ಒನ್ಪ್ಲಸ್ ಕಂಪನಿಯು ನೆಕ್ಬ್ಯಾಂಡ್ ವಿಭಾಗದಲ್ಲಿ ಈಚೆಗೆ ‘ಒನ್ಪ್ಲಸ್ ಬುಲೆಟ್ಸ್ ವಯರ್ಲೆಸ್ ಜೆಡ್2 ಎಎನ್ಸಿ’ (OnePlus Bullets Wireless Z2 ANC) ಬಿಡುಗಡೆ ಮಾಡಿದೆ. ಮನರಂಜನೆ, ಕಾಲಿಂಗ್ ಆಯ್ಕೆಗಳಿಗೆ ಉತ್ತಮ ನೆಕ್ಬ್ಯಾಂಡ್ ಇದಾಗಿದೆ.

ಬಡ್ಸ್ಗಳನ್ನು ಕಿವಿಯಲ್ಲಿಯೇ ಇಟ್ಟುಕೊಂಡಿರುವುದು ರಗಳೆ ಎನ್ನುವವರು, ಎಲ್ಲಾದರೂ ಬಿದ್ದು ಹೋಗಬಹುದು ಎನ್ನುವ ಆತಂಕ ಇರುವವರು ಸಾಮಾನ್ಯವಾಗಿ ನೆಕ್ಬ್ಯಾಂಡ್ ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲಿಯೂ ಒನ್ಪ್ಲಸ್ ಬ್ರ್ಯಾಂಡ್ ಇಷ್ಟಪಡುವವರಿಗೆ ಈ ನೆಕ್ಬ್ಯಾಂಡ್ ಹಿಡಿಸಲಿದೆ.

ಬ್ಲುಟೂತ್ 5.2 ಆವೃತ್ತಿ ಹೊಂದಿದೆ. ಮೊಬೈಲ್ ಜೊತೆ ಸಂಪರ್ಕಿಸುವುದು ಸುಲಭ. ಮೊಬೈಲ್ ಬ್ಲುಟೂತ್ ಆನ್ ಮಾಡಿದರೆ OnePlus Bullets Wireless Z2 ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಸಂಪರ್ಕ ಸಾಧ್ಯವಾಗುತ್ತದೆ. ಪವರ್ ಆನ್ ಬಟನ್ ಒಳಗೊಂಡು ಒಟ್ಟು 4 ಬಟನ್ಗಳಿವೆ. + ಬಟನ್ ವಾಲ್ಯುಮ್ ಹೆಚ್ಚಿಸಲು ಅಥವಾ ಪ್ಲೇ/ಪಾಸ್ ಮಾಡಲು, – ಬಟನ್ ವಾಲ್ಯುಮ್ ಕಡಿಮೆ ಮಾಡಲು ನೆರವಾಗುತ್ತದೆ. ಮಧ್ಯದ ಬಟನ್ ಒತ್ತಿದರೆ ಪ್ಲೇ/ಪಾಜ್ ಎರಡು/ಮೂರು ಬಾರಿ ಒತ್ತಿದರೆ ಸ್ಕಿಪ್ ಮತ್ತು ಹೋಲ್ಡ್ ಮಾಡಿದರೆ ಎಎನ್ಸಿ ಮೋಡ್ ಸಕ್ರಿಯವಾಗುತ್ತದೆ.

ಒನ್ಪ್ಲಸ್ ಮೊಬೈಲ್ ಜೊತೆಗೆ ಈ ನೆಕ್ಬ್ಯಾಂಡ್ ಬಳಸುವಾಗ ಈಕ್ವಿಲೈಸರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಮೊಬೈಲ್ನಲ್ಲಿಯೇ ನಿರ್ವಹಿಸಬಹುದು. ಬೇರೆ ಬ್ರ್ಯಾಂಡ್ನ ಮೊಬೈಲ್ ಬಳಸುತ್ತಿದ್ದರೆ ಆಗ ‘ಹೇ ಮೆಲೊಡಿ’ ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ.

ಸಂಗೀತ ಕೇಳುವಾಗ, ಕರೆ ಮಾಡುವಾಗ ಹೊರಗಿನ ಶಬ್ದವನ್ನು ತಡೆದು ಆಡಿಯೊ ಸ್ಪಷ್ಟವಾಗಿ ಕೇಳುವಂತೆ ಮಾಡಲು ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ (ಎಎನ್ಸಿ) ತಂತ್ರಜ್ಞಾನ ಇದೆ. ಸಂಗೀತ ಆಲಿಸುವಾಗ ಎಎನ್ಸಿ ಪರಿಣಾಮಕಾರಿ ಅನ್ನಿಸಿತು. ಆದರೆ, ಸಾರ್ವಜನಿಕ ಸ್ಥಳದಲ್ಲಿ ಕಾಲ್ ಮಾಡುವಾಗ ನಮ್ಮ ಧ್ವನಿಯು ಫೋನಿನ ಇನ್ನೊಂದು ತುದಿಯಲ್ಲಿ ಇರುವವರಿಗೆ ಅಷ್ಟೇನು ಸ್ಪಷ್ಟವಾಗಿ ಕೇಳಿಸಲಿಲ್ಲ. ಈ ನಿಟ್ಟಿನಲ್ಲಿ ಸುಧಾರಣೆ ಅಗತ್ಯ.

ಬ್ಯಾಟರಿ ಬಾಳಿಕೆ ಚೆನ್ನಾಗಿದೆ: ಅಲ್ಟ್ರಾ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇದ್ದು, 10 ನಿಮಿಷ ಚಾರ್ಜ್ ಮಾಡಿದರೆ 20ಗಂಟೆ ಬಳಸಬಹುದು. ಒಮ್ಮೆ ಪೂರ್ತಿ ಚಾರ್ಜ್ ಆದರೆ, 48 ಗಂಟೆ ಬಳಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಎಎನ್ಸಿ ಆನ್ ಆಗಿದ್ದರೆ 20 ಗಂಟೆ, ಎಎನ್ಸಿ ಆಫ್ ಆಗಿದ್ದರೆ 28 ಗಂಟೆ ಬ್ಯಾಟರಿ ಬಾಳಿಕೆ ಬರುತ್ತದೆ. ಫೋನ್ ಕಾಲ್ ಮಾಡಲು ಮಾತ್ರ ಬಳಸಿದರೆ ಶೇ 50ರಷ್ಟು ವಾಲ್ಯುಂನಲ್ಲಿ ಎಎನ್ಸಿ ಆನ್ ಇದ್ದಾಗ 13 ಗಂಟೆ ಮತ್ತು ಎಎನ್ಸಿ ಆಫ್ ಆಗಿದ್ದಾಗ 16ಗಂಟೆ ಬಳಸಬಹುದು. ಮನರಂಜನೆ ಮತ್ತು ಫೋನ್ ಕಾಲ್ ಮಾಡುವ ಎರಡೂ ಆಯ್ಕೆಗಳನ್ನು ಬಳಸಿದರೂ ಒಂದು ವಾರ ಬಳಸಲಂತೂ ಯಾವುದೇ ಸಮಸ್ಯೆ ಇಲ್ಲ.

ಸಣ್ಣ, ಮಧ್ಯಮ ಮತ್ತು ದೊಡ್ಡ... ಹೀಗೆ ಮೂರು ಗಾತ್ರದ ಇಯರ್ಟಿಪ್ಗಳನ್ನು ನೀಡಲಾಗಿದೆ. ಬಡ್ಸ್ಗಳಲ್ಲಿ ಮ್ಯಾಗ್ನೆಟಿಕ್ ಸ್ಟ್ರಿಪ್ ಇರುವುದರಿಂದ ಬಳಕೆ ಇಲ್ಲದಿರುವಾಗ ಬಡ್ಸ್ಗಳನ್ನು ಒಂದಕ್ಕೊಂದು ಸಂಪರ್ಕಿಸಿದರೆ ಆಫ್ ಆಗುತ್ತದೆ. ಕಂಪನಿಯ ಜಾಲತಾಣದಲ್ಲಿ ಇದರ ಬೆಲೆ ₹2,499 ಇದೆ. ಆದರೆ ಶೇ 20ರಷ್ಟು ರಿಯಾಯಿತಿ ನೀಡವುದುರಿಂದ ₹1,999ಕ್ಕೆ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.