ನೋಕಿಯಾ ತನ್ನ ಹೊಸ ಸ್ಮಾರ್ಟ್ ಫೋನ್ ‘Nokia X30 5G‘ಯನ್ನು ಶನಿವಾರ ಬಿಡುಗಡೆ ಮಾಡಿದೆ. ಇದು ತನ್ನ ಅತ್ಯಂತ ಪರಿಸರ ಸ್ನೇಹಿ ಸ್ಮಾರ್ಟ್‌ಫೋನ್ ಎಂದು ನೋಕಿಯಾ ಹೇಳಿಕೊಂಡಿದೆ.

ಶೇ 100 ರಷ್ಟು ಮರುಬಳಕೆಯಾಗಿರುವ ಅಲ್ಯುಮಿನಿಯಂ ಹಾಗೂ ಮೊಬೈಲ್‌ನ ಹಿಂಬದಿ ಶೇ 65 ರಷ್ಟು ಮರುಬಳಕೆಯಾದಂತಹ ಪ್ಲಾಸ್ಟಿಕ್ ಅನ್ನು ಬಳಕೆ ಮಾಡಲಾಗಿದೆ. ಆದರೂ ಮೊಬೈಲ್‌ನ ಕಾರ್ಯಕ್ಷಮತೆ ಬಗ್ಗೆ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ಕಂಪನಿ ಹೇಳಿದೆ.

ಈ ಫೋನ್ ಅದ್ಭುತ ಫೋಟೋಗ್ರಫಿ ಅನುಭವ ನೀಡಲಿದೆ. 6.43 ಇಂಚಿನ ಡಿಸ್ಪ್ಲೆ ಇದ್ದು, ಸುಲಭವಾಗಿ ಹ್ಯಾಂಡಲ್ ಮಾಡಬಹುದಾಗಿದೆ. ಜತೆಗೆ ಅಲ್ಟ್ರಾ ಟಫ್ ಕೋರಿಂಗ್ ಗೊರಿಗ್ಲಾ ಗ್ಲಾಸ್ ಕೂಡ ಇದೆ.

ಫಿನ್‌ಲ್ಯಾಂಡ್‌ನಲ್ಲಿ ಮೊಬೈಲ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಉತ್ಪಾದನೆಯಲ್ಲಿ ಕಡಿಮೆ ಪ್ಲಾಸ್ಟಿಕ್ ಹಾಗೂ ರಾಸಾಯನಿಕಗಳನ್ನು ಬಳಕೆ ಮಾಡಲಾಗಿದೆ. ಶೇ 100 ರಷ್ಟು FSC ಪ್ರಮಾಣಿಕೃತ ಹಾಗೂ ಶೇ 94 ರಷ್ಟು ಮರುಬಳಕೆಯಾದಂತಹ ಪ್ಲಾಸ್ಟಿಕ್ ಬಳಸಿ ಬಾಕ್ಸ್ ತಯಾರಿಸಲಾಗಿದೆ.

3 ವರ್ಷದ ವ್ಯಾರಂಟಿ ಇರಲಿದ್ದು, IP67 ಧೂಳು ರಕ್ಷಣೆ ತಂತ್ರಜ್ಞಾನ ಇರಲಿದೆ. ವಾಟರ್ ಪ್ರೂಫ್ ಬಾಡಿ ಇದರ ಇನ್ನೊಂದು ವಿಶೇಷ.

50 ಎಂಪಿ ಹಿಂಬದಿ ಹಾಗೂ 13 ಎಂಪಿ ಫ್ರಂಟ್ ಕ್ಯಾಮೆರಾ ಇದೆ. OIS ತಂತ್ರಜ್ಞಾನ ಇದ್ದು, ಅದ್ಭುತ ಫೋಟೋಗ್ರಾಫಿ ಅನುಭವ ಪಡೆಯಬಹುದಾಗಿದೆ. ಅಲ್ಟ್ರಾವೈಡ್, ಡಾರ್ಕ್ ವಿಷನ್ ಸೌಲಭ್ಯದೊಂದಿಗೆ ನೈಟ್ ಮೋಡ್ 2.0, ಟ್ರೈಪಾಡ್ ಮೋಡ್, ನೈಟ್ ಸೆಲ್ಫಿ ವ್ಯವಸ್ಥೆ ಕೂಡ ಇದೆ. ಕ್ಯಾಮೆರಾ ಕೂಡ ಕೊರೊನಿಂಗ್ ಗೊರಿಲ್ಲಾ ಗ್ಲಾಸ್‌ನಿಂದ ಸುತ್ತುವರಿಯಲ್ಪಟ್ಟಿದೆ.

ಡಿಸ್ಪ್ಲೆಯಲ್ಲೇ ಫಿಂಗರ್ ಪ್ರಿಂಟ್ ತಂತ್ರಜ್ಞಾನವಿದೆ. 33W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇದ್ದು, ಕ್ವಾಲ್ಕಂ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಹೊಂದಿದೆ.

ಅಮೇಜಾನ್ ಹಾಗೂ Nokia.com ಮಾತ್ರ ಫೆಬ್ರವರಿ 20 ರಿಂದ ಲಭ್ಯವಿರಲಿದೆ. ನೀಲಿ ಹಾಗೂ ಬಿಳಿ ಬಣ್ಣದಲ್ಲಿ ಮೊಬೈಲ್ ಲಭ್ಯವಿದ್ದು, 8/256 ಮೆಮೊರಿಯ ಫೋನ್ ದರ ₹ 48,999 ಇದೆ. ಆರಂಭಿಕ ಆಫರ್ ಆಗಿ, ₹ 5799 ಮೌಲ್ಯದ ಏರ್‌ಬಡ್ ಹಾಗೂ 33W ನ ಫಾಸ್ಟ್ ಚಾರ್ಜರ್ ಲಭ್ಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.