ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಶ್ರೀಲಂಕಾದ ಅನುಭವಿ ಆಲ್ರೌಂಡರ್ ಏಂಜೆಲೊ ಮ್ಯಾಥ್ಯೂಸ್, 'ಟೈಮ್ಡ್ ಔಟ್' ಆದರು. ಆ ಮೂಲಕ 146 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಟೈಮ್ಡ್ ಔಟ್ ಆಗಿ ನಿರ್ಗಮಿಸಿದ ಮೊದಲ ಬ್ಯಾಟರ್ ಎನಿಸಿದರು.

ಇದರೊಂದಿಗೆ ಪರ-ವಿರೋಧ ಚರ್ಚೆ ಮುನ್ನೆಲೆಗೆ ಬಂದಿದೆ. 2007ರಲ್ಲಿ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ, ಕ್ರೀಸಿಗೆ ಇಳಿಯಲು ಆರು ನಿಮಿಷಗಳಷ್ಟು ತಡವಾದರೂ ಟೈಮ್ಡ್ ಔಟ್ ಏಕೆ ಆಗಿಲ್ಲ ಎಂಬ ಪ್ರಶ್ನೆ ಕೇಳಿಬಂದಿದೆ. ಈ ಕುರಿತು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
.Timed Out: ನೀವೂ ನಿರ್ಗಮಿಸುವ ಸಮಯ ಬಂತು - ಶಕೀಬ್ಗೆ ಮ್ಯಾಥ್ಯೂಸ್ ತಿರುಗೇಟು.PHOTOS | 146 ವರ್ಷಗಳಲ್ಲಿ ಇದೇ ಮೊದಲು - ಏಂಜೆಲೊ ಮ್ಯಾಥ್ಯೂಸ್ 'ಟೈಮ್ಡ್ ಔಟ್'.
ಏನಿದು ಘಟನೆ?

2007ರಲ್ಲಿ ಕೇಪ್ ಟೌನ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಬೆಳಿಗ್ಗೆಯ ಅವಧಿಯಲ್ಲಿ (10.43ಕ್ಕೆ) ವಾಸೀಂ ಜಾಫರ್ ರೂಪದಲ್ಲಿ ಭಾರತದ ಎರಡನೇ ವಿಕೆಟ್ ಪತನವಾಗಿತ್ತು.

ನಾಲ್ಕನೇ ಕ್ರಮಾಂಕದಲ್ಲಿ ಸಚಿನ್ ತೆಂಡೂಲ್ಕರ್ ಕ್ರೀಸ್ಗೆ ಬರಬೇಕಿತ್ತು. ಆದರೆ ಹಿಂದಿನ ದಿನದಾಟದ ಅಂತಿಮ ಅವಧಿಯಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ವೇಳೆ ಸಚಿನ್ ತೆಂಡೂಲ್ಕರ್ ಅವರು ಫೀಲ್ಡಿಂಗ್ ಮಾಡದೇ ಮೈದಾನದಿಂದ ಹೆಚ್ಚು ಸಮಯ ಹೊರಗುಳಿದಿದ್ದರಿಂದ ನಾಲ್ಕನೇ ದಿನದಾಟದಲ್ಲಿ 10.48ರ ವರೆಗೆ ಕ್ರೀಸ್ಗೆ ಬರಲು ಅಂಪೈರ್ಗಳು ಅವಕಾಶ ನೀಡಿರಲಿಲ್ಲ.

ಸಚಿನ್ಗೆ ಅವಕಾಶ ನಿರಾಕರಿಸಿದ ಕಾರಣ ಐದನೇ ಕ್ರಮಾಂಕದ ಬ್ಯಾಟರ್ ವಿವಿಎಸ್ ಲಕ್ಷ್ಮಣ್ ಕ್ರೀಸ್ಗೆ ಇಳಿಯಬೇಕಿತ್ತು. ಆದರೆ ಅವರು ಸ್ನಾನ ಮಾಡಲು ತೆರಳಿದ್ದರು. ಇದರಿಂದಾಗಿ ಆರನೇ ಕ್ರಮಾಂಕದ ಬ್ಯಾಟರ್ ಗಂಗೂಲಿಗೆ ಪ್ಯಾಡ್ ಕಟ್ಟಿ ಬರಲು ತಡವಾಯಿತು.

ಕ್ರೀಡಾಸ್ಫೂರ್ತಿ ಮೆರೆದ ಸ್ಮಿತ್...

ಮುಂದಿನ ಆಟಗಾರ ಮೂರು ನಿಮಿಷದೊಳಗೆ ಕ್ರೀಸಿಗೆ ಆಗಮಿಸಬೇಕಿತ್ತು. ಸುಮಾರು ಆರು ನಿಮಿಷಗಳಷ್ಟು ತಡವಾಗಿ ಗಂಗೂಲಿ ಮೈದಾನಕ್ಕೆ ಲಗ್ಗೆಯಿಟ್ಟರು. ಆದರೆ ಕ್ರೀಡಾಸ್ಫೂರ್ತಿ ಮೆರೆದ ಅಂದಿನ ದಕ್ಷಿಣ ಆಫ್ರಿಕಾದ ನಾಯಕ ಗ್ರೇಮ್ ಸ್ಮಿತ್, ಗಂಗೂಲಿಗೆ ಬ್ಯಾಟಿಂಗ್ ಮಾಡಲು ಅನುವು ಮಾಡಿಕೊಟ್ಟರು. ಇದರಿಂದಾಗಿ ಗಂಗೂಲಿ ಟೈಮ್ಡ್ ಔಟ್ನಿಂದ ಪಾರಾಗಿದ್ದರು.

ಅಲ್ಲದೆ 46 ರನ್ಗಳ ಅಮೂಲ್ಯ ಇನಿಂಗ್ಸ್ ಕಟ್ಟಿದ್ದರು. ಆದರೂ ಭಾರತ ವಿರುದ್ಧದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವು ದಾಖಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.