ಬೆಂಗಳೂರು: ನಗರ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿಯೇ ದೊಡ್ಡ ಸಮಸ್ಯೆ. ಇದಕ್ಕೆ ಪರಿಹಾರ ನೀಡಲು ಬೆಂಗಳೂರು ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (ಐಐಐಟಿಬಿ) ವಿದ್ಯಾರ್ಥಿಗಳು
ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ಮತ್ತು ಒಣ ಕಸವನ್ನು ಒಂದು ತಿಂಗಳೊಳಗೆ ಗೊಬ್ಬರವನ್ನಾಗಿ ಪರಿವರ್ತಿಸುವ ‘ರಿಮೋಟ್ ನಿಯಂತ್ರಿತ ಕಸದ ಬುಟ್ಟಿ’ಯನ್ನು ಅಭಿವೃದ್ಧಿಪಡಿಸಿದ್ದಾರೆ.

ಬೆಂಗಳೂರು ಅರಮನೆ ಆವರಣದಲ್ಲಿ ನಡೆಯುತ್ತಿರುವ ‘ಬೆಂಗಳೂರು ಟೆಕ್ ಶೃಂಗ’ದಲ್ಲಿ ಈ ಕಸದ ಬುಟ್ಟಿಯನ್ನು ಪ್ರದರ್ಶನಕ್ಕೆ ಇರಿಸಲಾಗಿದೆ.

ಇದಕ್ಕೆ ‘ರಿಮೋಟ್ ಕಂಪೋಸ್ಟ್ ಮಾನಿಟರಿಂಗ್ ಫಾರ್ ಸಸ್ಟೆನೇಬಲ್ ಅಗ್ರಿಕಲ್ಚರ್’ ಎಂದು ಹೆಸರಿಸಲಾಗಿದೆ. ಐಐಐಟಿಬಿಯ ಪ್ರಾಧ್ಯಾಪಕರಾದ ಜ್ಯೋತ್ಸ್ನಾ ಬಾಪಟ್, ಶಶಿರೇಖಾ ಜಿವಿಕೆ ಅವರ ನೇತೃತ್ವದಲ್ಲಿ ಈ ಸಾಧನವನ್ನು ಅಭಿವೃದ್ಧಿಪಡಿಸಲಾಗಿದೆ.

ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಗ್ರಹಿಸಿ, ಅದನ್ನು ಒಂದೆಡೆ ರಾಶಿ ಹಾಕಲಾಗುತ್ತದೆ. ಇದರಿಂದ ಮೀಥೇನ್, ಇಂಗಾಲದ ಡೈ ಆಕ್ಸೈಡ್ ಸೇರಿದಂತೆ ವಿಷಕಾರಿ ಅನಿಲಗಳು ಹೊರಹೊಮ್ಮುತ್ತವೆ. ಇದು ನಗರದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ಸಮಸ್ಯೆಗೆ ಮನೆಗಳಲ್ಲೇ ಪರಿಹಾರ ಕಂಡುಕೊಳ್ಳಲು ಈ ಕಸದ ಬುಟ್ಟಿಗಳು ಸಹಾಯಕವಾಗಲಿವೆ.

‘ನಗರ ಪ್ರದೇಶಗಳಲ್ಲಿರುವ ಅಪಾರ್ಟ್ಮೆಂಟ್ಗಳಲ್ಲಿ, ಬಿಬಿಎಂಪಿ ಕಸ ನಿರ್ವಹಣಾ ಕೇಂದ್ರಗಳಲ್ಲಿ, ರೈತರ ಜಮೀನುಗಳಲ್ಲಿ, ಸಾರ್ವಜನಿಕರು ತಮ್ಮ ಮನೆಗಳಲ್ಲಿ ಈ ಬುಟ್ಟಿಗಳನ್ನು ಅಳವಡಿಸಿ
ಕೊಳ್ಳಬಹುದು. ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಿಂದ ಗೊಬ್ಬರ ಉತ್ಪಾದಿಸಿ, ಅದನ್ನು ರೈತರಿಗೆ ಮಾರಾಟ ಮಾಡಿ ಆದಾಯ ಪಡೆಯಬಹುದು’ ಎಂದು ಐಐಐಟಿಬಿ ವಿದ್ಯಾರ್ಥಿಗಳಾದ ಅನ್ನಪೂರ್ಣ ಜಿ.ಎಚ್. ಮತ್ತು ಅರುಣ್ ಅವರು ‘ಪ್ರಜಾವಾಣಿ’ಗೆ ವಿವರಿಸಿದರು.

‘ಈ ಕಸದ ಬುಟ್ಟಿ ಸ್ಮಾರ್ಟ್ ಸೆನ್ಸಾರ್ ಹಬ್ ಎಂಬ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಸುತ್ತದೆ. ಇದು ಕಸವನ್ನು ಗೊಬ್ಬರವನ್ನಾಗಿ ಮಾರ್ಪಡಿಸುವ ಪ್ರಕ್ರಿಯೆಯ ಮೇಲೆ ನಿಗಾವಹಿಸಿ, ದತ್ತಾಂಶವನ್ನು ಸಂಗ್ರಹಿಸಿ ರಿಮೋಟ್ ಮೂಲಕ ಸಂದೇಶ ರವಾನಿಸಲಿದೆ. ಹಸಿ ತ್ಯಾಜ್ಯ ಹೆಚ್ಚಾಗಿದ್ದು, ಅದಕ್ಕೆ ಒಣಕಸ ಹಾಕುವಂತೆ ಸಂದೇಶ ನೀಡಲಿದೆ. ಇದು ಬಿಬಿಎಂಪಿಗೆ ಅನುಕೂಲವಾಗಲಿದೆ’ ಎಂದು ವಿವರಿಸಿದರು.

‘ಐಐಐಟಿಬಿಯಲ್ಲಿ 800 ಕೆ.ಜಿ ಕಸ ಸಂಗ್ರಹಿಸುವ ಸಾಮರ್ಥ್ಯದ 10 ಕಸದ ಬುಟ್ಟಿಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದರಿಂದ ಉತ್ಪತ್ತಿಯಾದ ಗೊಬ್ಬರವನ್ನು ಉದ್ಯಾನಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದರ ಪೇಟೆಂಟ್ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಪೇಟೆಂಟ್ ಪಡೆದ ನಂತರ 800 ಕೆ.ಜಿ. ಸಾಮರ್ಥ್ಯದ ಒಂದು ಕಸದ ಬುಟ್ಟಿಗೆ ಅಂದಾಜು ₹12 ಸಾವಿರ ದರ ನಿಗದಿಪಡಿಸಲಾಗುತ್ತದೆ’ ಎಂದರು.

ಮಣ್ಣಿನ ಪರೀಕ್ಷೆಗೆ ‘ಅಗ್ರಿಸೆನ್ಸ್’

ರೈತರು ಮಣ್ಣಿನ ಪರೀಕ್ಷೆ ಮಾಡಿಸಲು ಪರೀಕ್ಷಾ ಕೇಂದ್ರಗಳಿಗೆ ಹೋಗುವ ಅವಶ್ಯಕತೆ ಇಲ್ಲ. ಸ್ವತಃ ರೈತರೇ ಮಣ್ಣಿನ ಪರೀಕ್ಷೆ ಮಾಡಬಹುದಾದ ‘ಅಗ್ರಿಸೆನ್ಸ್’ ಎಂಬ ಸಾಧನವನ್ನು ಐಐಐಟಿಬಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.

‘ಅಗ್ರಿಸೆನ್ಸ್ ಮೂಲಕ ರೈತರು ತಮ್ಮ ಜಮೀನಿನ ಮಣ್ಣನ್ನು ಒಂದು ಕುಂಡದಲ್ಲಿ ಸಂಗ್ರಹಿಸಿ ಈ ಸಾಧನವನ್ನು ಅದರಲ್ಲಿ ಅಳವಡಿಸಬೇಕು. ನಂತರ ಮಣ್ಣಿನ ಗುಣಮಟ್ಟವನ್ನು ಅಧ್ಯಯನ ಮಾಡಿ ದತ್ತಾಂಶ ಸಂಗ್ರಹಿಸಿ ರೈತರ ಮೊಬೈಲ್ ಸಂಖ್ಯೆಗೆ ಸಂದೇಶದ ಮೂಲಕ ರವಾನಿಸಲಿದೆ. ಈ ದತ್ತಾಂಶಗಳನ್ನು ಅಧ್ಯಯನ ಮಾಡಿ ಮಣ್ಣಿಗೆ ಬೇಕಾಗುವ ಪೋಷಕಾಂಶಗಳನ್ನು ನೀಡಬಹುದು. ಇದರ ಬೆಲೆ ₹800 ಇರಲಿದೆ’ ಎಂದು ವಿದ್ಯಾರ್ಥಿಗಳಾದ ಕುಶಾಗ್ರಹ ಮತ್ತು ಕಫೀಲ್ ಅಬ್ಬಾಸ್ ಮೋಮಿನ್ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.