ನವದೆಹಲಿ:ಗುಣಮಟ್ಟದ ಫೀಚರ್ ಫೋನ್ ತಯಾರಿಕಾಕಂಪನಿ ನೋಕಿಯಾ, ಎಲ್ಲರಿಗೂ ಇಷ್ಟವಾಗಬಲ್ಲಆಕರ್ಷಕ ವಿನ್ಯಾಸದ ತನ್ನ ಹೊಸ ಉತ್ಪನ್ನ Nokia 2660 ಫ್ಲಿಪ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.ಈ ಫೋನ್ ಮಾತ್ರವಲ್ಲದೆ, ಅತ್ಯುತ್ತಮ ಗುಣಮಟ್ಟ ಹಾಗೂ ಸಾಂಪ್ರದಾಯಿಕ ಶೈಲಿಯ ವಿನ್ಯಾಸ ಹೊಂದಿರುವ Nokia 8210 4G ಮೊಬೈಲ್ ಅನ್ನೂ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Nokia 2660ಫ್ಲಿಪ್‌ವೈಶಿಷ್ಟ್ಯಗಳೇನು?
ಗ್ರಾಹಕ ಸ್ನೇಹಿಯಾಗಿNokia 2660ಫ್ಲಿಪ್ ಕಾರ್ಯನಿರ್ವಹಿಸುತ್ತದೆ.ಫ್ಲಿಪ್ ಮಾಡಬಹುದಾದ ಈ ಮೊಬೈಲ್‌ನ ಮೈಕ್ ಅಥವಾ ಇಯರ್ ಫೋನ್ ಅನ್ನು ಹತ್ತಿರಕ್ಕೆ ತೆಗೆದುಕೊಳ್ಳುವ ಮೂಲಕ ಕರೆಗಳನ್ನು ನಿರ್ವಹಿಸಬಹುದಾಗಿದೆ. 2.8 ಇಂಚಿನ ಡಿಸ್‌ಪ್ಲೇ ಹೊಂದಿದೆ. ಹೀಗಾಗಿ ಪರದೆ ಮೇಲೆ ಪ್ರದರ್ಶನವಾಗುವಕರೆ ಅಥವಾ ಇನ್ನಿತರ ನೋಟಿಫಿಕೇಷನ್‌ಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ.

ಅಗಲವಾದ ಡಿಸ್‌ಪ್ಲೇ, ದೊಡ್ಡ ಬಟನ್‌ಗಳನ್ನು ಹೊಂದಿರುವ ಈ ಫೋನ್, ತುರ್ತು ಸೇವೆಗಳನ್ನು ಪಡೆಯಲು ಅನುಕೂಲವಾಗಬಲ್ಲ ವಿಶೇಷ ಬಟನ್ ವಿನ್ಯಾಸವನ್ನೂ ಹೊಂದಿದ್ದು, ಅತ್ಯುತ್ತಮ ಬಳಕೆಯ ಅನುಭವ ನೀಡಬಲ್ಲದು. ಅಷ್ಟಲ್ಲದೆ ಯಾವುದೇ ಕರೆಗಳು ಅಥವಾ ಸಂದೇಶಗಳು ಸ್ಪಷ್ಟವಾಗಿ ಕೇಳುವಂತೆ ಸೌಂಡ್ ಸೆಟ್ ಮಾಡಿಕೊಳ್ಳಬಹುದಾಗಿದೆ.

ಸಂವಹನಕ್ಕೆ ನೆರವಾಗುವ 4ಜಿ ನೆಟ್‌ವರ್ಕ್ ಕನೆಕ್ಟಿವಿಟಿ ಸೌಲಭ್ಯ ಇರುವ ಈ ಫೋನ್,1450mAhಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಹೆಚ್ಚುವರಿಯಾಗಿ ಸೇರಿಸಲಾಗಿರುವ ತುರ್ತು ಸೇವೆ ಬಟನ್ ಮೂಲಕ, ನಿಮ್ಮ ಪ್ರೀತಿ ಪಾತ್ರರನ್ನು ತುರ್ತಾಗಿ ಸಂಪರ್ಕಿಸಬಹುದಾಗಿದೆ. ಅನಿರೀಕ್ಷಿತ ಸಂದರ್ಭಗಳಲ್ಲಿ ನೆರವು ಪಡೆಯಲು ಇದು ಅನುಕೂಲ ಮಾಡಿಕೊಡಲಿದೆ.

ಗುಣಮಟ್ಟದ ಕರೆ, ಸಂಭಾಷಣೆಗೆ ಅನುಕೂಲವಾಗುವಂತೆ, ಧ್ವನಿ ಸ್ಪಷ್ಟವಾಗಿ ಕೇಳುವ ರೀತಿಯಲ್ಲಿ ವಾಲ್ಯೂಮ್ ಸೆಟ್ ಮಾಡಿಕೊಳ್ಳಬಹುದಾಗಿದೆ. ಎಂದಿನಂತೆ ಬಾಳಿಕೆಗೆ ಒತ್ತು ನೀಡಲಾಗಿದ್ದು, ಈ ಫೋನ್ ದೀರ್ಘ ಸಮಯ ನಿಮ್ಮೊಂದಿಗೆ ಇರಲಿದೆ.

ಮೂರು (ಕಪ್ಪು, ನೀಲಿ ಮತ್ತು ಕೆಂಪು) ಬಣ್ಣಗಳಲ್ಲಿ ಸಿಗುವಈ ಫೋನ್ ಭಾರತದಲ್ಲಿ ₹ 4,999ಕ್ಕೆ ಲಭ್ಯವಿದ್ದು ಎಲ್ಲ ಮೊಬೈಲ್ ಸ್ಟೋರ್‌ಗಳು,Nokia.com/phones ಹಾಗೂ ಇ–ಕಾಮರ್ಸ್ ತಾಣಗಳಲ್ಲಿ ಖರೀದಿಸಬಹುದಾಗಿದೆ.

Nokia 8210 4Gವೈಶಿಷ್ಟ್ಯಗಳೇನು?
ದೀರ್ಘ ಬಾಳಿಕೆಗೆ ಒತ್ತು ನೀಡಲಾಗಿರುವ Nokia 8210 4G,2.8 ಇಂಚಿನ ಡಿಸ್‌ಪ್ಲೇ, ಆಧುನಿಕ ವೈಶಿಷ್ಟ್ಯಗಳು ಮತ್ತು ಸಾಂಪ್ರದಾಯಿಕ ಶೈಲಿಯ ವಿನ್ಯಾಸದಲ್ಲಿ ಲಭ್ಯವಿದೆ. ಇವು ಬಳಕೆಯನ್ನು ಮತ್ತಷ್ಟು ಸುಲಭಗೊಳಿಸಿವೆ. ಹೊಸ ರೀತಿಯ ಡಿಸ್‌ಪ್ಲೇ ಫ್ರೇಮ್ ಹಾಗೂ ಕೀ–ಬೋರ್ಡ್ ವಿನ್ಯಾಸ ಈ ಫೋನ್‌ಗೆ ಹೊಸ ಲುಕ್ ನೀಡಿವೆ.

ಇನ್‌ಬಿಲ್ಟ್ ಎಂಪಿ3 ಪ್ಲೇಯರ್, ವಯರ್‌ಲೆಸ್ ಹಾಗೂ ವಯರ್ ಒಳಗೊಂಡ ಸುಧಾರಿತ ಎಫ್‌ಎಂ ರೇಡಿಯೊ,ಸಂವಹನಕ್ಕೆ ನೆರವಾಗುವ 4ಜಿ ನೆಟ್‌ವರ್ಕ್ ಕನೆಕ್ಟಿವಿಟಿ, ಡ್ಯುಯಲ್ ಸಿಮ್ ವೋಲ್ಟ್ ವಾಯ್ಸ್ ಕಾಲ್ ಸಾಮರ್ಥ್ಯ, ಅಮೂಲ್ಯ ಕ್ಷಣಗಳನ್ನು ಸೆರೆ ಹಿಡಿಯುವ ಉತ್ತಮ ಗುಣಮಟ್ಟದ ಕ್ಯಾಮೆರಾ ಮತ್ತು ಸ್ನೇಕ್ ಗೇಮ್ ಅನ್ನು ಒಳಗೊಂಡಿದೆ.ಹಗುರ ಹಾಗೂ ಕಾಂಪ್ಯಾಕ್ಟ್ ವಿನ್ಯಾಸದ ಈ ಫೋನ್,ಸುದೀರ್ಘ ಮಾತುಕತೆಗೆ ಸಹಕರಿಸುವ ಅತ್ಯುತ್ತಮ ಬ್ಯಾಟರಿಸೌಲಭ್ಯ ಹೊಂದಿದೆ.

₹ 3,999 ಬೆಲೆಯ ಈ ಫೋನ್ ಅನ್ನುಎಲ್ಲ ಮೊಬೈಲ್ ಸ್ಟೋರ್‌ಗಳು,Nokia.com/phones ಹಾಗೂ ಇ–ಕಾಮರ್ಸ್ ತಾಣಗಳಲ್ಲಿ ಕೊಂಡುಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.