ಬೆಂಗಳೂರು: ದೇಶದ ಫೀಚರ್ ಫೋನ್ ಮಾರುಕಟ್ಟೆಯಲ್ಲಿ ನೋಕಿಯಾ ತನ್ನದೇ ಆದ ಛಾಪು ಮೂಡಿಸಿದೆ.

ಎಚ್‌ಎಂಡಿ ಗ್ಲೋಬಲ್ ಒಡೆತನದ ನೋಕಿಯಾ ಈಗ 2660 ಫ್ಲಿಪ್ ಫೋನ್ ಅನ್ನು ಇನ್ನೆರಡು ಆಕರ್ಷಕ ಬಣ್ಣಗಳಲ್ಲಿ ಪರಿಚಯಿಸಿದೆ.

ನೂತನ ಬಣ್ಣಗಳು:

ಪಾಪ್ ಪಿಂಕ್ ಮತ್ತು ಲಷ್ ಗ್ರೀನ್.

ದೇಶದಲ್ಲಿ ಆಧುನಿಕ ಮಡಚುವ ಫೀಚರ್ ಫೋನ್‌ಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಬಣ್ಣಗಳ ಆಯ್ಕೆಯನ್ನು ನೋಕಿಯಾ ನೀಡಿದೆ.

1998ರಲ್ಲಿ ನೋಕಿಯಾದ ಚೊಚ್ಚಲ ಫ್ಲಿಪ್ ಫೋನ್ ಬಿಡುಗಡೆಯಾಗಿತ್ತು. 2007ರಲ್ಲಿ ನೋಕಿಯಾ 2660 ಫ್ಲಿಪ್ ಫೋನ್ ಮಾರುಕಟ್ಟೆಗೆ ಲಗ್ಗೆಯಿಟ್ಟಿತ್ತು.

ಗ್ರಾಹಕರು ಸ್ಕ್ರೀನ್ ಸಮಯವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ನೋಕಿಯಾ ಫ್ಲಿಪ್ ಫೋನ್ ಉತ್ತಮ ಆಯ್ಕೆಯಾಗಲಿದೆ ಎಂದು ಸಂಸ್ಥೆಯು ಹೇಳಿದೆ.

ಆಕರ್ಷಕ ವಿನ್ಯಾಸ, 2.8 ಇಂಚುಗಳ ಡಿಸ್‌ಪ್ಲೇ, 1450 mAh ಬ್ಯಾಟರಿ, ರಿಯರ್ ಕ್ಯಾಮೆರಾ (lo-fi Y2K style pictures), ಎಮರ್ಜನ್ಸಿ ಬಟನ್ ಸೌಲಭ್ಯವನ್ನು ಒಳಗೊಂಡಿದೆ.

ಪರಿಷ್ಕೃತ ನೋಕಿಯಾ 2660 ಮಡಚುವ ಫೀಚರ್ ಫೋನ್ ಮಾರಾಟವು ಅಮೇಜಾನ್ ಹಾಗೂ ನೋಕಿಯಾ ವೆಬ್‌ಸೈಟ್‌ನಲ್ಲಿ ಆಗಸ್ಟ್ 24ರಂದು 12 ಗಂಟೆಗೆ ಆರಂಭವಾಗಲಿದೆ. ಇದರ ಬೆಲೆ ಇನ್ನಷ್ಟೇ ತಿಳಿದುಬರಬೇಕಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ನೋಕಿಯಾ 2660 ಫ್ಲಿಪ್ ಫೋನ್ ಬೆಲೆ ₹4,699 ಆಗಿದ್ದು, ಕಪ್ಪು, ಕೆಂಪು ಹಾಗೂ ನೀಲಿ ಬಣ್ಣಗಳಲ್ಲಿ ಲಭ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.