ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Jio Network Issue | ಜಿಯೊ ಸೇವೆ ವ್ಯತ್ಯಯ: ಬಳಕೆದಾರರ ಪರದಾಟ

Published : 17 ಸೆಪ್ಟೆಂಬರ್ 2024, 9:28 IST
Last Updated : 17 ಸೆಪ್ಟೆಂಬರ್ 2024, 9:28 IST
ಫಾಲೋ ಮಾಡಿ
Comments

ಬೆಂಗಳೂರು: ದತ್ತಾಂಶ ಕೇಂದ್ರದಲ್ಲಿ ಮಂಗಳವಾರ ಬೆಳಿಗ್ಗೆ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ದೇಶದಾದ್ಯಂತ ರಿಲಯನ್ಸ್‌ ಜಿಯೊ ಬಳಕೆದಾರರು ನೆಟ್‌ವರ್ಕ್‌ ಸಿಗದೆ ಸಮಸ್ಯೆ ಅನುಭವಿಸಿದರು.

ಕಂಪನಿಯ ಬಳಕೆದಾರರ ಪೈಕಿ ಅರ್ಧಕ್ಕೂ ಹೆಚ್ಚು ಗ್ರಾಹಕರು ಮೊಬೈಲ್‌ ನೆಟ್‌ವರ್ಕ್‌, ಇಂಟರ್‌ನೆಟ್‌, ಬ್ರಾಡ್‌ಬ್ಯಾಂಡ್‌ ಸೇವೆಯಲ್ಲಿ ವ್ಯತ್ಯಯ ಅನುಭವಿಸಿದ್ದಾರೆ. 10 ಸಾವಿರಕ್ಕೂ ಹೆಚ್ಚು ಬಳಕೆದಾರರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. 

‘ಕೆಲವು ತಾಂತ್ರಿಕ ಅಡಚಣೆಯಿಂದ ಗ್ರಾಹಕರು ತೊಂದರೆ ಅನುಭವಿಸಿದ್ದಾರೆ. ಇದಕ್ಕೆ ಬಳಕೆದಾರರಲ್ಲಿ ಕ್ಷಮೆಯಾಚಿಸುತ್ತೇವೆ. ಸಮಸ್ಯೆಯನ್ನು ಬಗೆಹರಿಸಲಾಗಿದೆ’ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.

‘ನಮ್ಮ ನೆಟ್‌ವರ್ಕ್‌ನಲ್ಲಿ ಇಂತಹ ಯಾವುದೇ ಅಡಚಣೆ ತಲೆದೋರಿಲ್ಲ’ ಎಂದು ಭಾರ್ತಿ ಏರ್‌ಟೆಲ್‌ ಮತ್ತು ವೊಡಾಫೋನ್‌ ಐಡಿಯಾ ಕಂಪನಿ ತಿಳಿಸಿವೆ.

ಜೂನ್‌ ಅಂತ್ಯದ ವೇಳೆಗೆ ಜಿಯೊ ಬಳಕೆದಾರರ ಸಂಖ್ಯೆ 48.9 ಕೋಟಿ ಇದೆ. ಭಾರ್ತಿ ಏರ್‌ಟೆಲ್‌ 28 ಕೋಟಿ ಮತ್ತು ವೊಡಾಫೋನ್‌ ಐಡಿಯಾದ 12.8 ಕೋಟಿ ಬಳಕೆದಾರರಿದ್ದಾರೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್‌) ಅಂಕಿ–ಅಂಶಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT