ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ನ ಮಹಿಳಾ ಗಾಲ್ಫ್ ಸ್ಪರ್ಧೆಯಲ್ಲಿ ಭಾರತದ ಅದಿತಿ ಅಶೋಕ್ ನಾಲ್ಕನೇ ಸ್ಥಾನ ಪಡೆದು ಪದಕ ವಂಚಿತರಾಗಿದ್ದಾರೆ. ಆದರೂ, ದಾಖಲೆ ಬರೆದಿದ್ದಾರೆ.

ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಗಾಲ್ಫ್ ಆಟಗಾರ್ತಿಯೊಬ್ಬರು ನಾಲ್ಕನೇ ಸ್ಥಾನಕ್ಕೇರಿರುವುದು ಇದೇ ಮೊದಲು. ಹೀಗಾಗಿ ಬೆಂಗಳೂರಿನ ಅದಿತಿ ಒಲಿಂಪಿಕ್ಸ್ ಗಾಲ್ಫ್ನಲ್ಲಿ ಸೋತಿದ್ದರೂ, ಐತಿಹಾಸಿಕ ಸಾಧನೆ ಮಾಡಿದ್ದಾರೆ.

23 ವರ್ಷದ ಅದಿತಿ 2016ರ ರಿಯೋ ಆವೃತ್ತಿಯಲ್ಲಿ ಒಲಿಂಪಿಕ್ಸ್ಗೆ ಪದಾರ್ಪಣೆ ಮಾಡಿದ್ದರು. ಆ ಕೂಟದಲ್ಲಿ 41 ನೇ ಸ್ಥಾನ ಪಡೆದಿದ್ದ ಅವರು, ಈ ಬಾರಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಅಷ್ಟೇ ಅಲ್ಲ, ಅವರು ಕೂದಲೆಳೆ ಅಂತರದಲ್ಲಿ ಪದಕ ವಂಚಿತರಾದರು.

ಆರಂಭದ ಸುತ್ತಿನಿಂದಲೂ ಅಮೋಘ ಸಾಮರ್ಥ್ಯ ತೋರುತ್ತ ಮುನ್ನಡೆ ಸಾಧಿಸಿದ್ದ ಅದಿತಿಗೆ ಕೊನೆಯ ಸುತ್ತಿನಲ್ಲಿ ಅದೃಷ್ಟ ಕೈಕೊಟ್ಟಿತ್ತು.

ಈ ಆಟದಲ್ಲಿ ಅಮೆರಿಕದ ನೆಲ್ಲಿ ಕೊರ್ಡಾ ಚಿನ್ನದ ಪದಕ ಗೆದ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.