ನವದೆಹಲಿ: ಭಾರತದ ಅಗ್ರ ಮಹಿಳಾ ಕುಸ್ತಿಪಟುಗಳಲ್ಲಿ ಒಬ್ಬರಾದ ಸಾಕ್ಷಿ ಮಲಿಕ್ ಅವರ ಆತ್ಮಕಥನ ಇದೇ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ. ಈ ಕೃತಿಯಲ್ಲಿ ಅವರು ತಮ್ಮ ಜೀವನದ ಏಳುಬೀಳು ಸೇರಿದಂತೆ ಎಲ್ಲ ಪ್ರಮುಖ ವಿಷಯಗಳನ್ನು ತೆರೆದಿಟ್ಟಿದ್ದಾರೆ.

ಜಗರ್‌ನಾಟ್ ಬುಕ್ಸ್ ಹೊರತಂದಿರುವ ಈ ಆತ್ಮಕಥನ ‘ವಿಟ್ನೆಸ್’ಗೆ ಜೊನಾಥನ್ ಸೆಲ್ವರಾಜ್ ಸಹ ಲೇಖಕರಾಗಿದ್ದಾರೆ.

ಆತ್ಮಕಥನದಲ್ಲಿ ಅವರು ತಮ್ಮ ಬಾಲ್ಯ, ರೋಹ್ತಕ್‌ನಲ್ಲಿ ಕುಸ್ತಿಗೆ ಸೇರ್ಪಡೆಗೊಂಡಿದ್ದು, ರಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವುದು, ಒಲಿಂಪಿಕ್ಸ್ ನಂತರದ ದಿನಗಳು, ಹೋರಾಟ, ಗಾಯದ ಸಮಸ್ಯೆ, ತೀರಾ ಇತ್ತೀಚೆಗೆ ನವದೆಹಲಿಯ ಬೀದಿಗಳಲ್ಲಿ ಭಾರತ ಕುಸ್ತಿ ಫೆಡರೇಷನ್ ಆಡಳಿತದ ವಿರುದ್ಧ ಹೋರಾಟ.... ಇವೆಲ್ಲವನ್ನು ಸ್ವಲ್ಪ ತೀಕ್ಷ್ಣವಾಗಿಯೇ ಬರೆದಿದ್ದಾರೆ.

ಭಾರತದಲ್ಲಿ ಮಹಿಳೆಯರ ಕುಸ್ತಿ ಲೋಕದ ಒಳನೋಟ, ತರಬೇತಿ, ಶಿಬಿರದಲ್ಲಿನ ಜೀವನ, ಡೇಟಿಂಗ್, ಹಣಕಾಸು ಮತ್ತು ಅಂತರರಾಷ್ಟ್ರೀಯ ಎಲೀಟ್ ರೆಸ್ಲರ್ ಆಗಲು ಪಟ್ಟ ಶ್ರಮ ಎಲ್ಲವನ್ನೂ ಆತ್ಮಾವಲೋಕನ ಮಾಡಿದ್ದಾರೆ ಎಂದು ಜಗರ್‌ನಾಟ್ ಹೇಳಿಕೆಯಲ್ಲಿ ತಿಳಿಸಿದೆ.

‘ಇದು ನನ್ನ ಜೀವನದ ಪ್ರಾಮಾಣಿಕ ಚಿತ್ರಣ. ಏಳು ಬೀಳುಗಳು, ನನ್ನೆಲ್ಲಾ ನೆನಪುಗಳನ್ನು ಈ ಕೃತಿಯಲ್ಲಿ ಚಿತ್ರಿಸಿದ್ದೇನೆ. ಓದುಗರು ಕೃತಿಯನ್ನು ಮೆಚ್ಚುವ ಭರವಸೆಯಿದೆ’ ಎಂದು ಸಾಕ್ಷಿ ಮಲಿಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2023ರ ಡಿಸೆಂಬರ್‌ನಲ್ಲಿ ಮಲಿಕ್ ವೃತ್ತಿಪರ ಕುಸ್ತಿಗೆ ವಿದಾಯ ಹೇಳಿದ್ದರು. ಆ ವೇಳೆ ಅವರು ದೇಶದ ಅತ್ಯುತ್ತಮ ಮಹಿಳಾ ಕುಸ್ತಿಪಟುಗಳಲ್ಲಿ ಒಬ್ಬರಾಗಿದ್ದರು. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮತ್ತು ಏಕಮಾತ್ರ ಕುಸ್ತಿಪಟುವಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.