ಬೆಂಗಳೂರು: ಜನಪ್ರಿಯ ಮೆಸೆಜಿಂಗ್ ಫ್ಲ್ಯಾಟ್‌ಫಾರ್ಮ್ ವಾಟ್ಸ್‌ಆ್ಯಪ್ ತನ್ನ ಬಳಕೆದಾರರಿಗೆ ಹೊಸ ಹೊಸ ಅಪ್ಡೇಟ್‌ಗಳನ್ನು ಕೊಡುವುದರಲ್ಲಿ ಸದಾ ಮುಂದು.

ಆದರೆ, ಹೊಸ ಅಪ್ಡೇಟ್‌ಗಳು ಆ್ಯಂಡ್ರಾಯ್ಡ್ ಇತ್ತೀಚಿನ ವರ್ಷನ್‌ಗಳಿಗೆ (ಆವೃತ್ತಿ) ಹೆಚ್ಚು ಅನ್ವಯವಾಗುತ್ತಿದ್ದವು. ಹಾಗಾಗಿ ಇದೇ ಅಕ್ಟೋಬರ್ 24ರಿಂದ ಹಳೇ ಆ್ಯಂಡ್ರಾಯ್ಡ್ ವರ್ಷನ್‌ಗಳಲ್ಲಿ ವಾಟ್ಸ್‌ಆ್ಯಪ್ ಕೆಲಸ ಮಾಡುವುದಿಲ್ಲ.

ಈ ಮಾಹಿತಿಯನ್ನು ವಾಟ್ಸ್‌ಆ್ಯಪ್ ತನ್ನ FAQ ವಿಭಾಗದಲ್ಲಿ ಸ್ಪಷ್ಟಪಡಿಸಿದ್ದು, ಆ್ಯಂಡ್ರಾಯ್ಡ್ 5.0 ಮತ್ತು ಅದರ ಹಿಂದಿನ ಆವೃತ್ತಿಗಳಲ್ಲಿ ವಾಟ್ಸ್‌ಆ್ಯಪ್ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದೆ. ಬಳಕೆದಾರರು ತಮ್ಮ ಆ್ಯಂಡ್ರಾಯ್ಡ್ ಮೊಬೈಲ್ ವರ್ಷನ್ ಅನ್ನು ಇತ್ತೀಚಿನದ್ದನ್ನು ಹೊಂದುವಂತೆ ಮನವಿ ಮಾಡಿದೆ.

ಅಂದರೆ Android Lollipop ಮತ್ತು ಅದರ ಮೇಲಿನ ಆವೃತ್ತಿಗಳಲ್ಲಿ ಮಾತ್ರ ಇನ್ಮುಂದೆ ವಾಟ್ಸ್‌ಆ್ಯಪ್ ಕೆಲಸ ಮಾಡಲಿದೆ. ಯಾರಾದರೂ 5.0 ಹಿಂದಿನ ಆವೃತ್ತಿಗಳನ್ನು ಹೊಂದಿದ್ದರೆ ಅವರು ಮೊಬೈಲ್ ಬದಲಾಯಿಸುವುದು ಅಥವಾ ಆ್ಯಂಡ್ರಾಯ್ಡ್ ಆವೃತ್ತಿಯನ್ನು ಅಪ್ಡೇಟ್ ಮಾಡಿಕೊಳ್ಳುವುದು ಉತ್ತಮ.

ಹಳೇ ಆ್ಯಂಡ್ರಾಯ್ಡ್ ಆವೃತ್ತಿಗಳಲ್ಲಿ ಖಾಸಗಿತನ ಸುರಕ್ಷತೆ ಅಷ್ಟೊಂದು ಉತ್ತಮ ಆಗಿರಲಿಲ್ಲ ಹಾಗೂ ವಾಟ್ಸ್‌ಆ್ಯಪ್‌ನ ಇತ್ತೀಚಿನ ಅಪ್ಡೇಟ್‌ಗಳು ಹಳೆಯ ಆವೃತ್ತಿಗಳಲ್ಲಿ ಕೆಲಸ ಮಾಡುತ್ತಿರಲಿಲ್ಲವಾಗಿದ್ದರಿಂದ ವಾಟ್ಸ್‌ಆ್ಯಪ್ ಈ ಕ್ರಮ ಕೈಗೊಂಡಿದೆ.

ಚೆಕ್ ಮಾಡುವುದು ಹೇಗೆ?

ನೀವು ಒಂದು ವೇಳೆ ಇತ್ತೀಚಿನ ಆ್ಯಂಡ್ರಾಯ್ಡ್ ಮೊಬೈಲ್ ಹೊಂದಿಲ್ಲವಾದರೆ ನಿಮ್ಮ ಮೊಬೈಲ್‌ನಲ್ಲಿ ನಿಮ್ಮ ಆಂಡ್ರಾಯ್ಡ್ ವರ್ಷನ್ ಯಾವುದು ಎಂಬುದನ್ನು ಹೀಗೆ ಪರಿಶೀಲನೆ ಮಾಡಿಕೊಳ್ಳಿ

Settings-About Phone-Software info

ಸದ್ಯ ಆ್ಯಂಡ್ರಾಯ್ಡ್‌ನ 15 ನೇ ಆವೃತ್ತಿವರೆಗೆ ಕಾರ್ಯಾಚರಣೆ ಇದೆ. 5.0 ಒಳಗಿನವರು ಅಕ್ಟೋಬರ್ 24ರೊಳಗೆ ಬದಲಾಯಿಸಿಕೊಳ್ಳಲು ಸಮಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.