ಸೋಮವಾರ, 30 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾರಿಸ್‌ ಒಲಿಂಪಿಕ್ಸ್‌ ಪದಕ ವಿಜೇತರ ಕಡೆಗಣನೆ:ಇಸಿ ಸದಸ್ಯರ ವಿರುದ್ಧ ಉಷಾ ಆಕ್ರೋಶ

Published : 30 ಸೆಪ್ಟೆಂಬರ್ 2024, 21:02 IST
Last Updated : 30 ಸೆಪ್ಟೆಂಬರ್ 2024, 21:02 IST
ಫಾಲೋ ಮಾಡಿ
Comments

ನವದೆಹಲಿ:‌ ಪ್ಯಾರಿಸ್‌ ಒಲಿಂಪಿಕ್ಸ್‌ನ ಪದಕ ವಿಜೇತರನ್ನು ಗೌರವಿಸುವಲ್ಲಿ ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಕಾರ್ಯಕಾರಿ ಸಮಿತಿ ಸದಸ್ಯರು ವಿಫಲವಾಗಿರುವುದು ತೀವ್ರ ಕಳವಳಕಾರಿ ವಿಚಾರ ಎಂದು ಸಂಸ್ಥೆಯ ಅಧ್ಯಕ್ಷೆ ಪಿ.ಟಿ.ಉಷಾ ಟೀಕಿಸಿದ್ದಾರೆ. 

ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸಲು ಅಥ್ಲೀಟುಗಳಿಗೆ ನೀಡಲು ಉದ್ದೇಶಿಸಿದ್ದ ಆರ್ಥಿಕ ನೆರವನ್ನು ಹಣಕಾಸು ಸಮಿತಿ ತಡೆಹಿಡಿದಿತ್ತು ಎಂದು ಉಷಾ ಆರೋಪಿಸಿದ್ದಾರೆ. ಉಷಾ ಮತ್ತು ಇ.ಸಿ. ಸದಸ್ಯರ ನಡುವೆ ಅಂತಃಕಲಹ ಮುಂದುವರಿದಂತಾಗಿದೆ.

ಭಾರತದ ಕ್ರೀಡಾಪಟುಗಳು, ಒಲಿಂಪಿಕ್ಸ್‌ನಲ್ಲಿ ಆರು ಪದಕಗಳನ್ನು ಪಡೆದಿದ್ದರು. ಮನು ಭಾಕರ್ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ದಾಖಲಿಸಿದ್ದರು. ‘ಕಾರ್ಯಕಾರಿ ಸಮಿತಿ ಅವರ ಯಶಸ್ಸನ್ನು ಆಚರಿಸಲು ಬಯಸುತ್ತಿಲ್ಲ. ಇದು ತಮಗೆ ಅತೀವ ಬೇಸರ ಮೂಡಿಸಿದೆ’ ಎಂದು ‘ಪಯ್ಯೋಳಿ ಎಕ್ಸ್‌ಪ್ರೆಸ್‌’ ಖ್ಯಾತಿಯ ಉಷಾ ಹೇಳಿದ್ದಾರೆ.

ಪ್ಯಾರಿಸ್‌ಗೆ ತೆರಳುವ ಅಥ್ಲೀಟುಗಳ ಸಿದ್ಧತೆಗೆ ನೀಡಬೇಕಾಗಿದ್ದ ತಲಾ ₹2ಲಕ್ಷ ಮತ್ತು ಕೋಚ್‌ಗಳಿಗೆ ನಿಗದಿಯಾಗಿದ್ದ ₹1ಲಕ್ಷ ಹಣವನ್ನು ಹಣಕಾಸು ಸಮಿತಿ ತಡೆಹಿಡಿದಿತ್ತು ಎಂದು ಅವರು ಐಒಎ ಖಜಾಂಚಿ ಸಹದೇವ್ ಯಾದವ್ ಅವರನ್ನು ಉದ್ದೇಶಿಸಿ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT