ಲಂಡನ್: ವಿಶ್ವ ಕ್ರಮಾಂಕದಲ್ಲಿಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳಲ್ಲಿರುವ ಡಾಮಿನಿಕ್ ಥೀಮ್ ಮತ್ತು ಡೇನಿಯಲ್ ಮೆಡ್ವೆಡೆವ್ ಅವರು ಎಟಿಪಿ ಫೈನಲ್ಸ್ ಟೂರ್ನಿಯ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಭಾನುವಾರ ತಡರಾತ್ರಿ ಈ ಹಣಾಹಣಿ ನಡೆಯಲಿದೆ.

ಶನಿವಾರ ಸೆಮಿಫೈನಲ್ ಪಂದ್ಯದಲ್ಲಿ ಮೆಡ್ವೆಡೆವ್ ಅವರು 3–6, 7–6, 6–3ರಿಂದ ಎರಡನೇ ಕ್ರಮಾಂಕದ ರಫೆಲ್ ನಡಾಲ್ ಅವರನ್ನು ಮಣಿಸಿದರು. ನಾಲ್ಕರ ಘಟ್ಟದ ಮತ್ತೊಂದು ಹಣಾಹಣಿಯಲ್ಲಿ ಡಾಮಿನಿಕ್ ಥೀಮ್ ಅವರು 7–5, 6–7, 7–6ರಿಂದ ಅಗ್ರ ಕ್ರಮಾಂಕದ ಆಟಗಾರ ನೊವಾಕ್ ಜೊಕೊವಿಚ್ ಅವರಿಗೆ ಸೋಲುಣಿಸಿದರು.

ನಡಾಲ್ ಅವರ ಸತತ 71 ಪಂದ್ಯಗಳ ಗೆಲುವಿನ ಸರಪಳಿಯನ್ನು ಮೆಡ್ವೆಡೆವ್ ತುಂಡರಿಸಿದರು. ಮೊದಲ ಸೆಟ್ಅನ್ನು ಗೆದ್ದುಕೊಂಡ ಸ್ಪೇನ್ ಆಟಗಾರ ನಡಾಲ್ ಪಂದ್ಯ ಗೆಲ್ಲುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದರು. ಎರಡನೇ ಸೆಟ್ನಲ್ಲೂ ಅವರು 5–4ರಿಂದ ಮುನ್ನಡೆಯಲ್ಲಿದ್ದರು. ಆದರೆ ಸತತ ಮೂರು ಪಾಯಿಂಟ್ಸ್ ಗಳಿಸಿದ ರಷ್ಯಾ ಆಟಗಾರ ತಿರುಗೇಟು ನೀಡಿದರು. ಮೂರನೇ ಸೆಟ್ಅನ್ನು ಸುಲಭವಾಗಿ ಜಯಿಸಿ, ಫೈನಲ್ ತಲುಪಿದ ಸಂತಸದಲ್ಲಿ ಮಿಂದೆದ್ದರು.

ಥೀಮ್ ಅವರು ದಾಖಲೆಯ ಆರನೇ ಬಾರಿ ಪ್ರಶಸ್ತಿ ಗೆಲ್ಲುವ ಜೊಕೊವಿಚ್ ಕನಸಿಗೆ ಅಡ್ಡಿಯಾದರು. ಇದೇ ಮೊದಲ ಬಾರಿ ಟ್ರೋಫಿ ಜಯಿಸುವ ಹಂಬಲದಲ್ಲಿದ್ದ ನಡಾಲ್ ಆಸೆಗೆ ಮೆಡ್ವೆಡೆವ್ ತಣ್ಣೀರೆರಚಿದರು.

ಮೆಡ್ವೆಡೆವ್ ಅವರು ನಡಾಲ್ ಎದುರು ಆಡಿದ ಈ ಹಿಂದಿನ ಮೂರು ಪಂದ್ಯಗಳಲ್ಲೂ ನಿರಾಸೆ ಕಂಡಿದ್ದರು. 2019ರ ಅಮೆರಿಕ ಓಪನ್ ಟೂರ್ನಿಯ ಫೈನಲ್ನಲ್ಲಿ ಅನುಭವಿಸಿದ ಸೋಲು ಇದರಲ್ಲಿದೆ. ಆದರೆ ಈ ಬಾರಿ ಸೇಡು ತೀರಿಸಿಕೊಂಡರು.

ಫೈನಲ್ ಪಂದ್ಯದಲ್ಲಿ ಯಾರೇ ಗೆದ್ದರೂ ಗ್ಯಾಲರಿಗಳಲ್ಲಿ ಸಂಭ್ರಮವಂತೂ ಇರುವುದಿಲ್ಲ. ಕೊರೊನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಪ್ರೇಕ್ಷಕರಿಗೆ ನಿರ್ಬಂಧ ಹೇರಲಾಗಿದೆ.

2004ರ ಬಳಿಕ ಇದೇ ಮೊದಲ ಬಾರಿಗೆ ಅಗ್ರ ನಾಲ್ಕು ಕ್ರಮಾಂಕದ ಆಟಗಾರರು ಎಟಿಪಿ ಫೈನಲ್ಸ್ ಟೂರ್ನಿಯ ಸೆಮಿಫೈನಲ್ ತಲುಪಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.