ಮುಗೆಲೊ, ಇಟೆಲಿ: ಆರಂಭಗೊಂಡ ಕೆಲವೇ ಕ್ಷಣಗಳಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ ಕಾರಣ ಟಸ್ಕನ್ ಫಾರ್ಮುಲಾ ಒನ್ ಗ್ರ್ಯಾನ್ಪ್ರಿಯನ್ನು ಕೆಲಕಾಲ ಸ್ಥಗಿತಗೊಳಿಸಲಾಯಿತು. ರೆಡ್ ಬುಲ್ ತಂಡದ ವರ್ಸ್ಟಾಪನ್ ಸ್ಪರ್ಧೆಯಿಂದ ಹೊರಬಿದ್ದರು.

ಭಾನುವಾರ ಆರಂಭಗೊಂಡ ರೇಸ್ನ ಆರಂಭದ ಲ್ಯಾಪ್ನಲ್ಲಿ ಅಪಘಾತ ಸಂಭವಿಸಿತು. ಇದರ ಪರಿಣಾಮ ವರ್ಸ್ಟಾಪನ್ ಟ್ರ್ಯಾಕ್ ಬದಿಯಲ್ಲಿ ಹಾಕಿದ್ದ ಜಲ್ಲಿಕಲ್ಲುಗಳ ಮೇಲೆ ಬಿದ್ದರು. ತಕ್ಷಣ ರಕ್ಷಣಾ ಕಾರ್ಯದ ಕಾರನ್ನು ಕಳುಹಿಸಿದ ಸಂಘಟಕರು ರೇಸ್ ಸ್ಥಗಿತಗೊಳಿಸಿದರು. ಅವರೊಂದಿಗೆ ಮೊನ್ಜಾ ವಿಕ್ಟರ್ ಪೀರ್ ಅವರೂ ಗಾಯಗೊಂಡರು. ವಿಕ್ಟರ್ ಪೀರ್ ಕಳೆದ ವಾರಾಂತ್ಯದ ಇಟಾಲಿಯನ್ ರೇಸ್ನಲ್ಲಿ ಪ್ರಶಸ್ತಿ ಗೆದ್ದು 1996ರ ನಂತರ ಗ್ರ್ಯಾನ್ಪ್ರಿ ಗೆದ್ದ ಫ್ರಾನ್ಸ್ನ ಮೊದಲ ಮೋಟರ್ ಚಾಲಕ ಎನಿಸಿದರು.

ನಾಲ್ಕು ಬಾರಿಯ ಚಾಂಪಿಯನ್, ಫೆರಾರಿಯ ಸೆಬಾಸ್ಟಿಯನ್ ವೆಟೆಲ್ ಮತ್ತು ಕಿಮಿ ರೈಕೊನೆನ್ ಅವರ ವಾಹನಕ್ಕೂ ತೊಂದರೆಯಾಗಿದ್ದು ದುರಸ್ತಿ ಮಾಡಲಾಯಿತು.

ಗಾಲ್ಸಿ ಚಲಾಯಿಸುತ್ತಿದ್ದ ಅಲ್ಫಾ ತೌರಿ ಮತ್ತು ಫ್ರಾನ್ಸ್ನ ಗ್ರೋಜೆನ್ ಚಲಾಯಿಸುತ್ತಿದ್ದ ಹಾಸ್ ವಾಹನಗಳು ಮೊದಲು ಡಿಕ್ಕಿಯಾದವು. ನಂತರ ಕಾರ್ಲೋಸ್ ಸೇನ್ಸ್ ಅವರ ಮೆಕ್ಲಾರೆನ್ ವಾಹನಕ್ಕೂ ಧಕ್ಕೆಯಾಯಿತು. ಕೆಲಕಾಲದ ನಂತರ ರೇಸ್ ಪುನರಾರಂಭಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.