ಬೆಂಗಳೂರು: ಅತಿ ಹಗುರ, ಆಕರ್ಷಕ ವಿನ್ಯಾಸ ಮತ್ತು ಗರಿಷ್ಠ ಬಾಳಿಕೆಯ ಬ್ಯಾಟರಿ ಸಹಿತ ಎಲ್‌ಜಿ ನೂತನ ಗ್ರಾಮ್ ಲ್ಯಾಪ್‌ಟಾಪ್ ಸರಣಿ ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.

ನೂತನ ಗ್ರಾಮ್ ಲ್ಯಾಪ್‌ಟಾಪ್ ಸರಣಿಯಲ್ಲಿ ದೇಶದಲ್ಲಿ ನಾಲ್ಕು ಮಾದರಿಗಳು ಬಿಡುಗಡೆಯಾಗಿವೆ.

ಎಲ್‌ಜಿ ಗ್ರಾಮ್ 14– 14Z90Q, ಎಲ್‌ಜಿ ಗ್ರಾಮ್ 16– 16T90Q-
2in1 ಮತ್ತು ಎಲ್‌ಜಿ ಗ್ರಾಮ್ 16– 16Z90Q ಹಾಗೂ ಗ್ರಾಮ್ 17– 17Z90Q ದೇಶದಲ್ಲಿ ಲಭ್ಯವಿದೆ ಎಂದು ಕಂಪನಿ ಹೇಳಿದೆ.

ನೂತನ ಲ್ಯಾಪ್‌ಟಾಪ್ ಸರಣಿ 16:10 ಡಿಸ್‌ಪ್ಲೇ ಹೊಂದಿದ್ದು, ಗರಿಷ್ಠ ಪ್ರಮಾಣದಲ್ಲಿ ಬಳಕೆದಾರರಿಗೆ ಪ್ರಯೋಜನವಾಗಲಿದೆ.

ಎಲ್‌ಜಿ ಗ್ರಾಮ್ ಲ್ಯಾಪ್‌ಟಾಪ್‌ಗಳಲ್ಲಿ ಇಂಟೆಲ್ ಇವೊ ಪ್ಲಾಟ್‌ಫಾರ್ಮ್ ಬಳಸಲಾಗಿದ್ದು, 12th Gen ಇಂಟೆಲ್ ಕೋರ್ i7 ಪ್ರೊಸೆಸರ್ ಜತೆಗೆ LPDDR 5 RAM ಮತ್ತು NVMe Gen 4 SSD ಬೆಂಬಲ ಹೊಂದಿವೆ. ಇದು ವೇಗದ ಕಾರ್ಯಾಚರಣೆಗೆ ಅನುಕೂಲ ಮಾಡಿಕೊಡುತ್ತದೆ ಎಂದು ಕಂಪನಿ ಹೇಳಿದೆ.

ಫೇಸ್ ಲಾಗಿನ್, ಎಲ್‌ಜಿ ಗ್ಲಾನ್ಸ್ ಹಾಗೂ ನಾಯ್ಸ್ ಕ್ಯಾನ್ಸಲೇಶನ್‌ನಂತಹ ವಿಶೇಷತೆಗಳನ್ನು ಎಲ್‌ಜಿ ಗ್ರಾಮ್ ಲ್ಯಾಪ್‌ಟಾಪ್ ಸರಣಿ ಹೊಂದಿದೆ.

ಎಚ್ಪಿಯಿಂದ ಆಲ್–ಇನ್–ಒನ್ ಪಿಸಿ

ಆನ್‌ಲೈನ್ ಮತ್ತು ಆಫ್‌ಲೈನ್ ಮಾರುಕಟ್ಟೆ ಮೂಲಕ ನೂತನ ಲ್ಯಾಪ್‌ಟಾಪ್ ಸರಣಿ ಲಭ್ಯವಿದ್ದು, 14 ಇಂಚಿನ ಡಿಸ್‌ಪ್ಲೇ ಸಹಿತ ಆರಂಭಿಕ ಮಾದರಿಗೆ ದೇಶದಲ್ಲಿ ₹94,999 ದರ ಹೊಂದಿದೆ.

iQOO 9T: ದೇಶದ ಗ್ಯಾಜೆಟ್ ಲೋಕಕ್ಕೆ ಹೊಸ ಫೋನ್ ಬಿಡುಗಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.