ಬೆಂಗಳೂರು: ಸ್ಮಾರ್ಟ್‌ವಾಚ್ ಮತ್ತು ಫಿಟ್ನೆಸ್ ಗ್ಯಾಜೆಟ್‌ಗಳ ಲೋಕದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವುದು ಆ್ಯಪಲ್ ವಾಚ್. ಪ್ರತಿ ಬಾರಿಯೂ ಹೊಸತನವನ್ನು ಪರಿಚಯಿಸುವುದು ಆ್ಯಪಲ್ ಹೆಚ್ಚುಗಾರಿಕೆ. ಅಲ್ಲದೆ, ಆಪತ್ತಿನ ಸಂದರ್ಭದಲ್ಲಿ ಆ್ಯಪಲ್ ವಾಚ್‌ನ ಫೀಚರ್‌ಗಳು ಹಲವು ಜನರ ಜೀವವನ್ನು ಕಾಪಾಡಿವೆ. ಈ ಬಗ್ಗೆ ಸ್ವತಃ ಆ್ಯಪಲ್ ವಾಚ್ ಬಳಕೆದಾರರು ಸಾಮಾಜಿಕ ಮಾಧ್ಯಮಗಳ ಮೂಲಕ ಹೇಳಿಕೊಳ್ಳುತ್ತಿರುತ್ತಾರೆ. ಗ್ಯಾಜೆಟ್ ಪ್ರಿಯರು ಮಾತ್ರವಲ್ಲದೆ, ಫಿಟ್ನೆಸ್ ಪ್ರಿಯರು ಕೂಡ ಆ್ಯಪಲ್ ವಾಚ್ ಮೊರೆ ಹೋಗುತ್ತಿದ್ದಾರೆ. ಮ್ಯಾರಥಾನ್ ಓಟಗಾರರು ಮತ್ತು ಫಿಟ್ನೆಸ್ ತಜ್ಞರು, ಆಸಕ್ತರು ಆ್ಯಪಲ್ ವಾಚ್‌ನಲ್ಲಿರುವ ವಿವಿಧ ಫೀಚರ್‌ಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಾರೆ.

ಈ ಬಾರಿ ಆ್ಯಪಲ್, ವಾಚ್ ಸರಣಿಯಲ್ಲಿ ಹೊಸದಾಗಿ ಮೂರು ಮಾದರಿಗಳನ್ನು ಪರಿಚಯಿಸಿದೆ. ಆರಂಭಿಕ ಮಾದರಿಯಾಗಿ ಆ್ಯಪಲ್ ವಾಚ್ ಎಸ್‌ಇ 2 ಜೆನ್., ಸಾಮಾನ್ಯ ಬಳಕೆದಾರರಿಗೆ ಆ್ಯಪಲ್ ವಾಚ್ ಸಿರೀಸ್ 8 ಮತ್ತು ಪ್ರೊ ಬಳಕೆದಾರರಿಗೆ ಆ್ಯಪಲ್ ವಾಚ್ ಅಲ್ಟ್ರಾ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.

ಆ್ಯಪಲ್ ನೂತನ ವಾಚ್ ಓಎಸ್ 9 ಜತೆಗೆ, ಪರಿಷ್ಕೃತ ವರ್ಕೌಟ್ ಅಪ್ಲಿಕೇಶಮನ್, ನಿದ್ರೆಯನ್ನು ಗಮನಿಸುವುದು, ಧ್ಯಾನ ಸಹಿತ ವಿವಿಧ ಆಯ್ಕೆಗಳನ್ನು ಪರಿಚಯಿಸಿದೆ.

ಆ್ಯಪಲ್ ವಾಚ್‌ನ ಪ್ರಮುಖ ಫೀಚರ್ ಎಂದರೆ, ಅದು ಫಿಟ್ನೆಸ್ ಟ್ರ್ಯಾಕಿಂಗ್. ವಿವಿಧ ಮೋಡ್ ಹೊಂದಿರುವ ವರ್ಕೌಟ್ ಅಪ್ಲಿಕೇಶನ್, ನಮ್ಮ ಅಗತ್ಯಕ್ಕೆ ತಕ್ಕಂತೆ ನಡಿಗೆ, ಓಟ, ಈಜು, ಸೈಕ್ಲಿಂಗ್, ಮ್ಯಾರಥಾನ್, ಟ್ರೆಕ್ಕಿಂಗ್.. ಹೀಗೆ ಹಲವು ಆಯ್ಕೆಗಳನ್ನು ನೀಡುತ್ತದೆ. ಪ್ರತಿ ಚಲನೆಯನ್ನು ಕೂಡ ಆ್ಯಪಲ್ ವಾಚ್ ನಿಖರವಾಗಿ ಟ್ರ್ಯಾಕ್ ಮಾಡುತ್ತದೆ ಎಂದು ಕಂಪನಿ ಹೇಳುತ್ತದೆ.

ಫಿಟ್ನೆಸ್ ಮತ್ತು ಅಥ್ಲೀಟ್‌ಗಳನ್ನು ಗಮನದಲ್ಲಿರಿಸಿಕೊಂಡು, ಆ್ಯಪಲ್ ಕಂಪನಿ, ಹೊಸ ವಾಚ್ ಮತ್ತು ಓಎಸ್ ರೂಪಿಸುವಾಗ, ಅವರ ಅಭಿಪ್ರಾಯ, ಸಲಹೆ ಕೇಳುತ್ತದೆ. ಅಂದರೆ, ಜನರು ಏನು ಬಯಸುತ್ತಾರೆ ಮತ್ತು ಯಾವ ರೀತಿಯ ಫೀಚರ್, ಆಯ್ಕೆಗಳನ್ನು ಹೊಂದಿರುತ್ತಾರೆ ಎನ್ನುವುದನ್ನು ಗಮನದಲ್ಲಿರಿಸಿಕೊಂಡು, ಅದಕ್ಕೆ ಪೂರಕವಾಗಿ ಅಪ್ಲಿಕೇಶನ್ ರೂಪಿಸುತ್ತದೆ.

ಬ್ಯಾಟರಿ ಬಾಳಿಕೆ
ಲೋ ಪವರ್ ಮೋಡ್ ಆಯ್ಕೆ ಬಳಸಿಕೊಂಡರೆ, ಆ್ಯಪಲ್ ವಾಚ್ ಬ್ಯಾಟರಿ ಬಾಳಿಕೆಯನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ಕಂಪನಿ ಹೇಳಿದೆ.

ಫಿಟ್ನೆಸ್ ಮತ್ತು ಆ್ಯಕ್ಟಿವಿಟಿ ಟ್ರ್ಯಾಕಿಂಗ್ ಮಾತ್ರವಲ್ಲದೆ, ಆ್ಯಪಲ್ ವಾಚ್‌ನಲ್ಲಿ ಇಸಿಜಿ, ಹೃದಯ ಬಡಿತದಲ್ಲಿನ ವ್ಯತ್ಯಾಸ, ರಕ್ತದಲ್ಲಿನ ಆಮ್ಲಜನಕ ಪ್ರಮಾಣ, ಋತುಚಕ್ರದ ಟ್ರ್ಯಾಕಿಂಗ್, ಔಷಧ ತೆಗೆದುಕೊಳ್ಳುವುದಿದ್ದರೆ ನೆನಪಿಸುವುದು, ಗರಿಷ್ಠ ಮಟ್ಟದ ಶಬ್ಧ ಕೇಳಿಸಿದರೆ ಎಚ್ಚರಿಕೆ ನೀಡುವುದು, ಜಿಪಿಎಸ್, ಮಾನಸಿಕ ನೆಮ್ಮದಿಗಾಗಿ ಆಗಾಗ ಧ್ಯಾನ ಮಾಡುವಂತೆ ಎಚ್ಚರಿಸುವುದನ್ನು ಮಾಡುತ್ತದೆ.

ಪ್ರತಿ ಸಂದರ್ಭದಲ್ಲೂ ವಾರದ ಆ್ಯಕ್ಟಿವಿಟಿ ಟ್ರೆಂಡ್, ತಿಂಗಳ ಫಿಟ್ನೆಸ್ ಚಾಲೆಂಜ್, ವಾರ್ಷಿಕ ಟ್ರೆಂಡ್ ಟ್ರ್ಯಾಕ್ ಮಾಡಿ, ಬಳಕೆದಾರರಿಗೆ ಆರೋಗ್ಯ ಕಾಯ್ದುಕೊಳ್ಳುವಂತೆ ಸೂಚಿಸುತ್ತದೆ. ಹೀಗೆ ಆ್ಯಪಲ್ ವಾಚ್‌ನಲ್ಲಿರುವ ಫೀಚರ್‌ಗಳನ್ನು ಸಮರ್ಥವಾಗಿ ಬಳಸಿಕೊಂಡರೆ, ಹೆಚ್ಚಿನ ಪ್ರಯೋಜನವಿದೆ ಎಂದು ಆ್ಯಪಲ್ ಹೇಳುತ್ತದೆ.

ಆ್ಯಪಲ್ ವಾಚ್ 8: ದೈಹಿಕ ಉಷ್ಣತೆ, ಆರೋಗ್ಯ, ಫಿಟ್ನೆಸ್ ಮೇಲೆ ಒತ್ತು

ರನ್ನರ್ ಮತ್ತು ಅಥ್ಲೀಟ್, ಟ್ರೈನರ್ ಆಗಿರುವ ದಿಯಾ ನಾಯರ್ ಹೇಳುವ ಪ್ರಕಾರ, ಪ್ರತಿ ಬಾರಿ ಓಟದಲ್ಲಿ ಪಾಲ್ಗೊಂಡಾಗಲೂ, ನಾನು ಅದರ ಖುಷಿಯನ್ನು ಅನುಭವಿಸುತ್ತೇನೆ. ನನ್ನ ವರ್ಕೌಟ್, ಓಟ, ಹೃದಯ ಬಡಿತ, ಕ್ಯಾಲೊರಿ, ನಾನು ಕ್ರಮಿಸಿದ ದೂರ.. ಹೀಗೆ ಪ್ರತಿಯೊಂದು ವಿವರವೂ ನನಗೆ ದೊರೆಯುವುದರಿಂದ, ನನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಸಾಧ್ಯವಾಗುತ್ತದೆ. ಜತೆಗೆ, ಕಾಲಕಾಲಕ್ಕೆ ಸೂಕ್ತ ಆಹಾರ, ನೀರು ಸೇವನೆ ಕುರಿತು ಕೂಡ ಆ್ಯಪಲ್ ವಾಚ್ ಎಚ್ಚರಿಸುವುದರಿಂದ, ಮ್ಯಾರಥಾನ್‌ನಂತಹ ಹೆಚ್ಚು ಪರಿಶ್ರಮದ ಓಟ, ಚಟುವಟಿಕೆಯಲ್ಲಿ ಸುಲಲಿತವಾಗಿ ಪಾಲ್ಗೊಳ್ಳುವಂತೆ ಮಾಡಲು ಅನುಕೂಲವಾಗುತ್ತದೆ ಎಂದು ಹೇಳುತ್ತಾರೆ.

ಆ್ಯಪಲ್ ವಾಚ್ 7: ದೊಡ್ಡ ಸ್ಕ್ರೀನ್, ವೇಗದ ಚಾರ್ಜಿಂಗ್

ಫಿಟ್ನೆಸ್ ಪ್ರಿಯರು ಮತ್ತು ಓಟಗಾರರೂ ಆಗಿರುವ ಸ್ವಾತಿ ಮುಕುಂದ್ ಹೇಳುವಂತೆ, ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳಲು ಆ್ಯಪಲ್ ವಾಚ್‌ಗಳಲ್ಲಿರುವ ಫೀಚರ್ ಅನ್ನು ಸಮರ್ಥವಾಗಿ ಬಳಸಿಕೊಂಡರೆ, ಅಷ್ಟೇ ಸಾಕಾಗುತ್ತದೆ. ನಾನಂತೂ ಕಳೆದ ಐದು ವರ್ಷಗಳಿಂದ ಆ್ಯಪಲ್ ವಾಚ್‌ನ ಫಿಟ್ನೆಸ್ ಅಪ್ಲಿಕೇಶನ್ ಪ್ರಯೋಜನ ಪಡೆಯುತ್ತಿದ್ದೇನೆ. ಫಿಟ್ನೆಸ್ ಆಕ್ಟಿವಿಟಿ ರಿಂಗ್ ಅನ್ನು ಪ್ರತಿದಿನ ಪೂರ್ಣಗೊಳಿಸುವುದು ನನಗೆ ಅತ್ಯಂತ ಥ್ರಿಲ್ ಕೊಡುತ್ತದೆ. ಮ್ಯಾರಥಾನ್ ಓಡುವಾಗ, ಆ್ಯಪಲ್ ವಾಚ್ ಬಳಸಿಕೊಂಡು, ಅದರ ಮೂಲಕ ನನ್ನ ಓಟದ ವಿವರ, ಸ್ಥಿತಿಯನ್ನು ತಿಳಿದುಕೊಳ್ಳುವುದು ಮತ್ತು ಏರ್‌ಪಾಡ್ಸ್ ಪ್ರೋನಲ್ಲಿ ಸಂಗೀತ ಕೇಳುವುದು ನಿಜಕ್ಕೂ ಮಜವಾಗಿರುತ್ತದೆ. ನನ್ನ ಓಟವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುತ್ತದೆ ಎಂದಿದ್ದಾರೆ.

ಆ್ಯಪಲ್ ಐಫೋನ್ 14 ಪ್ರೊ: ಫೋಟೋಗ್ರಫಿ-ಪ್ರಿಯರಿಗೆ ಅಂಗೈಯ ಸಂಗಾತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.