ಪ್ರಜಾವಾಣಿ ವಾರ್ತೆ ಬೆಂಗಳೂರು: ಮೋಟೊಜಿಪಿ ರೇಸ್ ಆಯೋಜನೆಯಾಗಿರುವ ಗ್ರೇಟರ್ ನೋಯ್ಡಾದ ಬುದ್ಧ ಇಂಟರ್‌ನ್ಯಾಷನಲ್ ಸರ್ಕಿಟ್‌ನಲ್ಲಿ ಸ್ಥಾಪಿಸಿರುವ ಒಂದು ಮಳಿಗೆಯು ಬೆಂಗಳೂರಿನ ಬಾಲಕನ ‘ನನಸಾಗದ ಕನಸಿ’ಗೆ ಸಂಬಂಧಿಸಿದ ಕಥೆಯನ್ನು ಹೇಳುತ್ತದೆ. ಆಗಸ್ಟ್‌ನಲ್ಲಿ ಚೆನ್ನೈನಲ್ಲಿ ನಡೆದಿದ್ದ ಎಂಆರ್‌ಎಫ್ ಇಂಡಿಯನ್ ನ್ಯಾಷನಲ್ ಮೋಟರ್‌ಸೈಕಲ್ ರೇಸಿಂಗ್ ಚಾಂಪಿಯನ್‌ಷಿಪ್ ವೇಳೆ ದುರಂತ ಮರಣವನ್ನಪ್ಪಿದ್ದ 13 ವರ್ಷದ ಶ್ರೇಯಸ್ ಹರೀಶ್ ಅವರ ನೆನಪಿಗಾಗಿ ಮಳಿಗೆ ತೆರೆಯಲಾಗಿದೆ. ಬೈಕ್ ರೇಸಿಂಗ್‌ನಲ್ಲಿ ಮಗ ಹೊಂದಿದ್ದ ಪ್ರೀತಿಯನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಶ್ರೇಯಸ್ ತಂದೆ ತಂದೆ ಹರೀಶ್ ಪರಂಧಾಮನ್ ಅವರು ಈ ಮಳಿಗೆ ತೆರೆದಿದ್ದಾರೆ. ‘ಅವನು ಈ ಕ್ರೀಡೆಗಾಗಿ ತನ್ನ ಜೀವವನ್ನೇ ತ್ಯಾಗ ಮಾಡಿದ್ದಾನೆ. ಆತನ ಕತೆ ಇಲ್ಲಿಗೆ ಕೊನೆಗೊಳ್ಳಲು ಬಿಡುವುದಿಲ್ಲ’ ಎಂದು ಹರೀಶ್ ಅವರು ಪ್ರತಿಕ್ರಿಯಿಸಿದ್ದಾರೆ. ಶ್ರೇಯಸ್ ಅವರು ಒಂದು ದಿನ ಮೋಟೊ ಜಿಪಿ ರೇಸ್‌ನಲ್ಲಿ ಭಾರತದ ರಾಷ್ಟ್ರಧ್ವಜ ಹಾರಿಸಬೇಕು ಎಂಬ ಕನಸು ಕಂಡಿದ್ದರು. ಆದರೆ ಕನಸು ಈಡೇರಿಸುವ ಮುನ್ನವೇ ದುರಂತ