುವುದಿಲ್ಲ ಎಂದು ಅವರು ಪ್ಯಾರಿಸ್‌ ಒಲಿಂಪಿಕ್ಸ್‌ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

1,500 ಮೀ. ಓಟದಲ್ಲಿ ಎರಡು ಬಾರಿ ಒಲಿಂಪಿಕ್ ಚಾಂಪಿಯನ್ ಆಗಿರುವ ಬ್ರಿಟನ್‌ನ ಕೊ ಅವರಿಗೆ ಕಿರ್ಸ್ಟಿ ಕೊವೆಂಟ್ರಿ ಮತ್ತು ವಿಶ್ವ ಸೈಕ್ಲಿಂಗ್ ಮುಖ್ಯಸ್ಥ ಡೇವಿಡ್‌ ಲೆಪರ್ಟಿಯಂಟ್ ಅವರಿಂದ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆಯಿದೆ. 200 ಮೀ. ಬ್ರೆಸ್ಟ್‌ಸ್ಟ್ರೋಕ್ ಈಜಿನಲ್ಲಿ ವಿಶ್ವದಾಖಲೆ ಹೊಂದಿದ್ದ ಒಲಿಂಪಿಯನ್‌, ಜಿಂಬಾಬ್ವೆಯ ಕೊವೆಂಟ್ರಿ, ಒಂದೊಮ್ಮೆ ಆಯ್ಕೆಯಾದಲ್ಲಿ ಈ ಹುದ್ದೆಗೇರಲಿರುವ ಆಫ್ರಿಕದ ಮೊದಲ ಮಹಿಳೆ ಎನಿಸಲಿದ್ದಾರೆ. ಸದ್ಯ ಅವರು ಜಿಂಬಾಬ್ವೆಯ ಕ್ರೀಡಾ ಸಚಿವೆ

ಕಳೆದ ವಾರ ಐಒಸಿ ಎತಿಕ್ಸ್ ಕಮಿಷನ್ ನಿಗದಿಪಡಿಸಿರುವ ನಿಯಮಗಳು ಕೊ ಅವರಿಗೆ ಸವಾಲು ಒಡ್ಡಿವೆ. ಸೆ. 29ರಂದು 68ಕ್ಕೆ ಕಾಲಿಡಲಿರುವ ಕೊ ಅವರು ಒಂದೊಮ್ಮೆ ಆಯ್ಕೆಯಾದಲ್ಲಿ ಎಂಟು ವರ್ಷಗಳ ಅವಧಿ ಮುಗಿಸುವಾಗ ಅವರಿಗೆ 76 ವರ್ಷ ಆಗಲಿದೆ. ಈಗ ಐಒಸಿ ಸದಸ್ಯರು ಮತ್ತು ಅಧ್ಯಕ್ಷರ ನಿವೃತ್ತಿ ವಯೋಮಿತಿಯನ್ನು 74ರವರೆಗೆ ಹೆಚ್ಚಿಸಲು ಮಾತ್ರ ಅವಕಾಶವಿದೆ.

70 ವರ್ಷದ ಬಾಕ್‌ ಅವರು 12 ವರ್ಷ ಅಧಿಕಾರಾವಧಿ ಮುಗಿಸಿದ್ದಾರೆ.

ಜೋರ್ಡಾನ್‌ನ ಪ್ರಿನ್ಸ್‌ ಫೈಸಲ್‌ ಅಲ್–ಹುಸೇನ್‌, ಜಿಮ್ನಾಸ್ಟಿಕ್ಸ್‌ ಮುಖ್ಯಸ್ಥ ಮೊರಿನಾರಿ ವತಾನೆ, ಜುವಾನ್ ಅಂಟೊನಿಯೊ ಸಮರಾನ್ ಜೂನಿಯರ್, ಸ್ಕಿ ಫೆಡರೇಷನ್ ಮುಖ್ಯಸ್ಥ ಜೊಹಾನ್ ಎಲಿಯಾಷ್ ಕಣದಲ್ಲಿರುವ ಇತರರು. ಅಂಟೊನಿಯೊ ಸಮರಾನ್ ಅವರ ತಂದೆ (ಅದೇ ಹೆಸರಿನವರು) 1980 ರಿಂದ 2001ರವರೆಗೆ ಐಒಸಿ ಅಧ್ಯಕ್ಷರಾಗಿದ್ದರು. ವಾಣಿಜ್ಯಒಪ್ಪಂದಗಳಿಂದ ಶಕ್ತಿ ತುಂಬಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT