ಬ್ರಿಸ್ಬೇನ್: ದಿಟ್ಟ ಆಟ ಆಡಿದ ಡೆನಿಸ್ ಶಪೋವಲೊವ್ ಅವರು ಎಟಿಪಿ ಕಪ್ ಟೆನಿಸ್ ಟೂರ್ನಿಯ ಶುಕ್ರವಾರದ ಹಣಾಹಣಿಯಲ್ಲಿ ವಿಶ್ವ ರ್ಯಾಂಕಿಂಗ್ನಲ್ಲಿ ಆರನೇ ಸ್ಥಾನದಲ್ಲಿರುವ ಸ್ಟೆಫಾನೊಸ್ ಸಿಸಿಪಸ್ ಅವರನ್ನು ಮಣಿಸಿದ್ದಾರೆ.

ಡೆನಿಸ್ ಅವರ ಉತ್ತಮ ಆಟದ ನೆರವಿನಿಂದ ಕೆನಡಾ ತಂಡ ಗ್ರೀಸ್ ಎದುರಿನ ‘ಎಫ್’ ಗುಂಪಿನ ಪಂದ್ಯವನ್ನು 3–0ಯಿಂದ ಗೆದ್ದಿದೆ.

ದಿನದ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಫೆಲಿಕ್ಸ್ ಆಗರ್ ಅಲಿಯಸಿಮ್ 6–1, 6–3ಯಿಂದ ಮಿಖಾಯಿಲ್ ಪರ್ವೊಲಾರಕಿಸ್ ಅವರನ್ನು ಪರಾಭವಗೊಳಿಸಿದರು.

ನಂತರ ನಡೆದ ಹಣಾಹಣಿಯಲ್ಲಿ 20 ವರ್ಷ ವಯಸ್ಸಿನ ಶಪೋವಲೊವ್ 7–6, 7–6 ನೇರ ಸೆಟ್ಗಳಿಂದ ಸಿಸಿಪಸ್ ಎದುರು ಗೆದ್ದರು. ಹೀಗಾಗಿ ಕೆನಡಾ 2–0 ಮುನ್ನಡೆ ಪಡೆಯಿತು.

ಡಬಲ್ಸ್ ವಿಭಾಗದಲ್ಲಿ ಶಪೋವಲೊವ್ ಮತ್ತು ಫೆಲಿಕ್ಸ್ 6–2, 6–3 ನೇರ ಸೆಟ್ಗಳಿಂದ ಮಿಖಾಯಿಲ್ ಮತ್ತು ಸಿಸಿಪಸ್ ಅವರನ್ನು ಸೋಲಿಸಿ ಕೆನಡಾ ತಂಡ ‘ಕ್ಲೀನ್ ಸ್ವೀಪ್’ ಸಾಧಿಸಲು ನೆರವಾದರು.

ಸಿಡ್ನಿಯಲ್ಲಿ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಬೆಲ್ಜಿಯಂ ತಂಡ 3–0ಯಿಂದ ಮಾಲ್ಡೋವಾ ತಂಡವನ್ನು ಮಣಿಸಿತು.

ಪರ್ತ್ನಲ್ಲಿ ನಡೆದ ‘ಡಿ’ ಗುಂಪಿನ ಹಣಾಹಣಿಯಲ್ಲಿ ನಾರ್ವೆ 2–1ಯಿಂದ ಅಮೆರಿಕಕ್ಕೆ ಆಘಾತ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.