ಬೆಂಗಳೂರು: ತೆಳುವಾದ, ಸುಲಭವಾಗಿ ಬೇರೆಡೆ ಒಯ್ಯಬಹುದಾದ, ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಹೆಚ್ಪಿ ಎಲೈಟ್ ಬುಕ್ ಅಲ್ಟ್ರಾ ಮತ್ತು ಹೆಚ್ಪಿ ಒಮ್ನಿ ಬುಕ್ ಎಕ್ಸ್ ಶಕ್ತಿಶಾಲಿ ಲ್ಯಾಪ್ಟಾಪ್ಗಳನ್ನು ಸೋಮವಾರ ಬೆಂಗಳೂರಿನಲ್ಲಿ ಹೆಚ್ಪಿ ಕಂಪನಿಯು ಬಿಡುಗಡೆ ಮಾಡಿದೆ.

ಇವು ಮೊದಲ ಕೋಪೈಲಟ್+ ವೈಶಿಷ್ಟ್ಯವಿರುವ ಪಿಸಿಗಳಾಗಿವೆ. ಇವುಗಳಲ್ಲಿ ಸ್ನ್ಯಾಪ್ಡ್ರಾಗನ್ ಎಕ್ಸ್ ಎಲೈಟ್ ಪ್ರೊಸೆಸರ್ ಇದ್ದು, ಚಿತ್ರ, ಆಡಿಯೊ, ಪಠ್ಯ, ವಿಡಿಯೊ ರಚಿಸುವವರಿಗೆ ವಿನೂತನವಾದ ಎಐ ತಂತ್ರಜ್ಞಾನವು ಹೆಚ್ಚು ನೆರವು ನೀಡಲಿದೆ ಎಂದು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಹೆಚ್ಪಿ ಇಂಡಿಯಾದ ಹಿರಿಯ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿನೀತ್ ಗೆಹಾನಿ ಹೇಳಿದರು.

ಹೆಚ್ಪಿ ಎಲೈಟ್ ಬುಕ್ ಅಲ್ಟ್ರಾ ಸಾಧನವು ವಿಶೇಷವಾಗಿ ವಾಣಿಜ್ಯೋದ್ದೇಶಿತ ಚಟುವಟಿಕೆಗಳಿಗೆ ಮತ್ತು ಹೆಚ್ಪಿ ಒಮ್ನಿ ಬುಕ್ ಎಕ್ಸ್ ಅನ್ನು ವೈಯಕ್ತಿಕ ಬಳಕೆಯ ಗ್ರಾಹಕರಿಗಾಗಿ ರೂಪಿಸಲಾಗಿದೆ. ಎರಡರಲ್ಲಿಯೂ ಸುಮಾರು 26 ಗಂಟೆಗಳ ಬ್ಯಾಟರಿ ಬ್ಯಾಕಪ್ ಇದ್ದು, ಕೇವಲ 1.3 ಕೆ.ಜಿ. ಹಗುರವಿದೆ.

ಹೊಸ ಲ್ಯಾಪ್ಟಾಪ್ಗಳು ಅಂತರ್ನಿರ್ಮಿತ ಹೆಚ್ಪಿ ಎಐ ಜೊತೆಯಲ್ಲೇ ಬರುತ್ತವೆ. ಕೋಪೈಲಟ್+ ತಂತ್ರಜ್ಞಾನವು ಕೂಡ ಅಡಕವಾಗಿದ್ದು, ಹೆಚ್ಚು ವೈಯಕ್ತೀಕರಿಸಿದ, ಶಕ್ತಿಯುತ ಕಂಪ್ಯೂಟಿಂಗ್ ಅನುಭವಕ್ಕಾಗಿ ಪೂರಕವಾಗಿದೆ ಮತ್ತು ಸೃಜನಶೀಲತೆ, ಉತ್ಪಾದಕತೆ ಹೆಚ್ಚಿಸಲು ಉತ್ತೇಜನ ನೀಡುತ್ತವೆ. ಪಾಲಿ ಕ್ಯಾಮೆರಾ ಪ್ರೊ ವೈಶಿಷ್ಟ್ಯವು ವಿಡಿಯೊ ಸಂವಹನದ ವೇಳೆ, ಮುಖವನ್ನೇ ಫೋಕಸ್ ಮಾಡುವ, ಹಿನ್ನೆಲೆ ಮಸುಕಾಗಿಸುವ ಮತ್ತು ಸ್ವಯಂಚಾಲಿತವಾಗಿ ಚೌಕಟ್ಟಿನಲ್ಲಿ ಕೂರಿಸುವಲ್ಲಿ ನೆರವಾಗುತ್ತದೆ. ವೂಲ್ಫ್ ಪ್ರೊ ಸೆಕ್ಯೂರಿಟಿ ಹೆಸರಿನ ನೆಕ್ಸ್ಟ್ ಜೆನ್ ಆ್ಯಂಟಿವೈರಸ್ (NGAV) ತಂತ್ರಜ್ಞಾನವು ಇದರಲ್ಲಿದ್ದು, ವಾಣಿಜ್ಯ ಬಳಕೆದಾರರಿಗೆ ಹೆಚ್ಚುವರಿ ಸುರಕ್ಷತೆ ನೀಡಲಿದೆ.

ದರ & ಲಭ್ಯತೆ: ಹೆಚ್ಪಿ ಎಲೈಟ್ ಬುಕ್ ಅಲ್ಟ್ರಾ ಎಲ್ಲಾ ಎಚ್ ಪಿ ವರ್ಲ್ಡ್ ಸ್ಟೋರ್ಗಳು ಮತ್ತು ಹೆಚ್ಪಿ ಆನ್ ಲೈನ್ ಸ್ಟೋರ್ಗಳಲ್ಲಿ ಲಭ್ಯವಿದ್ದು, ಬೆಲೆ ₹1,69,934 ರಿಂದ ಆರಂಭವಾಗುತ್ತದೆ. ಹೆಚ್ಪಿ ಒಮ್ನಿಬುಕ್ ಎಕ್ಸ್ ಬೆಲೆ ₹1,39,999 ರಿಂದ ಆರಂಭವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.