ಬೆಂಗಳೂರು: ಖಗೋಳವಿಜ್ಞಾನದ ಅತ್ಯಂತ ಅಪರೂಪದ ವಿದ್ಯಮಾನವೊಂದು ಸೋಮವಾರ ಘಟಿಸಲಿದೆ. ಗುರು ಮತ್ತು ಶನಿಗ್ರಹಗಳು 400 ವರ್ಷಗಳ ನಂತರ ಇದೇ ಮೊದಲ ಬಾರಿ ಅತ್ಯಂತ ಸಮೀಪಕ್ಕೆ ಬರಲಿವೆ. ಇದನ್ನು ಖಗೋಳ ವಿಜ್ಞಾನಿಗಳು ‘ಮಹಾ ಸಂಯೋಗ’ ಎಂದು ಕರೆದಿದ್ದಾರೆ. ಇಂತಹ ವಿದ್ಯಮಾನ ಇನ್ನೊಮ್ಮೆ ಘಟಿಸುವುದು 60 ವರ್ಷಗಳ ನಂತರ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಹೇಳಿದೆ.

ಡಿಸೆಂಬರ್ 13ರಿಂದಲೇ ಈ ಎರಡೂ ಗ್ರಹಗಳು ಸಮೀಪಕ್ಕೆ ಬರುತ್ತಿವೆ. ಪ್ರತಿದಿನ ಇವುಗಳ ನಡುವಣ ಅಂತರ ಕಡಿಮೆಯಾಗಲಿದೆ. ಡಿಸೆಂಬರ್ 21, ಅಂದರೆ ಸೋಮವಾರ ಎರಡೂ ಗ್ರಹಗಳು ಅತ್ಯಂತ ಸಮೀಪಕ್ಕೆ ಬರಲಿವೆ. ಡಿಸೆಂಬರ್ 22ರ ನಂತರ ದೂರವಾಗಲಿವೆ.

ಜಗತ್ತಿನಾದ್ಯಂತ ಆಸಕ್ತರು ಈ ವಿದ್ಯಮಾನವನ್ನು ಡಿಸೆಂಬರ್ 13ರಿಂದ ವೀಕ್ಷಿಸುತ್ತಿದ್ದಾರೆ. ಶನಿಗ್ರಹವು ಮೇಲ್ಭಾಗದಲ್ಲಿ, ಗುರು ಗ್ರಹವು ಕೆಳಭಾಗದಲ್ಲಿ ಗೋಚರಿಸಿದೆ. ಸೋಮವಾರ ರಾತ್ರಿಯಿಂದ ಗುರು ಗ್ರಹವು ಮೇಲ್ಭಾಗದಲ್ಲಿ ಮತ್ತು ಶನಿಗ್ರಹವು ಕೆಳಭಾಗದಲ್ಲಿ ಗೋಚರಿಸಲಿದೆ.

ಈ ಎರಡೂ ಗ್ರಹಗಳು ತಮ್ಮ ಕಕ್ಷೆಯಲ್ಲಿ ಸೂರ್ಯನನ್ನು ಸುತ್ತುವಾಗ, ಪರಸ್ಪರ ಹಾದುಹೋಗಲಿವೆ. ಶನಿ ಮತ್ತು ಗುರು ಗ್ರಹಗಳು ಪ್ರತಿ 20 ವರ್ಷಗಳಿಗೆ ಒಮ್ಮೆ ಹೀಗೆ ಪರಸ್ಪರ ಹಾದುಹೋಗಲಿವೆ. ಆದರೆ, ಈ ಬಾರಿ ಈ ಎರಡೂ ಗ್ರಹಗಳಿಗೆ ಅತ್ಯಂತ ಹತ್ತಿರದಲ್ಲಿ ಭೂಮಿಯೂ ಹಾದುಹೋಗಲಿದೆ. ಹೀಗಾಗಿ ಈ ವಿದ್ಯಮಾನ ಗೋಚರಿಸಲಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

1610ರಲ್ಲಿ ಗೆಲಿಲಿಯೊ ಗೆಲಿಲಿ ಅವರು ತಮ್ಮ ದೂರದರ್ಶಕದ ಮೂಲಕ ಗುರುಗ್ರಹ ಮತ್ತು ಅದರ ನಾಲ್ಕು ಚಂದ್ರಗಳನ್ನು ಗುರುತಿಸಿದ್ದರು. 1623ರಲ್ಲಿ ಮತ್ತೊಮ್ಮೆ ಗುರುಗ್ರಹವನ್ನು ವೀಕ್ಷಿಸುವಾಗ ಶನಿಗ್ರಹವು ಅತ್ಯಂತ ಸಮೀಪದಲ್ಲಿ ಗೋಚರಿಸಿತ್ತು. ಆನಂತರ ಇಲ್ಲಿಯವರೆಗೆ ಇಂತಹ ವಿದ್ಯಮಾನ ಘಟಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.