ಟೋಕಿಯೊ: ಸರ್ಬಿಯಾದ ನೊವಾಕ್ ಜೊಕೊವಿಚ್ಗೆ ಒಲಿಂಪಿಕ್ಸ್ ಚಿನ್ನ ಕೈಗೆಟುಕದಾಗಿದೆ.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಈ ಬಾರಿ ಅವರು ಚಿನ್ನದ ಪದಕ ಗೆದ್ದೇ ಗೆಲ್ಲುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಶುಕ್ರವಾರ ನಿರಾಸೆ ಕಾಡಿದೆ.

ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧದ ಸೆಮಿಫೈನಲ್ನಲ್ಲಿ ಸರ್ಬಿಯಾದ ಆಟಗಾರ 6–1, 3–6, 1–6ರಿಂದ ಆಘಾತ ಕಂಡರು. ಇದರೊಂದಿಗೆ ಅವರ ‘ಗೋಲ್ಡನ್ ಗ್ರ್ಯಾನ್ಸ್ಲಾಮ್’ ಕನಸೂ ಕಮರಿತು.

ನಾಲ್ಕನೇ ಶ್ರೇಯಾಂಕದ ಆಟಗಾರ ಜ್ವೆರೆವ್ ಎದುರಿನ ಪಂದ್ಯದಲ್ಲಿ ನಿರಾಯಾಸವಾಗಿ ಮೊದಲ ಸೆಟ್ ಜಯಿಸಿದ ಅವರು 45 ನಿಮಿಷ ನಡೆದ ಎರಡನೇ ಸೆಟ್ನ ಶುರುವಿನಲ್ಲೂ ಮುನ್ನಡೆ ಹೊಂದಿದ್ದರು. ಹೀಗಾಗಿ ಅವರ ಗೆಲುವು ಸಲೀಸು ಎಂದೇ ಭಾವಿಸಲಾಗಿತ್ತು. ಆದರೆ ಜ್ವೆರೆವ್ ಬಲಿಷ್ಠ ಸರ್ವ್ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

ಮೂರನೇ ಹಾಗೂ ನಿರ್ಣಾಯಕ ಸೆಟ್ನಲ್ಲಿ ಜೊಕೊವಿಚ್ ಸಂಪೂರ್ಣವಾಗಿ ಮಂಕಾದರು. ಅವರು ಎರಡು ಬಾರಿ ಸರ್ವ್ ಕಳೆದುಕೊಂಡರು.

ಮಿಶ್ರ ಡಬಲ್ಸ್ನಲ್ಲೂ ನಿರಾಸೆ: ಮಿಶ್ರ ಡಬಲ್ಸ್ನಲ್ಲಿ ನೀನಾ ಸ್ಟೊಜಾನೊವಿಚ್ ಜೊತೆಗೂಡಿ ಕಣಕ್ಕಿಳಿದಿದ್ದ ಜೊಕೊವಿಚ್ಗೆ ಸೆಮಿಫೈನಲ್ನಲ್ಲಿ ನಿರಾಸೆ ಎದುರಾಯಿತು.

ಜೊಕೊವಿಚ್ ಮತ್ತು ನೀನಾ 6–7, 5–7ರಿಂದ ಅಸ್ಲಾನ್ ಕರಾತ್ಸೆವ್ ಮತ್ತು ಎಲಿನಾ ವೆಸ್ನಿನಾ ಎದುರು ಶರಣಾದರು. ಎರಡು ಕಂಚಿನ ಪದಕಗಳನ್ನು ಗೆಲ್ಲುವ ಅವಕಾಶ ಈಗ ಜೊಕೊವಿಚ್ ಎದುರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.