ಬಂಡವಾಳ ಮಾರುಕಟ್ಟೆ| ಹಣಕಾಸು ವಂಚನೆ, ಇರಲಿ ವಿವೇಚನೆ
ಕೆಲವರು ಹಣಕಾಸಿನ ಹೂಡಿಕೆಗಳನ್ನು ಮಾಡಿಸುವ ಮೊದಲು ಉಚಿತ ಕೂಪನ್, ಉಚಿತ ಪ್ರವಾಸದ ಆಮಿಷಗಳನ್ನು ಒಡ್ಡುತ್ತಾರೆ. ಇಲ್ಲಿ ನಿಮಗಾಗುವ ಲಾಭಕ್ಕಿಂತ ಅವರಿಗಾಗುವ ಲಾಭವೇ ಜಾಸ್ತಿ ಎನ್ನುವುದು ಗೊತ್ತಿರಲಿ. ಇನ್ನು ನೇರವಾಗಿ ಭೇಟಿಯಾಗದೆ ಇ-ಮೇಲ್ ಮೂಲಕ, ಮೊಬೈಲ್ ಕರೆ ಮೂಲಕ ನಿಮ್ಮನ್ನು ತಲುಪಿ ಹೆಚ್ಚು ಲಾಭಾಂಶ ಕೊಡುತ್ತೇವೆ ಹೂಡಿಕೆ ಮಾಡಿ ಎಂದು ಯಾರಾದರೂ ಹೇಳಿದರೆ ಅದನ್ನು ಹಿಂದೆ–ಮುಂದೆ ನೋಡದೆ ನಂಬಬೇಡಿ. ಹಿರಿಯ ನಾಗರಿಕರಿಗೆ ನಿವೃತ್ತಿಯ ಸಮಯದಲ್ಲಿ ಬರುವ ದೊಡ್ಡ ಮೊತ್ತದ ಹಣದ ಮೇಲೆ ಕಣ್ಣಿಟ್ಟು ಅನೇಕರು ವಂಚಿಸುವ ಪ್ರಯತ್ನ ಮಾಡುತ್ತಾರೆ. ನಿಮ್ಮ ಮನೆಯಲ್ಲಿ ಹಿರಿಯ ನಾಗರಿಕರಿದ್ದು ಅವರಿಗೆ ಹಣಕಾಸು ನಿರ್ವಹಣೆ ಸರಿಯಾಗಿ ಗೊತ್ತಿಲ್ಲದಿದ್ದರೆ ಅವರ ಬಗ್ಗೆ ಕಾಳಜಿ ವಹಿಸಿ.Last Updated 27 ಮಾರ್ಚ್ 2022, 19:30 IST