ಸ್ಟಾಕ್ಹೋಮ್: ರಿಯಲ್ ಮ್ಯಾಡ್ರಿಡ್ ಹಾಗೂ ಫ್ರಾನ್ಸ್ನ ಫುಟ್ಬಾಲ್ ತಾರೆ ಕಿಲಿಯನ್ ಎಂಬಾಪೆ ಅವರು ಭಾಗಿಯಾಗಿದ್ದಾರೆ ಎನ್ನಲಾದ ಅತ್ಯಾಚಾರ ಪ್ರಕರಣದ ತನಿಖೆಯನ್ನು ಆರಂಭಿಸಲಾಗಿದೆ. ಎಂಬಾಪೆ ಅವರ ಹೆಸರನ್ನು ಉಲ್ಲೇಖಿಸದೆ ತನಿಖೆ ಆರಂಭಿಸಿರುವ ವಿಚಾರವನ್ನು ಸ್ವೀಡನ್ನ ಪ್ರಾಸಿಕ್ಯೂಟರ್ರೊಬ್ಬರು ಮಂಗಳವಾರ ಖಚಿತಪಡಿಸಿದ್ದಾರೆ.

ಸ್ವೀಡನ್ನ ಎರಡು ದಿನಪತ್ರಿಕೆಗಳು ಮತ್ತು ಪ್ರಸಾರ ಸಂಸ್ಥೆಯೊಂದು 25 ವರ್ಷ ವಯಸ್ಸಿನ ಎಂಬಾಪೆ ಅವರು ತನಿಖೆಯ ಗುರಿಯಾಗಿದ್ದಾರೆ ಎಂದು ವರದಿ ಮಾಡಿವೆ. ಕಳೆದ ವಾರ ಎಂಬಾಪೆ ಅವರು ಎರಡು ದಿನಗಳ ಭೇಟಿಗಾಗಿ ಇಲ್ಲಿಗೆ ಬಂದಿದ್ದರು.

ಅಕ್ಟೋಬರ್ 10ರಂದು ಹೋಟೆಲ್ ಒಂದರಲ್ಲಿ ಅತ್ಯಾಚಾರ ಪ್ರಕರಣ ವರದಿಯಾಗಿದ್ದು, ಆದರೆ, ಅದರಲ್ಲಿ ಯಾರ ಹೆಸರನ್ನು ನೇರವಾಗಿ ಉಲ್ಲೇಖಿಸಿಲ್ಲ. ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ.

ಪೊಲೀಸ್ ದೂರು ದಾಖಲಾದ ಬಗ್ಗೆ ಮಾಹಿತಿಯಿಲ್ಲ ಅವರ ಎಂಬಾಪೆ ಅವರ ತಂಡದ ಮೂಲ ತಿಳಿಸಿವೆ. ಅಲ್ಲದೆ, ಈ ಆರೋಪವನ್ನು ಎಂಬಾಪೆ ಅವರು ಸಾಮಾಜಿಕ ಜಾಲತಾಣದಲ್ಲಿ ‘ಫೇಕ್ ನ್ಯೂಸ್’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.