ನವದೆಹಲಿ: ಮೆಟಾ ಒಡೆತನದ ಜನಪ್ರಿಯ ಮೆಸೆಂಜರ್ ವಾಟ್ಸಆ್ಯಪ್ನಲ್ಲಿ ಇನ್ಮುಂದೆ ಶಾರ್ಟ್ ವಿಡಿಯೊ ರೂಪದ ಸಂದೇಶಗಳನ್ನು ಕಳಿಸಬಹುದಾಗಿದೆ.

ಹೌದು, ಸ್ವತಃ ಈ ವಿಷಯವನ್ನು ಮೆಟಾ ಮುಖ್ಯಸ್ಥ ಹಾಗೂ ಸಿಇಒ ಮಾರ್ಕ್ ಜುಕರ್ಬರ್ಗ್ ತಿಳಿಸಿದ್ದಾರೆ.

ಈ ಹೊಸ ಫೀಚರ್ ಮೂಲಕ ಶಾರ್ಟ್ ವಿಡಿಯೊ ಸಂದೇಶಗಳನ್ನು ತ್ವರಿತವಾಗಿ ಹಾಗೂ ಸುಲಭವಾಗಿ ಕಳಿಸಬಹುದು ಎನ್ನಲಾಗಿದೆ.

ಗರಿಷ್ಠ 60 ಸೆಕೆಂಡುಗಳ ವಿಡಿಯೊ ಸಂದೇಶ ಕಳಿಸಬಹುದಾಗಿದೆ. ಸದ್ಯ ವಾಟ್ಸ್ಆ್ಯಪ್ನಲ್ಲಿ ಸಂದೇಶ ಕಳಿಸುವಾಗ ಕಂಡು ಬರುವ ವಿಡಿಯೊ ಬಟನ್ಗಿಂತ ಭಿನ್ನವಾದ ಆಯ್ಕೆ ಇದರಲ್ಲಿ ಲಭ್ಯವಾಗಲಿದೆ. ಇವಾಗಿನ ವಿಡಿಯೊ ಆಯ್ಕೆಯಲ್ಲಿ ಕೇವಲ ವಿಡಿಯೊ ಮಾತ್ರ ಕಳಿಸಬಹುದು. ಆದರೆ, ಹೊಸದಾಗಿ ಬರುತ್ತಿರುವ ಶಾರ್ಟ್ ವಿಡಿಯೊ ಸಂದೇಶದಲ್ಲಿ ರೀಲ್ಸ್ ರೀತಿ ಸಾಕಷ್ಟು ಆಯ್ಕೆಗಳನ್ನು ಅದರಲ್ಲಿ ತೋರಿಸಲಿದೆ. ಫನ್ ಎಲಿಮೆಂಟ್ಗಳನ್ನು ಸೇರಿಸಲಾಗಿದೆ ಎಂದು ಮಾರ್ಕ್ ಜುಕರ್ಬರ್ಗ್ ತಿಳಿಸಿದ್ದಾರೆ.

ಜನ್ಮದಿನ, ಇತರ ಶುಭಾಶಯಗಳು, ಸಂತೋಷದ ವಿಷಯಗಳು, ಹೊಸ ಸುದ್ದಿಗಳನ್ನು ಈ ಶಾರ್ಟ್ ವಿಡಿಯೊ ಸಂದೇಶದ ಮೂಲಕ ಕಳಿಸಬಹುದಾಗಿದೆ.

ಈ ಹೊಸ ಫೀಚರ್ ಮುಂದಿನ ವಾರಗಳಲ್ಲಿ ಐಒಎಸ್ ಹಾಗೂ ಆಂಡ್ರಾಯ್ಡ್ ಡಿವೈಸ್ಗಳಲ್ಲಿ ಲಭ್ಯವಾಗಲಿದೆ ಎಂದು ಅವರು ಜುಕರ್ಬರ್ಗ್ ತಮ್ಮ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.