ಭಾರತದ ಮನವಿ ತಿರಸ್ಕೃತ ರೋಹಿದಾಸ್ ಅಮಾನತು
ಭಾರತ ತಂಡ ಮಂಗಳವಾರ ಜರ್ಮನಿ ವಿರುದ್ಧ ನಡೆಯುವ ಪಂದ್ಯದಲ್ಲಿ ಅನುಭವಿ ರಕ್ಷಣೆ ಆಟಗಾರ ಅಮಿತ್ ರೋಹಿದಾಸ್ ಅವರ ಸೇವೆಯಿಲ್ಲದೇ ಆಡಬೇಕಾಗಿದೆ. ಬ್ರಿಟನ್‌ನ ಆಟಗಾರ ವಿಲ್ ಕಲ್ನನ್ ಅವರೆದುರು ಅಪಾಯಕಾರಿ ರೀತಿ ಸ್ಟಿಕ್ ಎತ್ತಿದ ಕಾರಣ ಕಾರಣಕ್ಕೆ ಅವರಿಗೆ ಭಾನುವಾರ ರೆಡ್ ಕಾರ್ಡ್ ತೋರಿಸಲಾಗಿತ್ತು.
ಭಾರತ ಅಮಾನತು ವಿರುದ್ಧ ಮನವಿ ಸಲ್ಲಿಸಿತ್ತು. ಆದರೆ ವಿಶ್ವ ಹಾಕಿ ಫೆಡರೇಷನ್ ಮನವಿ ತಿರಸ್ಕರಿಸಿ ಒಂದು ಪಂದ್ಯಕ್ಕೆ ಅಮಾನತು ಮಾಡಿದೆ. ವಿಡಿಯೊ ಅಂಪೈರ್ ಪಂದ್ಯದ ವೇಳೆ ದೃಶ್ಯಾವಳಿಗಳನ್ನು ಪರಿಶೀಲಿಸಿ ರೆಡ್ ಕಾರ್ಡ್ ನಿರ್ಧಾರ ಸಮ್ಮತಿಸಿದ್ದರು.
ಎದುರಾಳಿ ಫಾರ್ವರ್ಡ್ ಆಟಗಾರ ಕಲ್ನನ್ ಅವರನ್ನು ಮುನ್ನುಗ್ಗದಂತೆ ತಡೆಯುವ ಉದ್ದೇಶದಿಂದ ಅಮಿತ್ ಎತ್ತಿದ ಸ್ಟಿಕ್ ಕಲ್ನನ್ ಮುಖಕ್ಕೆ ತಾಗಿತ್ತು.
ಸಾಮಾನ್ಯ ಸಂದರ್ಭಗಳಲ್ಲಿ ಫುಟ್‌ಬಾಲ್‌ನಲ್ಲಿ ಒಂದು ರೆಡ್‌ಕಾರ್ಡ್ ಅಥವಾ ಎರಡು ‘ಎಲ್ಲೊ (ಹಳದಿ) ಕಾರ್ಡ್’ ಪಡೆದರೆ ಅಂಥ ಆಟಗಾರ ಒಂದು ಪಂದ್ಯ ಕಳೆದುಕೊಳ್ಳುತ್ತಾನೆ. ಆದರೆ ಹಾಕಿ ಆಟದಲ್ಲಿ ಅಂಪೈರ್ ಅವರು ತಾಂತ್ರಿಕ ನಿಯೋಗಕ್ಕೆ ಸಲ್ಲಿಸುವ ವರದಿಯ ಮೇರೆಗೆ ತಪ್ಪು ಎಸಗಿದ ಆಟಗಾರನ ಅಮಾನತು ಶಿಕ್ಷೆಯ
ನಿರ್ಧಾರವಾಗುತ್ತದೆ.