ಎಲ್ಲವೂ ಡಿಜಿಟಲ್ ಆಗುತ್ತಿರುವ ಈ ಕಾಲದಲ್ಲಿ ಆಡಿಯೋ (ಧ್ವನಿ ಕ್ಷೇತ್ರವೂ ಸಾಕಷ್ಟು ಆಧುನಿಕತೆಯನ್ನು ತನ್ನದಾಗಿಸಿಕೊಂಡಿದೆ. ಇವುಗಳಲ್ಲಿ ಟ್ರೂ ವಯರ್ಲೆಸ್ (TW) ಇಯರ್ಬಡ್ಸ್ ಈಗಿನ ಟ್ರೆಂಡ್. ಈ ಕಿವಿಯೊಳಗೆ ಕೂರುವ ಇಯರ್ಬಡ್ಸ್ ಜೊತೆಗೆ, ವೈರ್ ಇರುವ ಇಯರ್ಫೋನ್ ಅಥವಾ ಹೆಡ್ಫೋನ್ಸ್ ಅಥವಾ ವೈರ್ಲೆಸ್ ನೆಕ್ಬ್ಯಾಂಡ್ಸ್ - ನಾನಾ ರೂಪಗಳು ಮಾರುಕಟ್ಟೆಯಲ್ಲಿವೆ. ಇವುಗಳಲ್ಲಿ ಸೋನಿ ಸಂಸ್ಥೆಯ WI-C100 ಎಂಬ ನೆಕ್ಬ್ಯಾಂಡ್ನಂತೆಯೇ ಕಾಣಿಸುವ ವೈರ್ಲೆಸ್ ಇಯರ್ಫೋನ್ ಇತ್ತೀಚೆಗೆ ಬಿಡುಗಡೆಯಾಗಿದೆ. Sony WI-100 ಜೇಬಿಗೂ, ಕುತ್ತಿಗೆಗೂ ಹಗುರವಾಗಿ ಗಮನ ಸೆಳೆಯುತ್ತದೆ. ಅದನ್ನು ಎರಡು ವಾರ ಬಳಸಿ ನೋಡಿದಾಗಿನ ಅನುಭವಗಳು ಇಲ್ಲಿವೆ.

ವಿನ್ಯಾಸ
ತೀರಾ ಹಗುರ ಇರುವ ಈ ಸೋನಿ ಇಯರ್ಫೋನ್, ನೋಡಲು ವೈರ್ ಇರುವ ನೆಕ್ ಬ್ಯಾಂಡ್ನಂತೆ ಗೋಚರಿಸುತ್ತದೆಯಾದರೂ, ಕತ್ತಿನ ಸುತ್ತ ಸರಿಯಾಗಿ ಕೂರಿಸಲು ಅನುಕೂಲಕರ ವಿನ್ಯಾಸದಿಂದಾಗಿ ಇದನ್ನು ನೆಕ್ ಬ್ಯಾಂಡ್ ಅಂತ ಕರೆಯಬಹುದು. ವಿಶೇಷವೆಂದರೆ, ಇದನ್ನು ಜೇಬಿನಲ್ಲಿ ಮಡಚಿಟ್ಟುಕೊಂಡು ಕೂಡ ಒಯ್ಯಬಹುದು. ನೋಡಲು ವಿಶೇಷ ಫ್ಯಾನ್ಸಿ ನೋಟವೇನೂ ಇಲ್ಲ. ಆದರೆ, ಸಿಲಿಕಾನ್ ಹೆಡ್ ಇರುವ ಇಯರ್ಬಡ್ಗಳು, ಕಿವಿಯೊಳಗೆ ಸರಿಯಾಗಿ ಕೂರುತ್ತವೆ. ಕಿವಿಯ ಗಾತ್ರಕ್ಕೆ ತಕ್ಕಂತೆ ಬಳಸಬಹುದಾದ ಹೆಚ್ಚುವರಿ ಇಯರ್-ಹುಕ್ಸ್ ಕೂಡ ಬಾಕ್ಸ್ನಲ್ಲಿ ಒದಗಿಸಲಾಗಿದೆ. ಆದರೆ, ಬಳಕೆಯಿಲ್ಲದಿರುವಾಗ ಆಫ್ ಆಗುವಂತೆ, ಅಯಸ್ಕಾಂತೀಯವಾಗಿ ಸಂಪರ್ಕವಾಗುವ ಬಡ್ಸ್ ಇದ್ದರೆ ಸೂಕ್ತವೆನಿಸುತ್ತಿತ್ತು ಎಂಬ ಭಾವನೆ ಬಂದಿದ್ದು ಸುಳ್ಳಲ್ಲ. ಜೊತೆಗೆ, ಮೂರು ಬಟನ್ಗಳಿರುವ ಕಂಟ್ರೋಲರ್ ಇದೆ.

ಬಟನ್ಗಳ ಕಾರ್ಯನಿರ್ವಹಣೆ
ಪ್ರಮುಖವಾಗಿ ಮೂರು ಬಟನ್ಗಳಿವೆ. ಇದರಲ್ಲಿ ವಾಲ್ಯೂಮ್ '+' ಹಾಗೂ ವಾಲ್ಯೂಮ್ '-' ಬಟನ್ ಅನ್ನು ಒಮ್ಮೆ ಒತ್ತಿದರೆ ಅನುಕ್ರಮವಾಗಿ ಧ್ವನಿ ಹೆಚ್ಚು ಅಥವಾ ಕಡಿಮೆ ಮಾಡಬಹುದು. ಅದನ್ನೇ ಒತ್ತಿಹಿಡಿದುಕೊಂಡರೆ, ಮುಂದಿನ ಅಥವಾ ಹಿಂದಿನ ಹಾಡನ್ನು (ಪ್ಲೇ ಆಗುತ್ತಿದ್ದರೆ, ಅದರ ಆರಂಭಕ್ಕೆ ಅಥವಾ ಅಂತ್ಯಕ್ಕೆ) ಪ್ಲೇ ಮಾಡಬಹುದು. ಪವರ್ ಬಟನ್ ಅನ್ನು ಒತ್ತಿಹಿಡಿದುಕೊಂಡರೆ ಆನ್/ಆಫ್ ಹಾಗೂ ಒಮ್ಮೆ ಒತ್ತಿದರೆ ಪ್ಲೇ/ಪಾಸ್ ಬಟನ್ ಆಗಿ ಕೆಲಸ ಮಾಡುತ್ತದೆ. ಎರಡು ಬಾರಿ ಒತ್ತಿದರೆ, ಧ್ವನಿ ಸಹಾಯಕವಾಗಿ (ಆಂಡ್ರಾಯ್ಡ್ನ ಗೂಗಲ್ ಅಸಿಸ್ಟೆಂಟ್, ಆ್ಯಪಲ್ ಸಿರಿ ಮತ್ತು ಸ್ಯಾಮ್ಸಂಗ್ ಬಿಕ್ಸಿ) ಕೆಲಸ ಮಾಡುತ್ತದೆ.

ಆಡಿಯೋ ಕಾರ್ಯನಿರ್ವಹಣೆ
ಧ್ವನಿಯ ಗುಣಮಟ್ಟವು ಉತ್ತಮವಾಗಿದೆ. ಸೋನಿ ಕಂಪನಿಯ ಹೆಗ್ಗಳಿಕೆಯೇ ಅದುವೇ ಅಲ್ಲವೇ? ಸೋನಿ ಹೆಡ್ಫೋನ್ಸ್ ಕನೆಕ್ಟ್ ಎಂಬ ಆ್ಯಪ್ ಅಳವಡಿಸಿಕೊಂಡು, ಈ ನೆಕ್ಬ್ಯಾಂಡನ್ನು ಆಂಡ್ರಾಯ್ಡ್ ಫೋನ್ ಅಥವಾ ಐಫೋನ್ ಇಲ್ಲವೇ ನಮ್ಮ ವಿಂಡೋಸ್ 10, 11 ಆಧಾರಿತ ಕಂಪ್ಯೂಟರಿಗೂ ಬೆಸೆಯಬಹುದು (ಪೇರ್ ಮಾಡುವುದು). ಬ್ಲೂಟೂತ್ 5.0 ತಂತ್ರಜ್ಞಾನದ ಆಧಾರದಲ್ಲಿ ಸಾಧನಗಳಿಗೆ ಬೆಸೆದುಕೊಳ್ಳುವ ವ್ಯವಸ್ಥೆಯಿದೆ.

4ಕೆ ಗೇಮಿಂಗ್ ಪ್ರಿಯರಿಗಿಷ್ಟವಾಗುವ ಲೆನೊವೊ ಲೀಜನ್ ಸ್ಲಿಮ್ 7 ಲ್ಯಾಪ್ಟಾಪ್

ಈ ಆ್ಯಪ್ ಮೂಲಕ ಸಂಪರ್ಕಿಸಿದಾಗಲೇ, ಸಾಮಾನ್ಯ ಆಡಿಯೋ ಹಾಗೂ 360 ಡಿಗ್ರಿ ಸ್ಟೀರಿಯೋ ಆಡಿಯೋಗೆ ಇರುವ ವ್ಯತ್ಯಾಸವನ್ನು ತಿಳಿಸುವ ವ್ಯವಸ್ಥೆಯಿದೆ. ಮತ್ತು ಸ್ಮಾರ್ಟ್ ವೈಶಿಷ್ಟ್ಯಗಳನ್ನೂ ಆನಂದಿಸಬಹುದು. ಆ್ಯಪ್ ಮೂಲಕ ಈಕ್ವಲೈಜರ್ ನಿಯಂತ್ರಿಸುತ್ತಾ, ನಮಗೆ ಬೇಕಾದಂತೆ ಧ್ವನಿಯ ಮಟ್ಟವನ್ನು ಬದಲಿಸಿಕೊಳ್ಳಬಹುದಾಗಿರುವುದು ಮತ್ತೊಂದು ವಿಶೇಷ. ಉತ್ತಮ ಬೇಸ್, ಉತ್ತಮ ಟ್ರೆಬಲ್ ಧ್ವನಿಯನ್ನು ಪಾಪ್, ಕ್ಲಾಸಿಕಲ್ ಅಥವಾ ಸಿನಿಮಾ ಸಂಗೀತಕ್ಕೆ ಅನುಗುಣವಾಗಿ ಆಲಿಸಬಹುದಾಗಿದೆ. ಅದೇ ರೀತಿ ವೋಕಲ್, ಟ್ರೆಬಲ್ ಬೂಸ್ಟ್, ಬೇಸ್ ಬೂಸ್ಟ್, ಸ್ಪೀಚ್, ಮ್ಯಾನ್ಯುವಲ್ ಮತ್ತು ನಮಗೆ ಬೇಕಾದಂತೆ ಹೊಂದಿಸಿಕೊಳ್ಳಬಹುದಾದ ಮೋಡ್ಗಳಿವೆ. (ಆ್ಯಪ್ನಲ್ಲಿ ಸೆಟ್ಟಿಂಗ್ ಎಂಬ ಗಿಯರ್ ವೀಲ್ ಐಕಾನ್ ಒತ್ತಿದರೆ, ಈಕ್ವಲೈಜರ್ನಲ್ಲಿ ನಮಗೆ ಬೇಕಾದಂತೆ ಧ್ವನಿ ಹೊಂದಿಸಿಕೊಳ್ಳಬಹುದು).

ಕರೆ ಮಾಡುವ-ಸ್ವೀಕರಿಸುವ ಸಂದರ್ಭದಲ್ಲಿಯೂ ಧ್ವನಿ ಉತ್ತಮವಾಗಿ ಕೇಳಿಸುತ್ತದೆ ಅಂತ ಕರೆ ಮಾಡಿದವರೂ/ಸ್ವೀಕರಿಸಿದವರೂ ಪ್ರತಿಕ್ರಿಯಿಸಿದ್ದಾರೆ. ಅಂದರೆ, ಮೈಕ್ರೋಫೋನ್ ಚೆನ್ನಾಗಿ ಕೆಲಸ ಮಾಡುತ್ತದೆಯೆಂದಾಯಿತು. ಆದರೆ, ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ (ANC) ಇಲ್ಲದಿರುವುದರಿಂದ, ಸುತ್ತಮುತ್ತಲು ಸದ್ದುಗದ್ದಲವಿದ್ದರೆ ಆ ಧ್ವನಿ ಅತ್ತ ಕಡೆಯವರಿಗೆ ಕೇಳಿಸುತ್ತದೆ.

ನೋಕಿಯಾ ಸಿ21 ಪ್ಲಸ್: ಸ್ಲಿಮ್ ಆಗಿರುವ ಬಜೆಟ್ ಫೋನ್

ಎರಡು ಬಡ್ಗಳು ಅಯಸ್ಕಾಂತೀಯವಾಗಿ ಕೂಡಿಕೊಳ್ಳುವ ವ್ಯವಸ್ಥೆ ಇಲ್ಲದಿರುವುದರಿಂದಲೋ ಏನೋ, ಆನ್/ಆಫ್ ಮಾಡಲು ಪವರ್ ಬಟನ್ ಒಂದನ್ನೇ ಅವಲಂಬಿಸಬೇಕಾಗಿದೆ. ಪವರ್ ಹಾಗೂ ಕರೆ ಸ್ವೀಕರಿಸುವ, ನಿರಾಕರಿಸುವ (ಎರಡು ಬಾರಿ ಒತ್ತಬೇಕು), ಹಾಡು ಪ್ಲೇ ಅಥವಾ ನಿಲ್ಲಿಸುವುದಕ್ಕೆ ಒಂದು ಬಟನ್ ಇದ್ದರೆ, ವಾಲ್ಯೂಮ್ ಹೆಚ್ಚು ಮತ್ತು ಕಡಿಮೆ ಮಾಡಲು ಎರಡು ಬಟನ್ಗಳಿವೆ.

ಇದರಲ್ಲಿ ಐಪಿಎಕ್ಸ್4 ರೇಟಿಂಗ್ ಇರುವುದರಿಂದ, ಸ್ವಲ್ಪಮಟ್ಟಿಗೆ ಜಲನಿರೋಧಕವಾಗಿ ಕೆಲಸ ಮಾಡುತ್ತದೆ. ಮಳೆ ಅಥವಾ ಜಿಮ್ಗೆ ಹೋದಾಗ ಅಥವಾ ವಾಕಿಂಗ್, ಜಾಗಿಂಗ್ ಮಾಡುವಾಗ ಬೆವರುವಾಗಲೂ ಧರಿಸಿದರೆ ಏನೂ ಆಗಲಾರದು. ಈಗಿನ ಅಗತ್ಯಕ್ಕೆ ತಕ್ಕಂತೆ ಇದೆ.

25 ಗಂಟೆಗಳ ನಿರಂತರವಾಗಿ ಹಾಡು ಕೇಳಬಹುದಾದಷ್ಟು ಬ್ಯಾಟರಿ ಸಾಮರ್ಥ್ಯ ಇದೆ ಎಂದು ಕಂಪನಿ ಹೇಳಿಕೊಂಡಿದೆ. ಬಳಕೆಯ ಸಂದರ್ಭದಲ್ಲಿ ಇದು ಹೌದು ಅಂತ ಅನ್ನಿಸಿದೆ. ಪೂರ್ತಿ ಚಾರ್ಜ್ ಮಾಡಿದರೆ, ಸಾಮಾನ್ಯ ಕರೆ, ಒಂದಿನಿತು ವಿಡಿಯೊ ವೀಕ್ಷಣೆ, ಒಂದೆರಡು ಗಂಟೆ ಹಾಡು ಕೇಳುವುದೇ ಮುಂತಾದವುಗಳಿಗೆ (ಅನುಕೂಲಕರ ವಾಲ್ಯೂಮ್ನಲ್ಲಿ) ಬಳಸಿದರೆ, 2-3 ದಿನದ ಬ್ಯಾಟರಿ ಚಾರ್ಜ್ಗೆ ಸಮಸ್ಯೆಯಾಗಲಿಲ್ಲ. ಶೂನ್ಯದಿಂದ ಶೇ.100ರಷ್ಟು ಚಾರ್ಜ್ ಆಗಲು ಸುಮಾರು ಮೂರು ಗಂಟೆ ಬೇಕಾಗುತ್ತದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ13-5ಜಿ: RAM ಹೆಚ್ಚಿಸಬಹುದಾದ ಬಜೆಟ್ ಫೋನ್

ಆದರೆ, ನಾವು ಪೂರ್ತಿ ಚಾರ್ಜ್ ಖಾಲಿಯಾಗಲು ಬಿಡುವುದಿಲ್ಲವಾದುದರಿಂದ, ದಿನಕ್ಕೆ ಒಂದು ಗಂಟೆಯಷ್ಟು ಚಾರ್ಜ್ ಮಾಡುತ್ತಿದ್ದರೆ ಸಮಸ್ಯೆಯಾಗುವುದಿಲ್ಲ. ಇದಕ್ಕೆ ಯುಎಸ್ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಇದೆ.

ಇದರ ಗರಿಷ್ಠ ಮಾರಾಟ ಬೆಲೆ ₹2,790 ಇದ್ದು, ಪರಿಚಯಾತ್ಮಕ ಬೆಲೆ ₹1,699.

ಒಟ್ಟಾರೆ ಹೇಗಿದೆ?
ಉತ್ತಮ ಗುಣಮಟ್ಟದ ಧ್ವನಿ, ಕನಿಷ್ಠ ಬಳಕೆಯಲ್ಲಿ ನಾಲ್ಕೈದು ದಿನ ಬರಬಹುದಾದಷ್ಟು ಬ್ಯಾಟರಿ ಚಾರ್ಜ್, ಜಲನಿರೋಧಕತೆ, ಮತ್ತು ಹಗುರ ತೂಕ - ಈ ಪ್ಲಸ್ ಪಾಯಿಂಟ್ಗಳೊಂದಿಗೆ ಅಗ್ಗದ ದರದಲ್ಲಿ ಉತ್ತಮವಾದ ಬ್ಲೂಟೂತ್ ಆಧಾರಿತ ವೈರ್ಲೆಸ್ ನೆಕ್ ಬ್ಯಾಂಡ್ ಇದು. ಜೊತೆಗೆ, ಆಂಡ್ರಾಯ್ಡ್, ಐಒಎಸ್, ವಿಂಡೋಸ್ ಸಾಧನಗಳಿಗೂ ಹೊಂದಿಕೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.