ಬೆಂಗಳೂರು: ನೋಕಿಯಾ ಫೋನ್‌ಗಳ ತಯಾರಕ ಸಂಸ್ಥೆ ‘ಎಚ್‌ಎಂಡಿ ಗ್ಲೋಬಲ್’, ‘ಸಿ’ ಸರಣಿಯ ‘ನೋಕಿಯಾ ಸಿ32’ ಮೊಬೈಲ್ ಫೋನ್ ಅನ್ನು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ನೋಕಿಯಾದ ‘ಸಿ’ ಸರಣಿಯಲ್ಲಿ 50ಎಂಪಿ ಡ್ಯುಯಲ್ ಕ್ಯಾಮೆರಾವುಳ್ಳ ಮೊದಲ ಫೋನ್ ಇದಾಗಿದ್ದು, ಸುಧಾರಿತ ಇಮೇಜಿಂಗ್ ವ್ಯವಸ್ಥೆಯನ್ನು ಹೊಂದಿದೆ. 8ಎಂಪಿ ಸೆಲ್ಫಿ ಕ್ಯಾಮೆರಾ ಇದೆ. ಅತ್ಯಾಕರ್ಷಕ ವಿನ್ಯಾಸದ ಈ ಫೋನ್ ‘ಆಂಡ್ರಾಯ್ಡ್ 13’ ಒಎಸ್ ಹೊಂದಿದೆ.

5000ಎಂಎಎಚ್ ಬ್ಯಾಟರಿ ಸಾಮರ್ಥ್ಯ ಇರುವುದರಿಂದ, ಫೋನ್‌ನ ಚಾರ್ಜಿಂಗ್ ಬಾಳಿಕೆ ಹೆಚ್ಚು ದಿನ ಬರಲಿದೆ.

ಎಚ್‌ಎಂಡಿ ಗ್ಲೋಬಲ್‌ನ ಭಾರತ ಮತ್ತು ಏಷ್ಯಾ–ಪೆಸಿಫಿಕ್ ವಲಯದ ಉಪಾಧ್ಯಕ್ಷ ರವಿ ಕುನ್ವರ್ ಮಾತನಾಡಿ, ’ನೋಕಿಯಾ ಸಿ22ನ ಯಶಸ್ಸಿನ ಬಳಿಕ ನಾವು ನೋಕಿಯಾ ಸಿ32 ಅನ್ನು ಪರಿಚಯಿಸುತ್ತಿದ್ದೇವೆ. ವಿಶ್ವಾಸಾರ್ಹ ಕಾರ್ಯಕ್ಷಮತೆ, ಅದ್ಭುತ ಇಮೇಜಿಂಗ್ ಮತ್ತು ದೀರ್ಘಾವಧಿಯ ಬ್ಯಾಟರಿ ಬಾಳಿಕೆಯನ್ನು ಈ ಫೋನ್ ನೀಡುತ್ತದೆ. ವಿನ್ಯಾಸದಲ್ಲಿ ನಾವು ರಾಜಿಯಾಗಿಲ್ಲ. 6.5 ಎಚ್‌ಡಿ ಡಿಸ್‌ಪ್ಲೆ ಹೊಂದಿರುವ ಫೋನ್‌ಗೆ ಟಫನ್ಡ್ ಗ್ಲಾಸ್ (ಗಟ್ಟಿ ಗಾಜು) ಫಿನಿಶಿಂಗ್ ಇರಲಿದೆ’ ಎಂದು ಅವರು ತಿಳಿಸಿದ್ದಾರೆ.

ಟಫನ್ಡ್ ಗ್ಲಾಸ್ ಫೋನ್‌ಗೆ ಎರಡೂ ಬದಿಗಳಿಂದ ರಕ್ಷಣೆ ನೀಡುತ್ತದೆ. ಒಳಭಾಗದಲ್ಲಿ ಹೆಚ್ಚಿನ ರಕ್ಷಣೆಗಾಗಿ ಲೋಹದ ಚಾಸಿಸ್ ಅಳವಡಿಸಲಾಗಿದೆ. ಈ ಫೋನ್‌ನಲ್ಲಿರುವ ಐಪಿ52-ರೇಟೆಡ್ ರಕ್ಷಣಾ ವ್ಯವಸ್ಥೆಯು ಗೀರುಗಳು, ಹಾನಿ ಆಗದಂತೆ ತಡೆಯುತ್ತದೆ. ‘ಅಪ್ಲಿಕೇಶನ್ ಹೈಬರ್ನೇಶನ್’ ಮತ್ತು ‘ಸೂಪರ್ ಬ್ಯಾಟರಿ’ ಸೇವರ್‌ಗಳು ಚಾರ್ಜಿಂಗ್ ಹೆಚ್ಚು ಹೊತ್ತು ಬರುವಂತೆ ಮಾಡುತ್ತವೆ. ನಿಮ್ಮ ಡೇಟಾವನ್ನು ಸಂರಕ್ಷಿಸಲು ಎರಡು ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್‌ಗಳು ಸಿ-ಸರಣಿಯಲ್ಲಿ ಇರಲಿವೆ. ಮೊಬೈಲ್‌ಗೆ ಒಂದು ವರ್ಷಗಳ ರೀಪ್ಲೇಸ್‌ಮೆಂಟ್ ಗ್ಯಾರೆಂಟಿಯೂ ಇದೆ.

3ಜಿಬಿ ಹೆಚ್ಚುವರಿ ವರ್ಚುವಲ್ ರ್‍ಯಾಮ್, ಮೊಮೊರಿ ಎಕ್ಸ್‌ಟೆನ್ಶನ್–3ನಿಂದಾಗಿ ಆ್ಯಪ್‌ಗಳ ಸುಲಲಿತ ಬಳಕೆ ಸಾಧ್ಯವಾಗಲಿದೆ.

ಬೆಲೆ, ಬಣ್ಣ, ಲಭ್ಯತೆ: ಹತ್ತಿರದ ಮೊಬೈಲ್ ಅಂಗಡಿಗಳು ಮತ್ತು Nokia.comನಲ್ಲಿ ನೋಕಿಯಾ ಸಿ32 ಫೋನ್‌ಗಳು ಸಿಗಲಿದೆ. ‘ಚಾರ್ಕೋಲ್’, ‘ಬ್ರೀಜಿ ಮಿಂಟ್’ ಮತ್ತು ’ಬೀಚ್ ಪಿಂಕ್’ ಬಣ್ಣಗಳಲ್ಲಿ ಈ ಫೋನ್ ಲಭ್ಯ. 7ಜಿಬಿ+ 64ಜಿಬಿ ಮತ್ತು 7ಜಿಬಿ + 128 ಜಿಬಿ ಸಂಗ್ರಹ ಮತ್ತು ಮೆಮೊರಿ ಸಾಮರ್ಥ್ಯವಿರುವ ಈ ಫೋನ್‌ಗಳ ಬೆಲೆ ಕ್ರಮವಾಗಿ ₹8,999 ಮತ್ತು ₹9,499 ಇದೆ.

ಜಿಯೋ ಪಾಲುದಾರಿಕೆ

ನೋಕಿಯಾ ಬಳಕೆದಾರರಿಗೆ ₹399 ಜಿಯೊ ಪ್ಲಸ್ (ಪೋಸ್ಟ್‌ಪೇಯ್ಡ್) ಪ್ಲಾನ್‌ನಲ್ಲಿ 75ಜಿಬಿ ಮಾಸಿಕ ಡೇಟಾ + 3 ಆಡ್-ಆನ್ ಸಿಮ್‌ಗಳನ್ನು ಒದಗಿಸಲಾಗುತ್ತದೆ.

ಜಿಯೊ ಪ್ಲಸ್(ಪೋಸ್ಟ್‌ಪೇಯ್ಡ್) ನೋಕಿಯಾ ಫೋನ್ ಬಳಕೆದಾರರು ₹3500 ಮೌಲ್ಯದ ವಿಶೇಷ ಕೊಡುಗೆಗಳನ್ನು ಪಡೆಯಲಿದ್ದಾರೆ. ₹1000 ಮೌಲ್ಯದ 100 ಜಿಬಿ ಹೆಚ್ಚುವರಿ ಡೇಟಾ (10 ತಿಂಗಳವರೆಗೆ 10 ಜಿಬಿ ಹೆಚ್ಚುವರಿ ಮಾಸಿಕ ಡೇಟಾ) ಪಡೆಯುತ್ತಾರೆ. ₹2500 ಮೌಲ್ಯದ ಹೆಚ್ಚುವರಿ ಕೂಪನ್‌ಗಳು ದೊರೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.