ಜಕಾರ್ತ: ಭಾರತದ ಮಂಜೀತ್ ಸಿಂಗ್ ಹಾಗೂ ಜಿನ್ಸನ್ ಜಾನ್ಸನ್ ಅವರು ಏಷ್ಯನ್ ಕ್ರೀಡಾಕೂಟದ ಪುರುಷರ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿಯ ಸಾಧನೆ ಮಾಡಿದ್ದಾರೆ.

ಮಂಜೀತ್, 1ನಿಮಿಷ46.15 ಸೆಕೆಂಡುಗಳಲ್ಲಿ ದೂರ ಕ್ರಮಿಸಿದರು. ಜಿನ್ಸನ್, 1ನಿಮಿಷ46.35 ಸೆಕೆಂಡುಗಳಲ್ಲಿ ಗುರಿ ತಲುಪಿದರು.

ಕತಾರ್‌ನ ಅಬ್ದುಲ್ಲಾ ಅಬುಬೆಕರ್ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಅವರು 1ನಿಮಿಷ46.38 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಇದರೊಂದಿಗೆ, ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಈವರೆಗೆ 49 ಪದಕಗಳನ್ನು ಗಳಿಸಿದಂತಾಗಿದ್ದು, ಪದಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಇದರಲ್ಲಿ 9 ಚಿನ್ನ, 18 ಬೆಳ್ಳಿ ಮತ್ತು 22 ಕಂಚಿನ ಪದಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.