ಲೇಹ್: ‘ನಮ್ಮ ದೇಶ ಎಂದಿಗೂ ವಿಶ್ವದ ಯಾವುದೇ ಶಕ್ತಿಯ ಮುಂದೆಯೂ ತಲೆಬಾಗಿಲ್ಲ, ಮುಂದೆ ಬಾಗುವುದೂ ಇಲ್ಲ. ನಿಮ್ಮಂಥ ಧೈರ್ಯಶಾಲಿಗಳಿಂದಾಗಿ ಈ ಮಾತುಗಳನ್ನಾಡಲು ನಾನು ಶಕ್ತನಾಗಿದ್ದೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಯೋಧರನ್ನು ಉದ್ದೇಶಿಸಿ ಹೇಳಿದರು.

ಜೂನ್ 15ರಂದು ಗಾಲ್ವನ್ ಕಣಿವೆಯಲ್ಲಿ ಚೀನಾ ಪಡೆಗಳ ಜತೆ ನಡೆದ ಸಂಘರ್ಷದಲ್ಲಿ ಗಾಯಗೊಂಡು ಲೇಹ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಧರನ್ನು ಶುಕ್ರವಾರ ಭೇಟಿ ಮಾಡಿದ ಪ್ರಧಾನಿ, ಅವರ ಯೋಗಕ್ಷೇಮ ವಿಚಾರಿಸಿದರು.

‘ನಿಮಗೆ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಲು ನಾನಿಲ್ಲಿಗೆ ಬಂದಿದ್ದೇನೆ. ನಮ್ಮ ಭಾರತ ಸ್ವಾವಲಂಬಿಯಾಗಿದೆ. ನಮ್ಮ ದೇಶ ಎಂದಿಗೂ ವಿಶ್ವದ ಯಾವುದೇ ಶಕ್ತಿಯ ಮುಂದೆಯೂ ತಲೆಬಾಗಿಲ್ಲ, ಮುಂದೆ ಬಾಗುವುದೂ ಇಲ್ಲ. ನಿಮಗೆ ಮತ್ತು ನಿಮ್ಮಂಥ ಧೈರ್ಯಶಾಲಿಗಳಿಗೆ ಜನ್ಮ ನೀಡಿದ ತಾಯಂದಿರಿಗೆ ಗೌರವ ಸಲ್ಲಿಸುತ್ತೇನೆ. ನೀವೆಲ್ಲ ಬೇಗ ಗುಣಮುಖರಾಗುವಿರೆಂದು ನಂಬಿದ್ದೇನೆ’ ಎಂದು ಯೋಧರ ಬಳಿ ಪ್ರಧಾನಿ ಹೇಳಿದರು.

ಇದನ್ನೂ ಓದಿ:ಭಾರತ ಮಾತೆಯ ವಿರೋಧಿಗಳು ನಮ್ಮ ಯೋಧರ ತಾಕತ್ತು ನೋಡಿದ್ದಾರೆ: ಲಡಾಖ್ನಲ್ಲಿ ಮೋದಿ

ಯೋಧರನ್ನು ಶ್ಲಾಘಿಸಿದ ಪ್ರಧಾನಿ, ‘ನಮ್ಮನ್ನಗಲಿದ ಶೌರ್ಯವಂತರು ವಿನಾಕಾರಣ ನಮ್ಮನ್ನು ಬಿಟ್ಟುಹೋಗಿಲ್ಲ. ನೀವೆಲ್ಲ ತಕ್ಕ ತಿರುಗೇಟು ನೀಡಿದ್ದೀರಿ. ನಿಮ್ಮ ಧೈರ್ಯ, ನೀವು ಚೆಲ್ಲುವ ರಕ್ತವು ಯುವಕರಿಗೆ, ದೇಶವಾಸಿಗಳಿಗೆ ಮತ್ತು ಮುಂದಿನ ತಲೆಮಾರಿಗೆ ಸ್ಫೂರ್ತಿ ನೀಡಲಿದೆ’ ಎಂದರು.

‘ನೀವು ಸೂಕ್ತ ಉತ್ತರ ನೀಡಿದ್ದೀರಿ. ನಿವೀಗ ಆಸ್ಪತ್ರೆಯಲ್ಲಿದ್ದೀರಿ. ಹೀಗಾಗಿ ದೇಶದ 130 ಕೋಟಿ ಜನ ನಿಮ್ಮ ಬಗ್ಗೆ ಹೆಮ್ಮೆಪಡುತ್ತಿರುವುದು ನಿಮಗೆ ತಿಳಿದಿಲ್ಲದಿರಬಹುದು. ಧೈರ್ಯಶಾಲಿಗಳಾದ ನೀವು ತೋರಿದ ಶೌರ್ಯದಿಂದ ಇಡೀ ಜಗತ್ತಿಗೇ ಸಂದೇಶ ರವಾನೆಯಾಗಿದೆ’ ಎಂದು ಮೋದಿ ಹೇಳಿದರು.

ಇದನ್ನೂ ಓದಿ:ಗಾಲ್ವನ್ ಸಂಘರ್ಷದಲ್ಲಿ ಗಾಯಗೊಂಡ ಯೋಧರ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ ಪ್ರಧಾನಿ ಮೋದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.