ಬ್ಯೂನಸ್ ಏರ್ಸ್: ಅಮೆರಿಕ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ತವರಿನ ಪ್ರೇಕ್ಷಕರ ಎದುರು ಸೋತು ನಿರಾಶೆಗೆ ಒಳಗಾದರು. ಇಲ್ಲಿ ನಡೆಯುತ್ತಿರುವ ಅರ್ಜೆಂಟೀನಾ ಓಪನ್ ಟೆನಿಸ್ ಟೂರ್ನಿಯ ತಮ್ಮದೇ ದೇಶದ ಫೆಡರಿಕೊ ಡೆಲ್ಬೊನಿಸ್ ಎದುರು ಸೋಲುಂಡ ಅವರು ನಿವೃತ್ತಿಯತ್ತ ಹೆಜ್ಜೆ ಹಾಕಿದ್ದಾರೆ.

33 ವರ್ಷದ ಡೆಲ್ ಪೊಟ್ರೊ ಗಾಯದ ಸಮಸ್ಯೆಗಳಿಂದಾಗಿ 2019ರಿಂದ ಅನೇಕ ಟೂರ್ನಿಗಳಲ್ಲಿ ಕಣಕ್ಕೆ ಇಳಿದಿರಲಿಲ್ಲ. ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ 1–6, 3–6ರಲ್ಲಿ ಸೋತು ಕಣ್ಣೀರು ಹಾಕಿ ಅಂಗಣ ತೊರೆದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮುಂದಿನ ವಾರ ಬ್ರೆಜಿಲ್‌ನಲ್ಲಿ ನಡೆಯಲಿರುವ ರಿಯೊ ಓಪನ್ ಟೂರ್ನಿಯಲ್ಲಿ ಆಡಬೇಕೇ ಬೇಡವೇ ಎಂದು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ತಿಳಿಸಿದರು.

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದ ಡೆಲ್ ಪೊಟ್ರೊ ಅದೇ ವರ್ಷ ಡೇವಿಸ್ ಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.