ಬೆಂಗಳೂರು:ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ಶುಕ್ರವಾರ ಮಂಡನೆಯಾಗಲಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ಇದ್ದು, ಮತದಾರರನ್ನು ಓಲೈಸುವ ಪ್ರಯತ್ನವಾಗಿ ನರೇಂದ್ರ ಮೋದಿ ಸರ್ಕಾರ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬಹುದು ಎಂಬ ನಿರೀಕ್ಷೆ ಹೂಡಿಕೆದಾರರಲ್ಲಿದೆ.

ಇತ್ತೀಚೆಗೆ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. ಹೀಗಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ಈ ಮಧ್ಯಂತರ ಬಜೆಟ್‌ನಲ್ಲಿ ಸಾಲಮನ್ನಾ ಮತ್ತು ತೆರಿಗೆ ವಿನಾಯಿತಿ ನೀಡುವ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶಗಳ ಮಧ್ಯಮ ವರ್ಗದ ಮತದಾರ ಮನಸ್ಸು ಗೆಲ್ಲುವ ಪ್ರಯತ್ನ ಮಾಡಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

2019–20ನೇ ಸಾಲಿನ ಆರ್ಥಿಕ ವರ್ಷದಲ್ಲಿ ಶೇ 7.5ರಷ್ಟು ಅಭಿವೃದ್ಧಿ ಸಾಧಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಜೊತೆಗೆ ರೈಲ್ವೆ, ರಸ್ತೆ ಹಾಗೂ ಬಂದರುಗಳ ಮೇಲೆ ಶೇ 7–8ರಷ್ಟು ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ.

–ವಿವಿಧ ವರದಿಗಳನ್ನು ಆಧರಿಸಿ, ಬಜೆಟ್‌ನಲ್ಲಿ ನಿರೀಕ್ಷಿಸಬಹುದಾದ ಕೆಲವು ಅಂಶಗಳನ್ನು ಇಲ್ಲಿ ಪಟ್ಟಿಮಾಡಲಾಗಿದೆ.

ಕೃಷಿ

* ಕೃಷಿ ಪರಿಹಾರ ಪ್ಯಾಕೇಜ್‌ಗಾಗಿ ಕನಿಷ್ಠ ₹1 ಲಕ್ಷ ಕೋಟಿ ಮೀಸಲು

* ಆಹಾರ ಉತ್ಪನ್ನಗಳ ಮೇಲಿನ ಸಬ್ಸಿಡಿಗಾಗಿ ₹1.8 ಲಕ್ಷ ಕೋಟಿ

* ಬೆಳೆ ವಿಮೆ ಕಂತು ಮನ್ನಾ

* ಸಮಯಕ್ಕೆ ಸರಿಯಾಗಿ ಬೆಳೆ ಸಾಲ ಕಟ್ಟಿದ ರೈತರಿಗೆ ಅದರ ಬಡ್ಡಿ ಮನ್ನಾ

* ಸರ್ಕಾರಿ ಸ್ವತ್ತುಗಳ ಮಾರಾಟದಿಂದ 2019–20ರ ಆರ್ಥಿಕ ವರ್ಷದಲ್ಲಿ ₹78.20 ಸಾವಿರ ಕೋಟಿ ಸಂಗ್ರಹಿಸುವ ಗುರಿ

* ಚಿನ್ನದ ಮೇಲಿನ ತೆರಿಗೆಯನ್ನೂ ವಿನಾಯ್ತಿಗೊಳಿಸುವ ನಿರೀಕ್ಷೆ

ಆರೋಗ್ಯ

* ಆರೋಗ್ಯ ಕ್ಷೇತ್ರಕ್ಕೆ ಶೇ 5ರಷ್ಟು ಅನುದಾನ ಹೆಚ್ಚಳ

ತೆರಿಗೆ

* ಕಾರ್ಪೋರೇಟ್ ತೆರಿಗೆ ದರವನ್ನು ಶೇ 30 ರಿಂದ ಶೇ 25ಕ್ಕೆ ಇಳಿಸುವ ನಿರೀಕ್ಷೆಯಿದ್ದು, ಚುನಾವಣೆ ನಂತರದವರೆಗೂ ಇದನ್ನು ತಡೆಹಿಡಿಯುವ ಸಾಧ್ಯತೆ ಇದೆ.

* ಮಧ್ಯಮ ವರ್ಗ ಮತ್ತು ಸಣ್ಣ ಉದ್ದಿಮೆದಾರರಿಗೆ ಹೆಚ್ಚು ತೆರಿಗೆ ವಿನಾಯ್ತಿ

*ಸರ್ಕಾರಿ ಸ್ವಾಮ್ಯದ ಸಾಮಾನ್ಯ ವಿಮಾ ಸಂಸ್ಥೆಗಳಿಗೆ 4 ಸಾವಿರ ಕೋಟಿ ಬಂಡವಾಳ ಒಳಹರಿವು

* ಎಲೆಕ್ಟ್ರಿಕ್ ಮತ್ತು ಬ್ಯಾಟರಿ ವಾಹನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಡಿತ

ಐಟಿ/ಟೆಲಿಕಾಂ

* ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಡಿಜಿಟಲ್ ಮೂಲಸೌಕರ್ಯ

* ನವೋದ್ಯಮಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವ ಸಲುವಾಗಿ, ಅದರಲ್ಲಿ ಹೂಡಿಕೆ ಮಾಡಿದ ಬಂಡವಾಳಕ್ಕೆ ದೊರೆಯುವ ಲಾಭದ (ಏಂಜಲ್ ತೆರಿಗೆ) ಮೇಲಿನ ತೆರಿಗೆ ರದ್ದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.